ಎಸೆಸೆಲ್ಸಿ ಪೂರಕ ಪರೀಕ್ಷೆಯಲ್ಲಿ ಫೇಲು: ವಿದ್ಯಾರ್ಥಿನಿ ಆತ್ಮಹತ್ಯೆ

Update: 2017-07-08 12:42 GMT

ಬೆಂಗಳೂರು, ಜು.8: ಎಸೆಸೆಲ್ಸಿ ಪೂರಕ ಪರೀಕ್ಷೆಯಲ್ಲೂ ಫೇಲಾಗಿದ್ದಕ್ಕೆ ನೊಂದ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ವೈಟ್‌ಫೀಲ್ಡ್‌ನ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ಮೃತಳನ್ನು ಅಂಬೇಡ್ಕರ್ ನಗರದ 6ನೆ ಕ್ರಾಸ್‌ನ ಮಂಜುನಾಥ್ ರತ್ನಮ್ಮ ದಂಪತಿಯ ಪುತ್ರಿ ರಶ್ಮಿ(16) ಎಂದು ಗುರುತಿಸಲಾಗಿದೆ.

ವರ್ತೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ರಶ್ಮಿ ಎಸೆಸೆಲ್ಸಿ ಪರೀಕ್ಷೆ ಹಾಗೂ ಪೂರಕ ಪರೀಕ್ಷೆಯಲ್ಲೂ ಫೇಲಾಗಿದ್ದಳು. ಇದರಿಂದ ನೊಂದಿದ್ದ ಆಕೆ ತಂದೆ-ತಾಯಿ ಇಬ್ಬರೂ ಸೆಕ್ಯೂರಿಟಿ ಕೆಲಸಕ್ಕೆ ಶುಕ್ರವಾರ ಬೆಳಗ್ಗೆ ಹೋಗಿದ್ದು, ಸಹೋದರಿಯರಿಬ್ಬರು ಶಾಲೆಗೆ ಹೋಗುವುದನ್ನು ಕಾಯ್ದುಕೊಂಡು ಎಲ್ಲರೂ ಹೋದ ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಮೊಕದ್ದಮೆ ದಾಖಲಿಸಿಕೊಂಡಿರುವ ವೈಟ್‌ಫೀಲ್ಡ್ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News