ಬರ ಪರಿಸ್ಥಿತಿ ನಡುವೆ ದೇವಾಲಯ ನಿರ್ಮಾಣಕ್ಕೆ ಹಣ ಕೇಳಿದವರಿಗೆ ಸಿಎಂ ತರಾಟೆ

Update: 2017-04-18 13:56 GMT

ಬೆಂಗಳೂರು, ಎ.18: ಅಧಿಕಾರಿಗಳು ಹಾಗೂ ಜಿಪಂ ಸಿಇಒಗಳ ಜತೆ ಸಿಎಂ ವಿಡಿಯೋ ಸಂವಾದಕ್ಕೂ ಮುನ್ನ ನಡೆದ ಅಹವಾಲು ಸ್ವೀಕಾರದ ಸಂದರ್ಭ ದೇವಾಲಯ ನಿರ್ಮಾಣಕ್ಕೆ ಹಣಕಾಸಿನ ಸಹಾಯ ಕೇಳಿದವರನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ರಾಜ್ಯದ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಜಿಪಂ ಸಿಇಒಗಳ ಜೊತೆ ಸಿಎಂ ಅವರ ವಿಡಿಯೋ ಸಂವಾದ ಕಾರ್ಯಕ್ರಮ ಮಂಗಳವಾರ ನಡೆಯಿತು. ಇದಕ್ಕೂ ಮೊದಲು ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆಯ ಹರಪನಹಳ್ಳಿಯ ಪಾಂಡುರಂಗ ದೇವಸ್ಥಾನ ಸಮಿತಿಯ ಸದಸ್ಯರು, ದೇವಾಲಯ ನಿರ್ಮಾಣ ಮಾಡಲು ಆರ್ಥಿಕ ಸಹಾಯ ನೀಡಬೇಕು ಎಂದು ಮುಖ್ಯಮಂತ್ರಿಯಲ್ಲಿ ಅಹವಾಲು ಸಲ್ಲಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, "ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಜನರಿಗೆ ಕುಡಿಯುವುದಕ್ಕೆ ನೀರಿಲ್ಲ. ನೀವು ದೇವಸ್ಥಾನ ಕಟ್ಟಲು ಹಣ ಕೇಳುತ್ತಿದ್ದೀರಾ" ಎಂದು ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News