ಸರಕಾರದ ನಿರ್ಲಕ್ಷದಿಂದಾಗಿ ಅಬಕಾರಿ ಇಲಾಖೆಗೆ ಐದಾರು ಕೋಟಿ ನಷ್ಟ: ಎಚ್.ಡಿ.ಕುಮಾರ ಸ್ವಾಮಿ ಆರೋಪ

Update: 2017-07-05 11:44 GMT

ಬೆಂಗಳೂರು, ಜು.5: ಸರಕಾರದ ನಿರ್ಲಕ್ಷತನದಿಂದಾಗಿ ಅಬಕಾರಿ ಇಲಾಖೆಗೆ ಕಳೆದ ಎರಡು-ಮೂರು ದಿನದಲ್ಲಿ ರಾಜ್ಯ ಸರಕಾರಕ್ಕೆ 5ರಿಂದ 6 ಸಾವಿರ ಕೋಟಿ ರೂ.ನಷ್ಟವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಕಳೆದ ಡಿಸೆಂಬರ್‌ನಲ್ಲಿಯೇ ರಾಷ್ಟ್ರೀಯ ಹೆದ್ದಾರಿಗಳ ಸಮೀಪ ಬಾರ್‌ಗಳನ್ನು ನಿಷೇಧಿಸಿ ಆದೇಶ ನೀಡಿತ್ತು. ಆಗಲೇ ರಾಜ್ಯ ಸರಕಾರ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳುವುದನ್ನು ಬಿಟ್ಟು ಈಗ ಸಭೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಅಬಕಾರಿ ಇಲಾಖೆಯಿಂದ ರಾಜ್ಯ ಸರಕಾರಕ್ಕೆ ಸುಮಾರು 18ಸಾವಿರ ಕೋಟಿ ರೂ ಆದಾಯ ಬರಲಿದೆ. ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ಕಳೆದ 5ದಿನದಿಂದ 3500ವೈನ್‌ಶಾಪ್‌ಗಳು ಮುಚ್ಚುವಂತಾಗಿದೆ. ಇದರಿಂದ ಸರಕಾರಕ್ಕೆ ನಷ್ಟವಾಗುವ ಜೊತೆಗೆ ಸಾವಿರಾರು ಮಂದಿ ನೌಕರರು ಕೆಲಸವನ್ನು ಕಳೆದುಕೊಳ್ಳುವಂತಾಗಿದೆ ಎಂದು ಅವರು ವಿಷಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News