ಮುಂದಿನ ಸಿಎಂ ಯಾರೆಂದು ಹೈಕಮಾಂಡ್ ತೀರ್ಮಾನ: ಸಿದ್ದರಾಮಯ್ಯ
Update: 2017-05-12 09:56 GMT
ಬೆಂಗಳೂರು, ಮೇ 12: ರಾಜ್ಯದಲ್ಲಿ ಮುಂದಿನ ಬಾರಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲಿದೆ. ನನ್ನ ನಾಯಕತ್ವದಲ್ಲೇ ಚುನಾವಣೆಯನ್ನು ಎದುರಿಸಲಿದ್ದೇವೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಆಗ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘‘ಮುಂದಿನ ಮುಖ್ಯಮಂತ್ರಿ ನಾನೇ’’ ಎಂದು ಈ ಮೊದಲು ಹೇಳಿಕೆ ನೀಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ''ಎಲ್ಲೂ ಮುಂದಿನ ಸಿಎಂ ನಾನೇ ಅಂತ ಹೇಳಿಲ್ಲ. ಕಾರ್ಯಕ್ರಮವೊಂದರಲ್ಲಿ ಯಾರೋ ಇಬ್ಬರು ಮುಂದಿನ ಮುಖ್ಯಮಂತ್ರಿ ನೀವೇ ಆಗಬೇಕು ಅಂದ್ರು. ಆಯ್ತಪ್ಪ, ನಾನೇ ಮುಂದಿನ ಸಿಎಂ ಆಗ್ತೀನಿ ಅಂತ ಆ ವ್ಯಕ್ತಿಗೆ ಹೇಳಿದ್ದೆ ಅಷ್ಟೆ. ಮುಂದಿನ ಚುನಾವಣೆಯಲ್ಲಿ ಸಿಎಂ ಯಾರಗಬೇಕೆಂದು ಹೈ ಕಮಾಂಡ್ ತೀರ್ಮಾನ ಮಾಡಲಿದೆ'' ಎಂದು ಸ್ಪಷ್ಟಪಡಿಸಿದರು.