ಓ .. ಮೆಣಸೇ .....!

Update: 2017-03-05 18:58 GMT

  ಯಾವುದೇ ಕಾರಣಕ್ಕೂ ರೌಡಿಸಂಗೆ ಪೊಲೀಸರು ಬೆಂಬಲ ನೀಡಬಾರದು
-ಡಾ. ಜಿ.ಪರಮೇಶ್ವರ್, ಸಚಿವ
  ಬೆಂಬಲ ನೀಡುವುದು ರಾಜಕಾರಣಿಗಳ ಹಕ್ಕೇ?
---------------------
  ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು
-ಅಮರನಾಥ ಶೆಟ್ಟಿ, ಮಾಜಿ ಸಚಿವ
  ಅಮಾನ್ಯಗೊಂಡ ನಾಣ್ಯದ ಹೇಳಿಕೆ.
---------------------
  ಉ.ಪ್ರ.ದಲ್ಲಿ ಬಿಜೆಪಿ ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವುದು ಅತೀ ದೊಡ್ಡ ಪ್ರಮಾದ
-ಉಮಾಭಾರತಿ, ಕೇಂದ್ರ ಸಚಿವ
  ಸೋಲಿಸುವುದಕ್ಕಾಗಿಯೇ ಕಣಕ್ಕಿಳಿಸುವುದಕ್ಕಿಂತ ಇಳಿಸದಿರುವುದು ವಾಸಿಯಲ್ಲವೇ?
---------------------
  ಕಾಂಗ್ರೆಸ್‌ನವರು ಏನೇ ಮಾಡಿದರೂ ಈ ಯಡಿಯೂರಪ್ಪ ಬಗ್ಗುವುದಿಲ್ಲ
-ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ
 ಅದಕ್ಕೇ ಈಶ್ವರಪ್ಪ ಅವರಿಗೆ ಆ ಕೆಲಸ ಕೊಟ್ಟಿರುವುದು.
---------------------
  ಭಾರತಕ್ಕೆ ಐಸಿಸ್ ಹೆದರಿಕೆಯಿಲ್ಲ
-ರಾಜನಾಥ್ ಸಿಂಗ್, ಗೃಹ ಸಚಿ
  ಭಾರತಕ್ಕಿರುವುದು ಆರೆಸ್ಸೆಸ್‌ನ ಹೆದರಿಕೆ.
---------------------
  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಅವಕಾಶ ಇದೆ
-ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
  ನಿಮಗೆ ಮಾತ್ರ ಯಾವ ಪಕ್ಷಗಳಲ್ಲೂ ಅವಕಾಶ ಇರುವಂತಿಲ್ಲ.
---------------------
  ‘ಚಪ್ಪಲಿ ಹೇಳಿಕೆ’ ಜಾನಪದ ನುಡಿಮುತ್ತಿನಂತೆ
-ಯು.ಟಿ.ಖಾದರ್, ಸಚಿವ
  ಜಾಣನ ಪದ.
---------------------
  ಶೋಭಾ ಕರಂದ್ಲಾಜೆಯವರೇ, ನನ್ನ ಜೊತೆ ಹುಡುಗಾಟ ಆಡಬೇಡಿ
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ
  ವಯಸ್ಸಾದ ಇಬ್ಬರೂ ಹುಡುಗರಂತೆ ಆಟ ಆಡೋದು ತಪ್ಪು.
---------------------
  ನಕ್ಸಲರು ಮತದಾನದಿಂದ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಬಹುದು
-ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ
  ಸ್ವಾಮೀಜಿಗಳೂ ಆ ಹಕ್ಕನ್ನು ಮತದಾನಗಳಿಂದಲೇ ಯಾಕೆ ಪಡೆಯಬಾರದು?
---------------------
  ನಾನು ಹಾಲಿನಲ್ಲಿ ಎಣ್ಣೆಯಾಗಿರದೆ ಸಕ್ಕರೆಯಾಗಿರುತ್ತೇನೆ
-ಪ್ರಮೋದ್ ಹೆಗಡೆ, ಬಿಜೆಪಿ ಸೇರಿದ ನಾಯಕ
  ಆಲ್ಕೋ-ಹಾಲಿನಲ್ಲಿರುವ ಐಸಿನ ತುಂಡಿನಂತೆ ಎಂದಿದ್ದರೆ ಅಬಕಾರಿ ಇಲಾಖೆಗೆ ಲಾಭವಾಗುತ್ತಿತ್ತು.
---------------------
  ಸಾಂಸ್ಕೃತಿಕ ಚಟುವಟಿಕೆಗಳಿಂದ ಸಂಸ್ಕೃತಿ ಉಳಿಯಲು ಸಾಧ್ಯವಿಲ್ಲ
-ವಿ.ಸುನೀಲ್ ಕುಮಾರ್, ಶಾಸಕ
  ಬಜರಂಗಿಗಳ ಅಸಾಂಸ್ಕೃತಿಕ ಚಟುವಟಿಕೆಗಳಿಂದ ಉಳಿಸುವ ಉದ್ದೇಶವೇ?
---------------------
  ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರವನ್ನು ಮನೆಮನೆಗೂ ತಲುಪಿಸುತ್ತೇನೆ
-ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ
  ಮನೆಮನೆಯಲ್ಲೂ ನಿಮ್ಮ ಭ್ರಷ್ಟಾಚಾರದ ಕತೆ ಬಾಯಿ ಪಾಠ.
---------------------
  ಯಡಿಯೂರಪ್ಪ, ಅನಂತ್‌ಕುಮಾರ್ ಅವರಿಗಿಂತ ನನಗೆ ಪಕ್ಷ ಮುಖ್ಯ
- ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
  ಯಾವ ಪಕ್ಷ ಎನ್ನುವುದನ್ನೂ ಸ್ಪಷ್ಟಗೊಳಿಸಿ.
---------------------
  ರಾಜಕೀಯ ಪಕ್ಷಗಳು ಹೈಕಮಾಂಡ್‌ಗೆ ಕಪ್ಪ ಕೊಡೋದಿಲ್ಲ ಅಂದರೆ ಆತ್ಮವಂಚನೆ ಮಾಡಿಕೊಂಡಂತೆ
-ರಮೇಶ್ ಕುಮಾರ್, ಸಚಿವ
  ಆತ್ಮವೇ ಇಲ್ಲದವರಿಂದ ವಂಚನೆ ಎಲ್ಲಿ ಬಂತು?
---------------------
  ಕೇರಳದಲ್ಲಿ ದೇಶಪ್ರೇಮಿಗಳು ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ
-ಮಾ.ವೆಂಕಟರಾವ್, ಆರೆಸ್ಸೆಸ್ ದಕ್ಷಿಣ ಪ್ರಾಂತ ಸರಸಂಘ ಚಾಲಕ
  ನೀವೆಲ್ಲ ಇಷ್ಟು ಧೈರ್ಯದಿಂದ ಓಡಾಡುತ್ತಿರುವಾಗ ಇನ್ನೇನಾದೀತು?
---------------------
  ಚಿತ್ರರಂಗದಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಹೇಳುವಷ್ಟು ದೊಡ್ಡ ಮನುಷ್ಯ ನಾನಲ್ಲ
-ಶಿವರಾಜ್‌ಕುಮಾರ್, ನಟ
  ಯಾರು ಕೆಟ್ಟ ನಟರು ಎನ್ನುವುದನ್ನು ಹೇಳುವ ದೊಡ್ಡ ಜನರು ಪ್ರೇಕ್ಷಕರಲ್ಲಿ ಇನ್ನೂ ಇದ್ದಾರೆ.
---------------------
 ಕಾಂಗ್ರೆಸ್‌ಗೆ ನಾನೆಂದ್ರೆ ಹೆದರಿಕೆ
-ಜನಾರ್ದನ ರೆಡ್ಡಿ, ಮಾಜಿ ಸಚಿವ
  ಬಿಜೆಪಿಗೂ.
---------------------
  ನಾನು ಇದುವರೆಗೆ ಕೋಟಿ ರೂಪಾಯಿ ನೋಡಿಯೇ ಇಲ್ಲ
-ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
  ನೀವು ಏನೇನೂ ನೋಡಿದ್ದೀರಿ ಎನ್ನುವುದು ಮಾಧ್ಯಮಗಳಲ್ಲಿ ಚಿತ್ರ ಸಹಿತ ಪ್ರಕಟವಾಗಿದೆ ಬಿಡಿ.

---------------------
  ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದು ಹಳೆಯ ಕಾಂಗ್ರೆಸ್. ಈಗ ಇರುವುದು ತಿನ್ನುವ ಕಾಂಗ್ರೆಸ್
-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
 ಮನುಷ್ಯರನ್ನು ತಿನ್ನುವ ಆರೆಸ್ಸೆಸ್‌ಗಿಂತ ವಾಸಿ.
---------------------
  ಸಾಂಸ್ಕೃತಿಕ ಲೋಕದಲ್ಲಿ ಒಳ ರಾಜಕೀಯ ಹೆಚ್ಚಾಗಿದೆ
-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕ.ಅ.ಪ್ರಾಧಿಕಾರದ ಅಧ್ಯಕ್ಷ
ರಾಜಕೀಯದೊಳಗೆ ಸಾಂಸ್ಕೃತಿಕ ಲೋಕ ಎಂದರೆ ಚೆನ್ನ.

---------------------
  ಮನೆಯಲ್ಲಿ ನಾಯಿ ಸಾಕುವುದು ಈಗ ಫ್ಯಾಶನ್ ಆಗಿದೆ. ಇದರ ಬದಲು ದನಗಳನ್ನು ದತ್ತು ಪಡೆಯಬಹುದು
   -ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

ನೀವು ಗೋರಕ್ಷಣೆಗಾಗಿ ಸಾಕಿರುವ ಸಂಘಪರಿವಾರ ಕಾರ್ಯಕರ್ತರಿಗೆಲ್ಲ ಒಂದೊಂದು ದನ ದತ್ತು ಕೊಟ್ಟು ಬಿಡಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!