ಓ.. ಮೆಣಸೇ..
ಮುಂದಿನ ಎರಡು ವರ್ಷಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಆಡಳಿತದಲ್ಲಿ ಸುಧಾರಣೆ ಸ್ಪಷ್ಟವಾಗಿ ಕಾಣಿಸಲಿದೆ
-ಸುರೇಶ್ ಪ್ರಭು, ಕೆಂದ್ರ ಸಚಿವ
ಬಹುಶಃ ಎಲ್ಲರಿಗೂ ಉಚಿತ ಭೂತಕನ್ನಡಿ ವಿತರಿಸುವ ಯೋಜನೆಯಿರಬೇಕು.
---------------------
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರಲ್ಲಿ ಎಲ್ಲ ವಿಷಯಗಳಲ್ಲೂ ಕೇವಲ ಹಿಟ್ ಆ್ಯಂಡ್ ರನ್ ವರ್ತನೆ
- ಜಗದೀಶ್ ಶೆಟ್ಟರ್, ವಿ.ವಿ.ನಾಯಕ
ಅದು ರಾಗಿ ಹಿಟ್ ತಿಂದ ಪರಿಣಾಮ.
---------------------
ನಾನು ಶಿಸ್ತು ಕಲಿತದ್ದು ಆರೆಸ್ಸೆಸ್‌ನಿಂದ
-ಎಲ್.ಕೆ.ಅಡ್ವಾಣಿ, ಬಿಜೆಪಿ ನಾಯಕ
ಮೋದಿ ಆರೆಸ್ಸೆಸ್‌ಗೆ ಕೃತಜ್ಞರಾಗಿದ್ದಾರಂತೆ.
---------------------
ಮುಲಾಯಂ ಸಿಂಗ್, ಮಾಯಾವತಿ ಮತ್ತು ಎಲ್ಲ ಜಾತ್ಯತೀತ ಪಕ್ಷಗಳು ಒಂದಾದರೆ ಬಿಜೆಪಿ ಕಥೆ ಮುಗಿದಂತೆಯೇ
- ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ನಾಯಕ
ಬರೇ ಕಥೆ ಕಟ್ಟುವುದೇ ಆಯಿತು.
---------------------
ಸಂವಿಧಾನವನ್ನು ಸಂರಕ್ಷಿಸುವ ನಾಯಕತ್ವ ನಮ್ಮಲ್ಲಿ ಬೆಳೆದು ಬರಬೇಕು
- ಆಸ್ಕರ್ ಫೆರ್ನಾಂಡಿಸ್ ರಾಜ್ಯ ಸಭಾ ಸದಸ್ಯ
ಬೆಳೆಯಲು ನೀವು ಬಿಡಬೇಕಲ್ಲ?
---------------------
ರಾಹುಲ್‌ರನ್ನು ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬುದು ಸುಳ್ಳು
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಕಾಂಗ್ರೆಸ್‌ನ್ನು ಸೈಡ್‌ಲೈನ್ ಮಾಡುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ?
ಯುವ ಮನಸ್ಸುಗಳನ್ನು ಇತರ ಆಕರ್ಷಣೆಗಳಿಂದ ಬೇರ್ಪಡಿಸಿ ಧಾರ್ಮಿಕ ಆಚರಣೆ ಬೆಳೆಸುವ ಕೆಲಸ ಆಗಬೇಕು
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ರಾಘವೇಶ್ವರ ಸ್ವಾಮೀಜಿಗಳದ್ದು ಯುವಮನಸ್ಸು ಅಲ್ಲ ಅಂತೀರಾ?
---------------------
ನಾನು ಹಣಮಾಡುವ ಆಸೆಯಿಂದ ರಾಜಕೀಯಕ್ಕೆ ಬಂದಿಲ್ಲ
- ಪ್ರಮೋದ್ ಮಧ್ವರಾಜ್, ಸಚಿವ
ಈ ಹೇಳಿಕೆಯ ಹಿಂದೆ ಅದೇನು ದುರಾಸೆಯಿದೆಯೋ?
---------------------
ಹಿಂದೂ-ಮುಸ್ಲಿಂ ಜೊತೆ ಸೇರಿ ರಾಮ ಮಂದಿರ ಕಟ್ಟೋಣ
-ಗಿರಿರಾಜ್ ಸಿಂಗ್, ಕೇಂದ್ರ ಸಚಿವ
ಜೊತೆ ಸೇರಿ ಮನಸ್ಸು ಕಟ್ಟುವ ಕೆಲಸವಾಗಲಿ ಮೊದಲು.
---------------------
ಅಕ್ರಮ ಕಸಾಯಿಖಾನೆ ಮುಚ್ಚುವ ಉ.ಪ.ಸರಕಾರದ ನಿರ್ಧಾರಕ್ಕೆ ಕೋಮು ಬಣ್ಣ ಸರಿಯಲ್ಲ
- ವೆಂಕಯ್ಯ ನಾಯ್ಡು, ಕೇಂದ್ರ ಸಚಿವ
ಚುನಾವಣೆಯೇ ಅಕ್ರಮವೆಂಬ ಆರೋಪವಿರುವಾಗ, ಕಸಾಯಿಖಾನೆಯ ಅಕ್ರಮದ ಕುರಿತು ಮಾತನಾಡುವುದೇನಿದೆ?
---------------------
ನಾನು ಕೆಲಸದ ಹುಳ
-ಯೋಗಿ ಆದಿತ್ಯನಾಥ, ಉ.ಪ.ಮುಖ್ಯಮಂತ್ರಿ
ಹುಳ ಎನ್ನುವುದರಲ್ಲಿ ಎರಡು ಮಾತಿಲ್ಲ.
---------------------
ಆರೆಸ್ಸೆಸ್ ಸ್ವಯಂ ಸೇವಕರು ಅಂತರ್ಜಾತಿ ವಿವಾಹದ ಪರವಾಗಿ ನಿಲ್ಲಬೇಕು
- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ ಮೊದಲು ಅವರು ವಿವಾಹವಾಗಲಿ.
---------------------
ಬೆನ್ನಿಗೆ ಇರಿಯುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮ
- ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ
ದಲಿತರ ಬೆನ್ನಿಗೆ ಇರಿವ ಹಕ್ಕು ಇರುವುದು ನಿಮಗಷ್ಟೇ ಎನ್ನುವುದು ಅವರಿಗೇನು ಗೊತ್ತು?
ನಾನಿನ್ನೂ ಗರ್ಭಿಣಿ ಆಗಿಲ್ಲ
- ಬಿಪಾಶಾ ಬಸು, ಬಾಲಿವುಡ್ ನಟಿ
ಮದುವೆಯಾಗಿದ್ದೀರಾ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಿ.
---------------------
ವೀರಪ್ಪನ್‌ನಂತಹ ಪಾತಕಿಗಳು ಹುಟ್ಟಿದರೆ ಮಟ್ಟಹಾಕಲು ಅಗತ್ಯವಾದ ತರಬೇತಿ ನಮ್ಮ ವ್ಯವಸ್ಥೆಯಲ್ಲಿಲ್ಲ
- ಡಾ.ಜಿ.ಪರಮೇಶ್ವರ್, ಸಚಿವ
ಮಟ್ಟ ಹಾಕಬಾರದು ಎನ್ನುವ ಕಾರಣಕ್ಕಾಗಿ ತರಬೇತಿ ನೀಡುತ್ತಿಲ್ಲ ಎಂಬ ಆರೋಪಗಳಿವೆ.
ಯುಪಿಎ ಅಧಿಕಾರದ ಅವಧಿಯಲ್ಲಿ ಜಿಎಸ್‌ಟಿಗೆ ಭಾರೀ ವಿರೋಧ ವ್ಯಕ್ತಪಡಿಸಿದ ಕಾರಣ ಅದನ್ನು ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ
-ಎಂ.ವೀರಪ್ಪ ಮೊಯ್ಲಿ, ಸಂಸದ
ಹಾಗಾದರೆ ಅದನ್ನು ಸಾಧಿಸಿದ ಎನ್‌ಡಿಎ ಸರಕಾರವನ್ನು ಅಭಿನಂದಿಸುತ್ತಿದ್ದೀರಿ ಎಂದಾಯಿತು.
---------------------
ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ರಾಷ್ಟ್ರಪತಿಯಾಗಲಿ.
- ಜಾಫರ್ ಶರೀಫ್, ಮಾಜಿ ಸಚಿವ
ತಮ್ಮ ಕೈಯಲ್ಲಿರುವ ಊರುಗೋಲನ್ನು ಆರೆಸ್ಸೆಸ್ ಬೈಠಕ್ ಕವಾಯತಿಗೆ ಬಳಸಿಕೊಳ್ಳಬಹುದು.
---------------------
ಗೆದ್ದರೆ ಒಳ್ಳೆಯ ಬೀಫ್ ಸಿಗುವಂತೆ ಮಾಡುತ್ತೇನೆ
-ಎನ್.ಶ್ರೀಪ್ರಕಾಶ್, ಮಲಪ್ಪುರಂ ಬಿಜೆಪಿ ಅಭ್ಯರ್ಥಿ
ಸೋತರೆ ಬೀಫ್ ನಿಷೇಧ ಚಳವಳಿ ಆರಂಭಿಸುತ್ತೇನೆ ಎಂದರೆ ನೀವು ಗೆಲ್ಲುವುದು ಖಂಡಿತ.
---------------------
ಗುಜರಾತ್‌ನ್ನು ಸಸ್ಯಾಹಾರಿ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿ
-ವಿಜಯ್ ರುಪಾನಿ, ಮುಖ್ಯಮಂತ್ರಿ
ನರಭಕ್ಷಕ ರಾಜ್ಯವೆನ್ನುವ ಕಳಂಕದಿಂದ ಯಾವಾಗ ಪಾರು ಮಾಡುತ್ತೀರಿ?
---------------------