ವಿದ್ಯಾರ್ಥಿಗಳಿಗೆ ಬೇರೆ ಶಾಲೆಯಲ್ಲಿ ಪ್ರವೇಶ ಕಲ್ಪಿಸಿ: ಡಿಡಿಪಿಐಗೆ ಹೈಕೋರ್ಟ್ ಸೂಚನೆ

Update: 2017-06-23 14:48 GMT

ಬೆಂಗಳೂರು, ಜೂ.23: ಹೊರಮಾವು ರಸ್ತೆಯಲ್ಲಿರುವ ನ್ಯೂ ಮಿಲೇನಿಯಮ್ ಶಾಲೆಯಲ್ಲಿ ಆರ್‌ಟಿಇ ಪ್ರವೇಶ ನಿರಾಕರಿಸಲ್ಪಟ್ಟ 14 ಮಂದಿ ಮಕ್ಕಳಿಗೆ ಬೇರೆ ಶಾಲೆಯಲ್ಲಿ ಪ್ರವೇಶ ಕಲ್ಪಿಸುವಂತೆ ಡಿಡಿಪಿಐಗೆ ಹೈಕೋರ್ಟ್ ಸೂಚಿಸಿದೆ.
    
ಈ ಸಂಬಂಧ ಅಂಜಲ್ ವಿಜಯಕುಮಾರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಆರ್‌ಟಿಇ ಕಾಯ್ದೆ-2009ರ ಅಡಿಯಲ್ಲಿಯೇ ನ್ಯೂ ಮಿಲೇನಿಯಮ್ ಶಾಲೆಗೆ 14 ಮಂದಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯೂ ಮಿಲೇನಿಯಮ್ ಶಾಲೆಯ ಆಡಳಿತ ಮಂಡಳಿಯು ನಮ್ಮ ಶಾಲೆಯು ಭಾಷಾ ಅಲ್ಪಸಂಖ್ಯಾತರ ಶಾಲಾ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಎಂದು ಹೇಳಿ 14 ಮಂದಿ ವಿದ್ಯಾರ್ಥಿಗಳ ಪ್ರವೇಶವನ್ನು ನಿರಾಕರಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಅಲ್ಲದೆ, ಈ ಎಲ್ಲ ವಿದ್ಯಾರ್ಥಿಗಳೂ 2017ರ ಮಾರ್ಚ್ 6ರಂದು ಹೊರಡಿಸಿದ್ದ ನೋಟಿಫಿಕೇಷನ್ ಅನುಸಾರವಾಗಿ ಆರ್‌ಟಿಇ ಅರ್ಜಿ ಸಲ್ಲಿಸಿದ್ದರು ಎಂದು ತಿಳಿಸಿದರು.
      
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News