ಕೊಕೇನ್ ಮಾರಾಟ; ವಿದೇಶಿ ಪ್ರಜೆಗಳಿಬ್ಬರ ಬಂಧನ

Update: 2017-04-03 13:23 GMT

ಬೆಂಗಳೂರು, ಎ.4: ಮಾದಕ ವಸ್ತು ಕೊಕೇನ್ ಮಾರಾಟ ಆರೋಪದ ಮೇಲೆ ವಿದೇಶಿ ಪ್ರಜೆಗಳಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ವಿದೇಶಿ ಪ್ರಜೆಗಳನ್ನು ನೈಜೀರಿಯಾದ ಇಗ್‌ಬನುಗು ಚಿಬ್ಯೂಕೆ(27) ಹಾಗೂ ನೊವತು ಡಾರ್ಲಿಂಗ್‌ಟನ್(34) ಎಂದು ಗುರುತಿಸಲಾಗಿದೆ.
ನಗರದ ಕೊತ್ತನೂರಿನ ಬಿಳೆಶಿವಾಲೆಯ ಶಾಂತರಾಜ್‌ಕುಮಾರ್ ಮನೆಯ 3ನೆ ಮಹಡಿಯಲ್ಲಿರುವ ಪ್ರತ್ಯೇಕ ಮನೆಯನ್ನು ಬಾಡಿಗೆಗೆ ಪಡೆದು ಮಾದಕ ವಸ್ತು ಕೊಕೇನ್ ವಶದಲ್ಲಿಟ್ಟುಕೊಂಡು ಮಾರಾಟ ಜಾಲದಲ್ಲಿ ಆರೋಪಿಗಳು ತೊಡಗಿದ್ದರು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ 10 ಗ್ರಾಂ.ಕೊಕೇನ್, ನಾಲ್ಕು ಮೊಬೈಲ್‌ಗಳು, 2 ಲ್ಯಾಪ್ ಟಾಪ್, 2 ಪಾಸ್‌ಪೋರ್ಟ್, 2 ಸಾವಿರ ನಗದು ಸೇರಿ 2ಲಕ್ಷ 75 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News