ಬೆಂಗಳೂರು ಸಂಚಾರಕ್ಕೆ ಸ್ಮಾರ್ಟ್ ಕಾರ್ಡ್‌

Update: 2017-06-17 12:24 GMT

 ಬೆಂಗಳೂರು, ಜೂ.17: ನಗರದ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವವರಿಗೆ ಬಸ್ ಪ್ರಯಾಣದ ಜೊತೆಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಬಿಎಂಟಿಸಿ ಪ್ರಯಾಣಿಕರು ಚಿಲ್ಲರೆ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು, ಅನಿವಾರ್ಯ ಸಂದರ್ಭಗಳಲ್ಲಿ ಮಾಲ್‌ಗಳಲ್ಲಿ ಶಾಪಿಂಗ್ ಮಾಡಲು ಸೇರಿದಂತೆ ಅನೇಕ ಸೌಲಭ್ಯಗಳನ್ನು ಸ್ಮಾರ್ಟ್ ಕಾರ್ಡ್‌ನಿಂದ ಪಡೆಯಬಹುದಾಗಿದೆ.

ಪ್ರಯಾಣಿಕರು ಅಗತ್ಯವಿದ್ದಾಗ ಸ್ಮಾರ್ಟ್ ಕಾರ್ಡ್‌ಗೆ ರಿಚಾರ್ಜ್ ಮಾಡಿಸಿ ಪ್ರಯಾಣಿಸಬಹುದು. ಪ್ರಯಾಣಕ್ಕೆ ಅಗತ್ಯವಿಲ್ಲದ ವೇಳೆ ಬೇರೆ ಉಪಯೋಗಕ್ಕೆ ಬಳಸಿಕೊಳ್ಳಬಹುದಾಗಿದೆ.ಸ್ಮಾರ್ಟ್ ಕಾರ್ಡ್‌ಗೆ ಒಮ್ಮೆ ರಿಚಾರ್ಜ್ ಮಾಡಿಸಿಕೊಂಡ ನಂತರ ಅದನ್ನು ನಿಗದಿತ ವೇಳೆಯೊಳಗೆ ಖರ್ಚು ಮಾಡಬೇಕೆಂಬ ನಿಯಮವಿಲ್ಲ. ಯಾವಾಗ ಅಗತ್ಯವಿದ್ದಾಗ ಖರ್ಚು ಮಾಡಬಹುದಾಗಿದೆ. ಇದರಿಂದ ಪ್ರಯಾಣಿಕರು ಹಣವಿದ್ದಾಗ ರಿಚಾರ್ಜ್ ಮಾಡಿಸಿಕೊಳ್ಳಲು ಉತ್ತಮ ಅನುಕೂಲವಾಗಿದೆ.

ನವೆಂಬರ್‌ವಒಳಗೆ ಎಲ್ಲರಿಗೂ ಸ್ಮಾರ್ಟ್‌ಕಾರ್ಡ್: ಸದ್ಯ 4ಲಕ್ಷ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾಡ್ ನೀಡಲಾಗುವುದು. ನಂತರ ಹಂತ, ಹಂತವಾಗಿ ನವೆಂಬರ್‌ವೊಳಗೆ ಪ್ರತಿಯೊಬ್ಬರಿಗೂ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News