ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

Update: 2017-04-11 18:43 GMT

ಬೆಂಗಳೂರು, ಎ.11: ಬಿ.ಎಂ.ಗಿರಿರಾಜ್ ನಿರ್ದೇಶನದ ‘ಅಮರಾವತಿ’ ಮೊದಲ ಅತ್ಯುತ್ತಮ ಚಿತ್ರ (ಒಂದು ಲಕ್ಷ ರೂ., 50 ಗ್ರಾಂ ಚಿನ್ನ), ಪೃಥ್ವಿ ಕೊಣನೂರ್ ನಿರ್ದೇಶನದ ‘ರೈಲ್ವೇ ಚಿಲ್ಡ್ರನ್’ ಎರಡನೆ ಅತ್ಯುತ್ತಮ ಚಿತ್ರ(ಎಪ್ಪತ್ತೈದು ಸಾವಿರ ರೂ., 100 ಗ್ರಾಂ ಬೆಳ್ಳಿ) ಹಾಗೂ ಹರೀಶ್‌ಕುಮಾರ್ ನಿರ್ದೇಶನದ ‘ಅಂತರ್ಜಲ’ ಮೂರನೇ ಅತ್ಯುತ್ತಮ ಚಿತ್ರವಾಗಿ (ಐವತ್ತು ಸಾವಿರ ರೂ., 100 ಗ್ರಾಂ ಬೆಳ್ಳಿ) 2016ನೆ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿ ಸಿದ್ಧಪಡಿಸಿದ 2016ನೆ ಸಾಲಿನ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, 2016ನೆ ಸಾಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆಯಲ್ಲಿ ಸರಕಾರದ ಹಸ್ತಕ್ಷೇಪ ಕಿಂಚಿತ್ತೂ ಇಲ್ಲ. ಸಂಪೂರ್ಣ ಅಧಿಕಾರವನ್ನು ಆಯ್ಕೆ ಸಮಿತಿಗೆ ಬಿಡಲಾಗಿತ್ತು. ಪ್ರಶಸ್ತಿಗೆ ಆಯ್ಕೆಗೊಂಡಿರುವವರಿಗೆ ಡಾ.ರಾಜ್‌ಕುಮಾರ್ ಹುಟ್ಟಿದ ದಿನವಾದ ಎ.24ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಪ್ರಶಸ್ತಿ ಪಟ್ಟಿ

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ-ಮೂಡ್ಲ ಸೀಮೆಯಲ್ಲಿ(ನಿರ್ದೇಶಕ ಶಿವರುದ್ರಯ್ಯ, ಎಪ್ಪತ್ತೈದು ಸಾವಿರ ರೂ., 100 ಗ್ರಾಂ ಬೆಳ್ಳಿ),                                

-ಅತ್ಯುತ್ತಮ ಜನಪ್ರಿಯ ಚಿತ್ರ-ಕಿರಿಕ್ ಪಾರ್ಟಿ(ನಿರ್ದೇಶಕ-ರಿಷಬ್ ಶೆಟ್ಟಿ, ಐವತ್ತು ಸಾವಿರ ರೂ., 100 ಗ್ರಾಂ ಬೆಳ್ಳಿ)                                                        

-ಅತ್ಯುತ್ತಮ ಮಕ್ಕಳ ಚಿತ್ರ-ಜೀರ್‌ಜಿಂಬೆ(ನಿರ್ದೇಶಕ-ಕಾರ್ತಿಕ್ ಸರಗೂರು-ಐವತ್ತು ಸಾವಿರ ರೂ., 100 ಗ್ರಾಂ ಚಿನ್ನ)                                                    

-ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ-ರಾಮ ರಾಮಾ ರೇ(ನಿರ್ದೇಶಕ ಡಿ.ಸತ್ಯಪ್ರಕಾಶ್-ಐವತ್ತು ಸಾವಿರ ರೂ., 100 ಗ್ರಾಂ ಚಿನ್ನ)

-ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ- ಮದಿಪು(ತುಳು, ನಿರ್ದೇಶಕ-ಚೇತನ್ ಮುಂಡಾಡಿ ಐವತ್ತು ಸಾವಿರ ರೂ. ಹಾಗೂ 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ನಟ- ಅಚ್ಯುತ್ ಕುಮಾರ್(ಚಿತ್ರ-ಅಮರಾವತಿ, ಇಪ್ಪತ್ತು ಸಾವಿರ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ನಟಿ- ಶ್ರುತಿ ಹರಿಹರನ್(ಚಿತ್ರ: ಬ್ಯೂಟಿಫುಲ್ ಮನಸುಗಳು-ಇಪ್ಪತ್ತು ಸಾವಿರ ರೂ. ಹಾಗೂ 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ಪೋಷಕ ನಟ- ನವೀನ್ ಡಿ ಪಡೀಲ್(ಚಿತ್ರ: ಕುಡ್ಲ ಕೆಫೆ (ತುಳು), ಇಪ್ಪತ್ತು ಸಾವಿರ ರೂ.ಗಳ ಹಾಗೂ ಬೆಳ್ಳಿ)

-ಅತ್ಯುತ್ತಮ ಪೋಷಕ ನಟಿ- ಅಕ್ಷತಾ ಪಾಂಡವಪುರ(ಚಿತ್ರ: ಪಲ್ಲಟ, ಇಪ್ಪತ್ತು ಸಾರ ರೂ. ಹಾಗೂ 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ಕತೆ- ನಂದಿತಾ ಯಾದವ್(ಚಿತ್ರ: ರಾಜು ಎದೆಗೆ ಬಿದ್ದ ಅಕ್ಷರ ಇಪ್ಪತ್ತು ಸಾವಿರ ರೂ.ಗಳ , 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ಚಿತ್ರಕತೆ- ಅರವಿಂದ ಶಾಸ್ತ್ರಿ (ಚಿತ್ರ: ಕಹಿ,ಇಪ್ಪತ್ತು ಸಾವಿರ ರೂ. ಹಾಗೂ 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ಸಂಭಾಷಣೆ- ಬಿ.ಎಂ.ಗಿರಿರಾಜ್(ಚಿತ್ರ: ಅಮರಾವತಿ, ಇಪ್ಪತ್ತು ಸಾವಿರ ರೂ. ಹಾಗೂ 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ಛಾಯಾಗ್ರಹಣ- ಶೇಖರ್ ಚಂದ್ರ (ಚಿತ್ರ: ಮುಂಗಾರು ಮಳೆ-2, ಇಪ್ಪತ್ತು ಸಾವಿರ ರೂ. ಹಾಗೂ 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ಸಂಗೀತ ನಿರ್ದೇಶನ-ಎಂ.ಆರ್.ಚರಣ್ ರಾಜ್ (ಚಿತ್ರ: ಜೀರ್ ಜಿಂಬೆ, ಇಪ್ಪತ್ತು ಸಾವಿರ ರೂ. ಹಾಗೂ 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ಸಂಕಲನ- ಸಿ.ರಚಂದ್ರನ್ (ಚಿತ್ರ: ಮಮ್ಮಿ, ಇಪ್ಪತ್ತು ಸಾವಿರ ರೂ. ಹಾಗೂ 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ಬಾಲ ನಟ- ಮಾಸ್ಟರ್ ಮನೋಹರ್ ಕೆ.(ಚಿತ್ರ: ರೈಲ್ವೇ ಚಿಲ್ಡ್ರನ್, ಇಪ್ಪತ್ತು ಸಾವಿರ ರೂ. ಹಾಗೂ ಬೆಳ್ಳಿ)

-ಅತ್ಯುತ್ತಮ ಬಾಲ ನಟಿ- ಬೇಬಿ ಸಿರಿವಾನಳ್ಳಿ(ಚಿತ್ರ: ಜೀರ್ ಜಿಂಬೆ), ಬೇಬಿ ರೇವತಿ (ಚಿತ್ರ: ಬೇಟಿ, ತಲಾ ಹತ್ತು ಸಾವಿರ ರೂ.ಗಳ ನಗದು ಹಾಗೂ ತಲಾ 50 ಗ್ರಾಂ ಬೆಳ್ಳಿ)

-ಅತ್ಯುತ್ತಮ ಕಲಾ ನಿರ್ದೇಶನ- ಶಶಿಧರ ಅಡಪ (ಚಿತ್ರ: ಉಪ್ಪಿನ ಕಾಗದ, ಇಪ್ಪತ್ತು ಸಾವಿರ ರೂ. ಹಾಗೂ 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ಗೀತ ರಚನೆ- ಕಾರ್ತಿಕ್ ಸರಗೂರು (ಚಿತ್ರ: ಜೀರ್ ಜಿಂಬೆ, ಇಪ್ಪತ್ತು ಸಾವಿರ ರೂ. 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ಹಿನ್ನೆಲೆ ಗಾಯಕ- ವಿಜಯ್ ಪ್ರಕಾಶ್(ಚಿತ್ರ: ಬ್ಯೂಟಿಫುಲ್ ಮನಸುಗಳು, ಇಪ್ಪತ್ತು ಸಾವಿರ ರೂ., 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ಹಿನ್ನೆಲೆ ಗಾಯಕಿ- ಸಂಗೀತಾ ರವೀಂದ್ರನಾಥ್(ಚಿತ್ರ: ಜಲ್ಸ, ಇಪ್ಪತ್ತು ಸಾವಿರ ರೂ. ಹಾಗೂ ಬೆಳ್ಳಿ)

-ತೀರ್ಪುಗಾರರ ವಿಶೇಷ ಪ್ರಶಸ್ತಿ -ಚಿನ್ಮಯ್(ಚಿತ್ರ: ಸಂತೆಯಲ್ಲಿ ನಿಂತ ಕಬೀರ, ಇಪ್ಪತ್ತು ಸಾವಿರ ರೂ. ಹಾಗೂ 100 ಗ್ರಾಂ ಬೆಳ್ಳಿ)

-ಅತ್ಯುತ್ತಮ ನಿರ್ಮಾಣ ನಿರ್ವಾಹಕ- ಕೆ.ವಿ.ಮಂಜಯ್ಯ(ಚಿತ್ರ: ಮುಂಗಾರು ಮಳೆ- ಇಪ್ಪತ್ತು ಸಾವಿರ ರೂ.  ಹಾಗೂ 100 ಗ್ರಾಂ ಬೆಳ್ಳಿ)

ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ರೀತಿಯ ಸಿನಿಮಾ ಮಂದಿರಗಳಲ್ಲಿ ಟಿಕೆಟ್‌ ದರದ ಗರಿಷ್ಠ ಮಿತಿ 200 ರೂ.ಆಗಿದ್ದು, ಈ ತಿಂಗಳಿನಿಂದ ಸರಕಾರ ಆದೇಶ ಜಾರಿಗೊಳಿಸಲಿದೆ. ಸರಕಾರದ ನಿಯಮವನ್ನು ಉಲ್ಲಂಘಿಸುವ ಸಿನಿಮಾ ಮಂದಿರಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.

- ಮುಖ್ಯಮಂತ್ರಿ ಸಿದ್ದರಾಮಯ್ಯ 

 2016ನೆ ಸಾಲಿನ ಕರ್ನಾಟಕ ಚಲನಚಿತ್ರ ಪ್ರಶಸ್ತಿಗೆ 120 ಸಿನಿಮಾಗಳು ಬಂದಿದ್ದವು. ಬಹುತೇಕ ಚಿತ್ರಗಳು ಪ್ರಶಸ್ತಿಗಳ ಆಯ್ಕೆಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದ್ದವು. ಆದರೆ, ಕೆಲವು ಚಿತ್ರಗಳು ಮಾತ್ರ ಕೇವಲ ಸಬ್ಸಿಡಿಗಾಗಿ ತಯಾರಾದ ಚಿತ್ರಗಳು ಎಂಬ ಅನುಮಾನವಿತ್ತು. ಒಟ್ಟಾರೆ ಹೊಸ ತಲೆಮಾರಿನ ನಿರ್ದೇಶಕರು ಉತ್ತಮ ಚಿತ್ರಗಳನ್ನು ನಿರ್ಮಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ.

-ಕವಿತಾ ಲಂಕೇಶ್, ಆಯ್ಕೆ ಸಮಿತಿ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News