ವೈದ್ಯರ ದುರಾಸೆ: ಗರ್ಭಕೋಶ ಕಳೆದುಕೊಂಡ 2200 ದಲಿತ ಮಹಿಳೆಯರು

Update: 2017-02-07 04:27 GMT

ಬೆಂಗಳೂರು, ಫೆ.7: ವೈದ್ಯನ ದುರಾಸೆಯಿಂದಾಗಿ ಕಲಬುರಗಿಯ ದಲಿತ ಸಮುದಾಯಕ್ಕೆ ಸೇರಿದ 2200 ಲಂಬಾಣಿ ಮಹಿಳೆಯರು ತಮ್ಮ ಗರ್ಭಕೋಶ ಕಳೆದುಕೊಂಡ ದಾರುಣ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ನಾಲ್ಕು ಆಸ್ಪತ್ರೆಗಳಲ್ಲಿ, ಬಿಲ್ ಹೆಚ್ಚಿಸುವ ಸಲುವಾಗಿ ಅನಗತ್ಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎನ್ನುವುದು ದೃಢಪಟ್ಟಿದೆ.

2015ರ ಆಗಸ್ಟ್‌ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದರೂ, ಆರೋಗ್ಯ ಇಲಾಖೆ ಈ ಬಗ್ಗೆ ವಿವರವಾದ ತನಿಖೆಗೆ ಆದೇಶ ನೀಡಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ವೇಳೆ ಹಲವು ಲೋಪಗಳನ್ನು ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ. 2015ರ ಅಕ್ಟೋಬರ್‌ನಲ್ಲೇ ತನಿಖಾ ತಂಡ ಈ ಆಸ್ಪತ್ರೆಗಳ ಲೈಸನ್ಸ್ ರದ್ದುಪಡಿಸಿದ್ದರೂ, ಆಸ್ಪತ್ರೆ ಕಾರ್ಯ ನಡೆಸುತ್ತಾ ಬಂದಿದೆ. ಹೊಟ್ಟೆನೋವಿನ ಕಾರಣಕ್ಕೆ ಚಿಕಿತ್ಸೆಗೆ ಬಂದ ಬಹುತೇಕ ಎಲ್ಲ ಮಹಿಳೆಯರಿಗೆ ಗರ್ಭಕೋಶಕ್ಕೆ ಸೋಂಕು ತಗುಲಿದೆ ಎಂದು ಹೇಳಿ ಗರ್ಭಕೋಶ ಕಿತ್ತುಹಾಕಲಾಗಿದೆ ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಆಸ್ಪತ್ರೆಗಳಿಂದ ಅನ್ಯಾಯಕ್ಕೆ ಒಳಗಾದ ಸಾವಿರಾರು ಮಹಿಳೆಯರು ಹಾಗೂ ಹೋರಾಟಗಾರರು ಸೋಮವಾರ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News