ಕೆಪಿಟಿಸಿಎಲ್ ಅವ್ಯವಹಾರ ತನಿಖೆಯಾಗಲಿ: ಎಚ್.ಡಿ.ಕುಮಾರಸ್ವಾಮಿ
Update: 2017-07-05 11:46 GMT
ಬೆಂಗಳೂರು, ಜು.5: ಕೆಪಿಟಿಸಿಎಲ್‌ನಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಕಳೆದ 10 ವರ್ಷಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಬೇಕು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ತಿಳಿಸಿದ್ದಾರೆ.
ಬುಧವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೂ ಕೆಪಿಟಿಸಿಎಲ್‌ಗೆ ಸುಮಾರು 16ಸಾವಿರ ಕೋಟಿ ರೂ.ಸಾಲ ಬರಬೇಕಿದೆ. ಈ ಬಗ್ಗೆ ಇಲಾಖೆಯ ಯಾವೊಬ್ಬ ಅಧಿಕಾರಿಗಳು ಗಂಭೀರವಾಗಿ ಚಿಂತಿಸುತ್ತಿಲ್ಲ ಎಂದು ಕಿಡಿಕಾರಿದರು.
ಇಲ್ಲಿಯವರೆಗೂ ಸೋಲಾರ್ ವಿದ್ಯುತ್‌ನಿಂದ ಎಷ್ಟು ವಿದ್ಯುತ್ ತಯಾರಿಸಿದ್ದೇವೆ ಎಂಬ ಮಾಹಿತಿಯಿಲ್ಲ. ಇನ್ನು ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ವಿದ್ಯುತ್ ಅಭಾವ ಹೆಚ್ಚಾಗುತ್ತಲೆ ಇದೆ. ಇಲ್ಲಿಯವರೆಗೂ 200ಮೆಗಾ ವ್ಯಾಟ್ ವಿದ್ಯುತ್ ಖರೀದಿ ಆಗಿಲ್ಲ. ಇದು ಹೀಗೆ ಮುಂದುವರೆದರೆ ಕೆಪಿಟಿಸಿಎಲ್ ಬೀದಿಗೆ ಬೀಳಲಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.