ಜೈಲುಪಾಲಾಗಿರುವ ಶಶಿಕಲಾ ಈಗ ಸಾಮಾನ್ಯ ಕೈದಿ

Update: 2017-04-29 07:32 GMT

ಬೆಂಗಳೂರು, ಎ.29: ನಗರದ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಈಗ ಸಾಮಾನ್ಯ ಕೈದಿಯಾಗಿದ್ದು  ಇತ್ತೀಚೆಗಿನ ದಿನಗಳಲ್ಲಿ ಅವರನ್ನು ಯಾರೂ ಭೇಟಿಯಾಗಲು ತೆರಳುತ್ತಿಲ್ಲ.

ಚುನಾವಣಾ ಆಯೋಗದ ಅಧಿಕಾರಿಗೆ ಲಂಚ ನೀಡಲು ಯತ್ನಿಸಿದ ಆರೋಪದಲ್ಲಿ ಸಂಬಂಧಿ ಟಿಟಿವಿ ದಿನಕರನ್ ಕಳೆದ ಕೆಲವು ದಿನಗಳ ಹಿಂದೆ ದಿಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾಗೆ ಈ ಬೆಳವಣಿಗೆಯಿಂದ ಬೇಸರವಾಗಿದೆ. ಆದರೆ, ಅವರಿಗೆ ಸಮಾಧಾನ ಪಡಿಸಲು ಯಾವ ಹಿಂಬಾಲಕರೂ, ಅಭಿಮಾನಿಗಳು ಅವರನ್ನು ಭೇಟಿಯಾಗಿಲ್ಲ. ಎ.15 ರಂದು ತಮಿಳುನಾಡಿನ ಮೂವರು ವ್ಯಕ್ತಿಗಳು ಶಶಿಕಲಾರನ್ನು ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಮಾರ್ಚ್-ಎಪ್ರಿಲ್‌ನಲ್ಲಿ ಶಶಿಕಲಾರ ವಕೀಲರು ಸೇರಿದಂತೆ ಕೇವಲ 19 ಜನರು ಶಶಿಕಲಾರನ್ನು ಭೇಟಿಯಾಗಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆಯ ದಾಖಲೆಯಲ್ಲಿ ಸ್ಪಷ್ಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News