ಮಹಡಿಯಿಂದ ಬಿದ್ದು ಜನ್ಮದಿನದಂದೇ ಮಗು ಮೃತ್ಯು
Update: 2017-04-28 17:35 GMT
ಬೆಂಗಳೂರು, ಎ.28: ತನ್ನ ಹುಟ್ಟುಹಬ್ಬದಂದೇ ಮಹಡಿಯಿಂದ ಬಿದ್ದು ಎರಡು ವರ್ಷದ ಮಗುವೊಂದು ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಸುಬ್ರಹ್ಮಣ್ಯ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ರಾಜಾಜಿನಗರ ಇ ಬ್ಲಾಕ್ ನ ಮನೀಷ್(2) ಮೃತಪಟ್ಟಿರುವ ಮಗು ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮನೀಷ್ ನ ಎರಡು ವರ್ಷದ ಹುಟ್ಟುಹಬ್ಬದ ಸಂಭ್ರಮವಿದ್ದು, ಮನೆಗೆ ಸಂಬಂಧಿಕರು ಬಂದಿದ್ದರು. ಮನೆಯವರೆಲ್ಲ ಸಂಭ್ರಮದ ಆಚರಣೆಯಲ್ಲಿ ತೊಡಗಿದ್ದರು. ಸಂಬಂಧಿಕರ ಮಕ್ಕಳ ಜತೆ 4ನೆ ಮಹಡಿಗೆ ಹೋಗಿ ಆಟವಾಡುತ್ತಿದ್ದ ಮನೀಷ್ ಆಯತಪ್ಪಿಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.