ಗಾಂಜಾ ಮಾರಾಟ: ಒಡಿಶಾ ಮೂಲದ ಯುವಕನ ಬಂಧನ

Update: 2017-04-09 17:56 GMT

ಬೆಂಗಳೂರು, ಎ.9: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಒಡಿಶಾ ಮೂಲದ ಯುವಕನನ್ನು ಬಂಧಿಸಿರುವ ಇಲ್ಲಿನ ಅಶೋಕನಗರ ಠಾಣಾ ಪೊಲೀಸರು, ಆತನ ಬಳಿಯಿದ್ದ 5 ಲಕ್ಷ ರೂ. ವೌಲ್ಯದ 4.4 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. 

ಬಂಧಿತ ಆರೋಪಿಯನ್ನು ಒರಿಸ್ಸಾ ಮೂಲದ ರಾಜುದಾಸ್ ಯಾನೆ ಜಲಾಲ್‌ದಾಸ್(27) ಎಂದು ಪೊಲೀಸರು ಗುರುತಿಸಿದ್ದಾರೆ.

ಆರೋಪಿಯು ಶುಕ್ರವಾರ ನಗರದ ಹೊಸೂರು ರಸ್ತೆಯ ಜಾನ್ಸನ್ ಮಾರ್ಕೆಟ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ ಈತನ ವಶದಲ್ಲಿದ್ದ 5 ಲಕ್ಷ ರೂ.ವೌಲ್ಯದ 4.4 ಕೆ.ಜಿ ಗಾಂಜಾವನ್ನು ಪಡೆದುಕೊಳ್ಳಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಇಲ್ಲಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News