ಓ ಮೆಣಸೇ...

Update: 2017-07-16 18:37 GMT


  ಕರಾವಳಿ ಗಲಭೆ ಜವಾಬ್ದಾರಿಯನ್ನು ಕೇಂದ್ರಕ್ಕೆ ವಹಿಸಿದರೆ 24 ಗಂಟೆಗಳಲ್ಲಿ ಶಾಂತಿ ಸ್ಥಾಪಿಸಲಾಗುವುದು

-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಕಾಶ್ಮೀರ, ಉತ್ತರ ಪ್ರದೇಶದಲ್ಲಿ ಸ್ಥಾಪಿಸಿರುವ ಶಾಂತಿಯನ್ನೇ?
---------------------

ಕರಾವಳಿ ಗಲಭೆಯ ಹಿಂದೆ ಐಎಸ್‌ಐ ಕೈವಾಡ ಇದೆ

-ಸಿ.ಟಿ.ರವಿ, ಶಾಸಕ
 
ನನಗೂ ಐಎಸ್‌ಐಗೂ ಸಂಬಂಧವಿಲ್ಲ ಎಂದರಂತೆ ಪ್ರಭಾಕರ ಭಟ್ಟರು.

---------------------
  ಬಲು ಕಷ್ಟದ ಗಂಗಾನದಿ ಶುದ್ಧೀಕರಣದ ಹೊಣೆಗಾರಿಕೆ ನನ್ನ ಮೇಲಿದೆ

-ಉಮಾಭಾರತಿ, ಕೇಂದ್ರ ಸಚಿವೆ

ಹಣಗಾರಿಕೆಯಲ್ಲಂತೂ ಯಶಸ್ವಿಯಾಗಬಹುದು ಬಿಡಿ.

---------------------
ದೇಶದ ಸಂಸ್ಕೃತಿ ಮತ್ತು ಪರಂಪರೆಯ ಆಧಾರದ ಮೇಲೆ ಕೇಂದ್ರ ಸರಕಾರ ಆಡಳಿತ ನಡೆಸುತ್ತಿದೆ

-ವಿ.ರಾಮ್‌ಮಾಧವ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಮನುಷ್ಯರನ್ನು ಕೊಲ್ಲುವುದು ದೇಶದ ಸಂಸ್ಕೃತಿ ಮತ್ತು ಪರಂಪರೆಯೇ?
---------------------

ಗೋವಿನ ರಕ್ಷಣೆ ಮಾಡಿದರೆ ನಾಡಿನ ಸಂಸ್ಕೃತಿ ,ಪರಂಪರೆ ಉಳಿಯಲಿದೆ

-ರಾಘವೇಶ್ವರ ಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠ

ಹೆಣ್ಣಿನ ಮಾನ ರಕ್ಷಣೆಗೂ ಸಂಸ್ಕೃತಿಗೂ ಸಂಬಂಧವಿಲ್ಲವೇ?
---------------------

ಅರಣ್ಯದಲ್ಲಿ ಪ್ರಾಣಿಗಳಿಗೆ ಆಹಾರ, ನೀರು ಸಿಗುವಂತಾಗಬೇಕು

-ಸಿದ್ದರಾಮಯ್ಯ, ಮುಖ್ಯಮಂತ್ರಿ

ನಾಡಿನಲ್ಲಿ ಮನುಷ್ಯರಿಗೆ ಅದನ್ನು ಯಾವಾಗ ಒದಗಿಸುತ್ತೀರಿ?
---------------------

ಜಿಎಸ್‌ಟಿ ತುಂಬ ಸರಳ ತೆರಿಗೆ ವ್ಯವಸ್ಥೆಯಾಗಿದ್ದು, ಜನ ಸಂಭ್ರಮ ಪಡುತ್ತಿದ್ದಾರೆ

-ವೆಂಕಯ್ಯನಾಯ್ಡು, ಕೇಂದ್ರ ಸಚಿವ

ತೆರಿಗೆ ವಿಧಿಸಿದ್ದಕ್ಕಾಗಿ ಸಂಭ್ರಮ ಪಡುತ್ತಿರುವ ದೇಶವನ್ನು ವಿಶ್ವ ಅಚ್ಚರಿಯಿಂದ ನೋಡುತ್ತಿದೆ.

---------------------

ಚಿಕ್ಕಪ್ಪ (ಎಚ್.ಡಿ.ಕುಮಾರಸ್ವಾಮಿ)ನ ವಿರುದ್ಧವಾಗಿ ಹೋಗುವುದಿಲ್ಲ ಎಂದು ಪ್ರಜ್ವಲ್ ಹೇಳಿದ್ದಾನೆ

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ನೀವು ಆತನ ಪತ್ರಿಕಾ ವಕ್ತಾರರೇ?
---------------------

ಏನೇ ನಡೆದರೂ ನೋಡಿಕೊಂಡು ಸುಮ್ಮನಿರಲು ದ.ಕ.ದವರೇನು ಷಂಡರಾ?

-ಶೋಭಾ ಕರಂದ್ಲಾಜೆ, ಸಂಸದೆ

ಅವರು ನೋಡಿಕೊಂಡು ಖಂಡಿತಾ ಸುಮ್ಮನಿರುವುದಿಲ್ಲ. ನಿಮಗೊಂದು ಪಾಠವನ್ನು ಚುನಾವಣೆಯಲ್ಲಿ ಕಲಿಸುತ್ತಾರೆ. ---------------------

ಸೂಟ್‌ಕೇಸ್ ಪಡೆದವರು ಪಕ್ಷ ಬಿಟ್ಟಿದ್ದಾರೆ

-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
 
ನಾನಿನ್ನೂ ಪಕ್ಷದಲ್ಲೇ ಇದ್ದೇನೆ ಎಂದರಂತೆ ದೇವೇಗೌಡರು.

---------------------

ಮಂಗಳೂರಿನಲ್ಲಿ ಒಳ್ಳೆಯ ಕೆಲಸಕ್ಕಿಂತ ಕೆಟ್ಟ ಕೆಲಸಗಳೇ ಹೈಲೆಟ್ ಆಗುತ್ತಿದೆ

-ಯು.ಟಿ.ಖಾದರ್, ಸಚಿವ

ಮಾಡಿದ ಒಂದು ಒಳ್ಳೆಯ ಕೆಲಸವನ್ನಾದರೂ ಬಹಿರಂಗಪಡಿಸಬಾರದೇ?
---------------------

ನನ್ನ ಬಳಿ ಪೂರ್ವಿಕರು ಬಿಟ್ಟು ಹೋದ ಆಸ್ತಿ ಬಿಟ್ಟು, ಬಿಡಿಗಾಸೂ ಇಲ್ಲ

-ನರೇಂದ್ರ ಮೋದಿ, ಪ್ರಧಾನಿ
ಚಹಾದ ಅಂಗಡಿ ಜೊತೆಗೆ ಆಸ್ತಿಯೂ ಇದೆ ಎಂದಾಯಿತು.

---------------------

ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳಲ್ಲೂ ಕಳ್ಳರಿದ್ದಾರೆ

-ರಮೇಶ್‌ಕುಮಾರ್, ಸಚಿವ

ನೀವು ಮಾತ್ರ ಅದನ್ನು ಒಪ್ಪಿಕೊಂಡಿದ್ದೀರಿ ಅಲ್ಲವೇ?
---------------------

ಮುಗ್ಧರನ್ನು ಬಲಿ ಪಡೆಯುವ ಭಯೋತ್ಪಾದಕ ಕೃತ್ಯಗಳು ಹೇಡಿತನದ ಸಂಕೇತ

-ಪ್ರಣವ್ ಮುಖರ್ಜಿ, ರಾಷ್ಟ್ರಪತಿ

ದೇಶದೊಳಗಿರುವ ಹೇಡಿಗಳನ್ನೂ ಒಂದಿಷ್ಟು ಖಂಡಿಸಿ.

---------------------

ರಾಹುಲ್ ಗಾಂಧಿ ಬಚ್ಚಾ ಅಲ್ಲ, ಭಾವಿ ಪ್ರಧಾನಿ

- ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಮೊದಲು ಬಾವಿಯೊಳಗಿರುವ ಕಾಂಗ್ರೆಸ್‌ನ್ನು ಮೇಲೆತ್ತಿ.

---------------------

ಪ್ರಧಾನಿ ಮೋದಿ ಆರೆಸ್ಸೆಸ್‌ನಲ್ಲೇ ಇರುತ್ತಿದ್ದರೆ ಗುಜರಾತ್‌ನ ಸಿಎಂ, ದೇಶದ ಪ್ರಧಾನಿ ಆಗುತ್ತಿರಲಿಲ್ಲ  

-ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಬದಲಿಗೆ ನೀವು ಆ ಸ್ಥಾನ ತುಂಬುತ್ತಿದ್ದಿರಿ ಎಂದಾಯಿತು.

---------------------
ಅಮಾನ್ಯ ನೋಟುಗಳ ಎಣಿಕೆ ಇನ್ನೂ ಮುಗಿದಿಲ್ಲ

-ಡಾ.ಉರ್ಜಿತ್ ಪಟೇಲ್, ಆರ್‌ಬಿಐ ಗವರ್ನರ್

ಇನ್ನೊಂದು ಚುನಾವಣೆ ಬರುವವರೆಗೂ ಎಣಿಸುತ್ತಲೇ ಇರಿ ಎಂದು ಮೋದಿಯಿಂದ ಆದೇಶ ಬಂದಿದೆಯೇ?
---------------------

2004ರಲ್ಲಿ ನನಗೆ ಮೀಸೆಯೇ ಬಂದಿರಲಿಲ್ಲ, ಬೇನಾಮಿ ಆಸ್ತಿ ಹೇಗೆ ಗಳಿಸಲಿ?

-ತೇಜಸ್ವಿ ಯಾದವ್, ಬಿಹಾರ ಉಪಮುಖ್ಯಮಂತ್ರಿ

ಲಾಲು ಪ್ರಸಾದ್ ಅದಕ್ಕೇ ಇರಬೇಕು ಮೀಸೆ ಇಡದೇ ಇರುವುದು.

---------------------
ಸಂಸದೆ ಶೋಭಾ ಕರಂದ್ಲಾಜೆ ದಲಿತರನ್ನು ಮದುವೆಯಾಗಲಿ

-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ

ಮದುವೆ ಬ್ರೋಕರ್ ಕೆಲಸ ಬಿಟ್ಟು ರಾಜಕಾರಣಿಗಳಂತೆ ಮಾತನಾಡಿ.

---------------------

ಪ್ರಧಾನಿ ನರೇಂದ್ರ ಮೋದಿ ಮತ್ತೊಬ್ಬ ಮಹಾತ್ಮಾ ಗಾಂಧಿ

-ಮಹೇಶ್ ಶರ್ಮಾ, ಕೇಂದ್ರ ಸಚಿವ

ಮತ್ತೊಬ್ಬ ಗೋಡ್ಸೆ ಯಾರು ಎನ್ನುವುದನ್ನೂ ಹೇಳಿ ಬಿಡಿ.

---------------------

ಹಿಂದೂಗಳ ರಕ್ಷಣೆಗೆ ಮುಂದಿನ ಆಯುಧ ಪೂಜೆಯಂದು ಮನೆಮನೆಗಳಲ್ಲಿ ಆಯುಧಗಳನ್ನು ಪೂಜಿಸಬೇಕು

-ಸುನೀಲ್ ಕುಮಾರ್ ಶಾಸಕ

ಸಂಘಪರಿವಾರದಿಂದ ಹಿಂದೂಗಳನ್ನು ರಕ್ಷಿಸುವ ದಾರಿಯನ್ನು ಹುಡುಕಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!