ಜೂ.21ರ ವರೆಗೆ ಅಧಿವೇಶನ ವಿಸ್ತರಣೆ
Update: 2017-06-12 15:06 GMT
ಬೆಂಗಳೂರು, ಜೂ. 12: ವಿಧಾನ ಮಂಡಲ ಅಧಿವೇಶನ ಕಲಾಪವನ್ನು ಜೂ.21ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರು ಪ್ರಕಟಿಸಿದ್ದಾರೆ.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯ ಬಳಿಕ ಈ ವಿಷಯ ಪ್ರಕಟಿಸಿದ ಕೋಳಿವಾಡ್, ಈ ಮೊದಲು ಜೂ.16ರ ವರೆಗೆ ಅಧಿವೇಶನ ನಿಗದಿಪಡಿಸಲಾಗಿತ್ತು. ಇದೀಗ ಜೂ.19, 20 ಮತ್ತು 21ರ ವರೆಗೆ ಕಲಾಪವನ್ನು ವಿಸ್ತರಣೆ ಮಾಡಲಾಗಿದೆ ಎಂದರು.
ಜೂ. 16ರ ವರೆಗೆ ವಿವಿಧ ಇಲಾಖೆ ಬೇಡಿಕೆಗಳ ಮೇಲಿನ ಚರ್ಚೆ ನಡೆಯಲಿದ್ದು, ಜೂ.19ಕ್ಕೆ ಚರ್ಚೆಗೆ ಸಚಿವರಿಂದ ಉತ್ತರ, ಜೂ.20ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರ ನೀಡಿದ್ದು, ಜೂ.21ರಂದು ವಿಧೇಯಕಗಳ ಮಂಡನೆ ನಡೆಯಲಿದೆ ಎಂದು ಕೋಳಿವಾಡ್ ತಿಳಿಸಿದರು.