ಬಾಂಬ್ ನಾಗ ಸಹಚರರ ಸೆರೆ
Update: 2017-05-05 16:48 GMT
ಬೆಂಗಳೂರು, ಮೇ 5: ರದ್ದುಗೊಂಡಿರುವ ಹಳೇ ನೋಟುಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಪೊಲೀಸರಿಗೆ ಬೇಕಾಗಿರುವ, ಸದ್ಯ ತಲೆಮರೆಸಿಕೊಂಡಿರುವ ರೌಡಿಶೀಟರ್ ವಿ.ನಾಗರಾಜ್ ಯಾನೆ ಬಾಂಬ್ ನಾಗನ ಮೂವರು ಸಹಚರರನ್ನು ನಗರದ ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ನಗರದ ವಿಲ್ಸನ್‌ಗಾರ್ಡನ್ ನಿವಾಸಿ ಶರವಣ, ತಲಘಟ್ಟಪುರದ ಶ್ರೀನಿವಾಸ್, ಬೌನ್ಸರ್ ಕೆಲಸ ಮಾಡುತ್ತಿದ್ದ ಜಯ್ ಎಂಬುವರನ್ನು ಬಂಧಿಸಲಾಗಿದೆ ಎಂದ ತಿಳಿದುಬಂದಿದೆ. ಬಾಂಬ್‌ನಾಗ ಹಾಗೂ ಬಂಧಿತ ಆರೋಪಿಗಳಿಗೆ ನಂಟು ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಪ್ರಕರಣ ಸಂಬಂಧ ನಾಪತ್ತೆಯಾಗಿರುವ ಬಾಂಬ್ ನಾಗನಿಗೆ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.