ಇಂಗ್ಲಿಷ್‌ನಲ್ಲಿ 65ಅಂಕ ಪಡೆದ ವಿದ್ಯಾರ್ಥಿ ಅನುತ್ತೀರ್ಣ

Update: 2017-05-26 14:59 GMT

ಬೆಂಗಳೂರು, ಮೇ 26: ಪಿಯು ವೌಲ್ಯಮಾಪಕನ ಅವಾಂತರದಿಂದಾಗಿ ಇಂಗ್ಲಿಷ್ ವಿಷಯದಲ್ಲಿ 65 ಅಂಕ ಪಡೆದಿದ್ದರೂ 15 ಅಂಕ ಎಂದು ನಮೂದಿಸುವ ಮೂಲಕ ಕಲಾ ವಿಭಾಗದ ವಿದ್ಯಾರ್ಥಿ ಪ್ರಜ್ವಲ್‌ರನ್ನು ಅನುತ್ತೀರ್ಣಗೊಳಿಸಲಾಗಿದೆ.

ವಿದ್ಯಾರ್ಥಿ ಪ್ರಜ್ವಲ್ ಇಂಗ್ಲಿಷ್ ವಿಷಯದ ಉತ್ತರ ಪತ್ರಿಕೆಯನ್ನು ವೌಲ್ಯಮಾಪನ ಮಾಡಿರುವ ವೌಲ್ಯಮಾಪಕ ವೌಲ್ಯಮಾಪನದ ವೇಳೆ 65 ಅಂಕ ನೀಡಿದ್ದಾರೆ. ಆದರೆ, ಒಟ್ಟು ಅಂಕ ಹಾಕುವ ವೇಳೆ 15 ಎಂದು ನಮೂದಿಸಿದ್ದಾರೆ. ಹೀಗಾಗಿ ಫಲಿತಾಂಶ ನೋಡಿ ಆತಂಕಗೊಂಡ ವಿದ್ಯಾರ್ಥಿ ಪ್ರಜ್ವಲ್, ಉತ್ತರ ಪತ್ರಿಕೆಯ ಸ್ಕಾನ್ ಕಾಪಿಯನ್ನು ತರಿಸಿಕೊಂಡು ನೋಡಿದಾಗ ವೌಲ್ಯಮಾಪಕನ ಅವಾಂತರ ಬೆಳಕಿಗೆ ಬಂದಿದೆ.

ಸಿಬ್ಬಂದಿಗಳ ನಿರ್ಲಕ್ಷ: ದ್ವಿತೀಯ ಪಿಯು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ ಬಗೆಹರಿಸುವ ಸಂಬಂಧ ಪದವಿ ಪೂರ್ವ ಪರೀಕ್ಷಾ ಮಂಡಳಿಯು ಮೂವರು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಆದರೆ, ಯಾವ ಸಿಬ್ಬಂದಿಗಳು ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆ ಹರಿಸುತ್ತಿಲ್ಲ. ವಿದ್ಯಾರ್ಥಿಗಳು ಯಾರನ್ನು ಕೇಳಬೇಕೆಂದು ತಿಳಿಯದೆ ಆತಂಕಕ್ಕೆ ಒಳಗಾಗುತ್ತಿದ್ದಾರೆ ಎಂದು ಪೋಷಕರು ಆರೋಪಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News