ಆನ್‌ಲೈನ್ ಮೂಲಕ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ

Update: 2017-02-02 14:36 GMT

ಬೆಂಗಳೂರು, ಫೆ. 2: ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ 2016ರ ಡಿಸೆಂಬರ್‌ನಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಹಾಲಿಗೆ 4 ರೂ.ಗಳಿಂದ 5 ರೂ.ಗಳಿಗೆ ಹೆಚ್ಚಿಸಿ ಸರಕಾರ ಆದೇಶಿಸಿದ್ದು, ಇನ್ನು ಮುಂದೆ ಹಾಲು ಪೂರೈಕೆದಾರರಿಗೆ ಪ್ರೋತ್ಸಾಹಧನ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಯಾಗಲಿದೆ.

ಆದುದರಿಂದ, ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಅನುಕೂಲಕರ. ಈ ಬಗ್ಗೆ 14 ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಹಾಲು ಪೂರೈಕೆದಾರರ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿದ ಸಂಪೂರ್ಣ ವಿವರವನ್ನು ಸಲ್ಲಿಸಲು ಸೂಚಿಸಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ.

ಇನ್ನು ಮುಂದೆ ಹಾಲು ಪ್ರೋತ್ಸಾಹಧನ ಆಧಾರ್ ಸಂಖ್ಯೆ ಜೋಡಣೆ ಹೊಂದಿರುವ ಖಾತೆಗಳಿಗೆ ಮಾತ್ರ ಜಮೆಯಾಗುತ್ತದೆ.ಆಧಾರ್ ಸಂಖ್ಯೆ ಜೋಡಣೆ ಇಲ್ಲದಿರುವ ಹಾಲು ಪೂರೈಕೆದಾರರ ಖಾತೆಗಳಿಗೆ ಈ ಪ್ರಕ್ರಿಯೆ ಆದ ನಂತರವೆ ಪ್ರೋತ್ಸಾಹಧನ ಪಾವತಿಯಾಗುವುದೆಂದು ತಿಳಿಸಲಾಗಿದೆ.

ಆದುದರಿಂದ ಆಧಾರ್ ಕಾರ್ಡ್ ಇಲ್ಲದಿರುವ ಎಲ್ಲ್ಲ ಹಾಲು ಉತ್ಪಾದಕರು ಆದಷ್ಟು ಬೇಗನೆ ಆಧಾರ್ ಕಾರ್ಡ್ ಪಡೆದು ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಸಲ್ಲಿಸಲು ಪಶುಸಂಗೋಪನಾ ಇಲಾಖೆ ತಿಳಿಸಿದೆ.8.61ಲಕ್ಷ ಫಲಾನುಭವಿಗಳಿಗೆ 2016-17ನೆ ಸಾಲಿನ ಆಯವ್ಯಯದಲ್ಲಿ 928.97 ಕೋಟಿ ರೂ. ನಿಗದಿಪಡಿಸಲಾಗಿದೆ. ಜುಲೈ 2016ರ ಅಂತ್ಯಕ್ಕೆ 405.52 ಕೋಟಿ ರೂ.ಗಳನ್ನು ಹಾಲು ಪೂರೈಕೆದಾರರಿಗೆ ಪಾವತಿಸಿದ್ದು, ಸದರಿ ಪ್ರೋತ್ಸಾಹಧನ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News