'ಪ್ರತಮ್’ ಬಿಗ್ ಬಾಸ್‍ ಸೀಸನ್-4 ವಿನ್ನರ್

Update: 2017-01-30 09:29 GMT
ಪ್ರತಮ್’ ಬಿಗ್ ಬಾಸ್‍ ಸೀಸನ್-4 ವಿನ್ನರ್
  • whatsapp icon

ಬೆಂಗಳೂರು, ಜ.30: ಭಾರೀ ಕುತೂಹಲ ಕೆರಳಿಸಿದ ಕನ್ನಡ `ಬಿಗ್ ಬಾಸ್’ ಸೀಸನ್ 4ರಲ್ಲಿ ವಿನ್ನರ್ ಆಗಿ ಪ್ರಥಮ್ ಹೊರಹೊಮ್ಮಿದ್ದು,  ರನ್ನರ್ ಅಪ್ ಆಗಿ ಕೀರ್ತಿಕುಮಾರ್ ತೃಪ್ತಿಪಟ್ಟುಕೊಂಡಿದ್ದಾರೆ.

ವಿನ್ನರ್ ಆಗಿರುವ ಪ್ರಥಮ್ ಗೌರವಧನವಾಗಿ ಸಿಗುವ 50 ಲಕ್ಷ ರೂ. ಅನ್ನು ಹುತಾತ್ಮ ಯೋಧರ ಕುಟುಂಬಕ್ಕೆ, ಆತ್ಮಹತ್ಯೆಗೆ ಶರಣಾದ ರೈತರಿಗೆ ನೀಡುವುದಾಗಿ ಬಿಗ್ ಬಾಸ್ ವೇದಿಕೆಯಲ್ಲಿ ಘೋಷಿಸಿಕೊಂಡಿದ್ದಾರೆ.

‘ಪ್ರಥಮ್” ಪ್ರಥಮ ಸ್ಥಾನ ಅಂತ ಕಿಚ್ಚ ಸುದೀಪ್ ಘೋಷಿಸುತ್ತಿದ್ದಂತೆಯೇ ಪ್ರಥಮ್ ವೇದಿಕೆಯಲ್ಲಿ ತಂದೆಯ ಒಪ್ಪಿಗೆ ಪಡೆದು 50 ಲಕ್ಷ ರೂ. ಅನ್ನು ಸಮಾಜಮುಖಿ ಕೆಲಸಕ್ಕಾಗಿ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ.

ಬಿಗ್ ಬಾಸ್ ಫೈನಲ್ ಗೆ ಆಯ್ಕೆಯಾಗಿದ್ದ ಮತ್ತೋರ್ವ ಸ್ಪರ್ಧಿ ಕೀರ್ತಿಕುಮಾರ್ ತಮಗೆ ಬಂದ ಗೌರವಧನದಲ್ಲಿ 8ನೆ ಒಂದು ಭಾಗದಷ್ಟು ಹಣವನ್ನು ಕನ್ನಡದ ಶಾಲೆಗಳ ಶ್ರೇಯೋಭಿವೃದ್ಧಿಗಾಗಿ ಬಳಸುವುದಾಗಿ ಘೋಷಿಸಿದ್ದಾರೆ.

ಫಿನಾಲೆಗೆ ಎಂಟ್ರಿ ಪಡೆದಿದ್ದ 5 ಮಂದಿಯಲ್ಲಿ ಮಾಳವಿಕಾ ಮತ್ತು ಮೋಹನ್ ಅವರು ಹೊರ ಬಂದಿದ್ದು, ಕೊನೆಯ ಹಂತದಲ್ಲಿ ರೇಖಾ, ಕೀರ್ತಿ ಕುಮಾರ್ ಹಾಗೂ ಪ್ರಥಮ್ ಉಳಿದುಕೊಂಡಿದ್ದರು.

ಬಿಗ್ ಬಾಸ್ ಅಂತಿಮ ತೀರ್ಪು ಪ್ರಕಟವಾಗುವುದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಮೀಕ್ಷೆಯಲ್ಲೂ ಪ್ರಥಮ್ ಗೆ ಅತೀ ಹೆಚ್ಚು ಜನರ ಬೆಂಬಲ ವ್ಯಕ್ತವಾಗಿತ್ತು. ಬಿಗ್ ಬಾಸ್ ನ ಅನೇಕ ಮಾಜಿ ಕಂಟೆಸ್ಟೆಂಟ್ ಗಳೂ ಪ್ರಥಮ್ ಮತ್ತು ರೇಖಾಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News