ಓ ಮೆಣಸೇ...

Update: 2017-07-30 18:37 GMT

 ಒಂದು ವರ್ಷದಲ್ಲಿ ದ.ಕ.ಜಿಲ್ಲೆ ಹೊಗೆ ಮುಕ್ತ

-ನಳಿನ್‌ಕುಮಾರ್ ಕಟೀಲು, ಸಂಸದ

   ಬೆಂಕಿ ಮುಕ್ತವಾಗುವುದು ಯಾವಾಗ?

---------------------

   ಕಾಂಗ್ರೆಸ್ ಪುನಶ್ಚೇತನಕ್ಕಾಗಿ ಪಕ್ಷ ಮಹಾಮೈತ್ರಿಗೆ ಹೆಚ್ಚಿನ ಮಹತ್ವ ನೀಡಿದೆ

- ಜೈರಾಮ್ ರಮೇಶ್, ಕಾಂಗ್ರೆಸ್ ಮುಖಂಡ

ಮೈತ್ರಿಯಲ್ಲಿ ಬಿಜೆಪಿಯನ್ನೂ ಸೇರಿಸಿಕೊಳ್ಳುವ ಯೋಜನೆ ಇದೆಯೇ?

---------------------

  ನಮ್ಮದು ಶಾಂತಿಪ್ರಿಯ ರಾಷ್ಟ್ರ

-ವೆಂಕಯ್ಯ ನಾಯ್ಡು, ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ

   ಗುಂಪುಹಲ್ಲೆಗಳು, ಚೂರಿ ಇರಿತಗಳು ಶಾಂತಿಯ ಪ್ರತಿಬಿಂಬಗಳೇ?

---------------------

  ಮುಂದಿನ ವಿಧಾನಸಭೆ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ

   -ಜನಾದರ್ನ ರೆಡ್ಡಿ, ಮಾಜಿ ಸಚಿವ

ಬಿಜೆಪಿ ಬಳಸಿ ಎಸೆದ ಬಾಳೆ ಎಲೆಯ ಆರ್ತನಾದ.

---------------------

  ನೋಟುಗಳ ಅಮಾನ್ಯೀಕರಣ ನಕ್ಸಲರ ಭದ್ರ ಬುನಾದಿಯನ್ನೇ ಅಲುಗಾಡಿಸಿದೆ

-ಡಾ.ರಮಣಸಿಂಗ್, ಛತ್ತೀಸ್‌ಗಡ ಮುಖ್ಯಮಂತ್ರಿ

   ಈ ದೇಶದ ಬಡಪಾಯಿ ಪ್ರಜೆಗಳೆಲ್ಲ ಇವರ ದೃಷ್ಟಿಯಲ್ಲಿ ನಕ್ಸಲರೇ ಇರಬೇಕು.

---------------------

  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ನಾನು ಮತ್ತು ಎಚ್.ಡಿ.ರೇವಣ್ಣ ಮಾತ್ರ ಸ್ಪರ್ಧೆ

   -ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಉಳಿದವರೆಲ್ಲ ಕಾಂಗ್ರೆಸ್, ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆಯೇ?

---------------------

  ನಾನು ಅಹಿಂದ ಎನ್ನುವ ಟೀಕೆ ‘ಕಾಂಪ್ಲಿಮೆಂಟ್’ ಇದ್ದ ಹಾಗೆ

   -ಸಿದ್ದರಾಮಯ್ಯ, ಮುಖ್ಯಮಂತ್ರಿ

ಆದರೆ ಅಹಿಂದ ವರ್ಗಕ್ಕೆ ಮಾತ್ರ ಯಾಕೋ ಇರುಸು ಮುರುಸಾಗುತ್ತಿದೆ.

---------------------

  ನನ್ನನ್ನು ಸೃಷ್ಟಿಸಿದ್ದೇ ಸಂಸತ್.

   -ಪ್ರಣವ್ ಮುಖರ್ಜಿ, ಮಾಜಿ ರಾಷ್ಟ್ರಪತಿ

ಮತ್ತೆ ತಿಂಗಳಿಗೊಮ್ಮೆ ತಿರುಪತಿಯಲ್ಲಿ ಬಟ್ಟೆ ಬಿಚ್ಚಿ ನಿಲ್ಲುತ್ತಿದ್ದುದು ಯಾಕೆ?

---------------------

  ಸರಕಾರ ಹಿಂದುತ್ವದ ಪರ ಇರುವ ಅಧಿಕಾರಿಗಳನ್ನು ಗುರಿಯಾಗಿಸಿ ಶಿಕ್ಷೆ ನೀಡುವುದು ಸರಿಯಲ್ಲ

   -ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ಸ್ವಾಮೀಜಿಗಳನ್ನು ಗುರಿಯಾಗಿಸಿ ಶಿಕ್ಷೆ ಕೊಡುವುದಕ್ಕೆ ಅವಕಾಶ ಇಲ್ಲವಲ್ಲ?

---------------------

  ಪಾಕ್ ಮತ್ತು ಚೀನಾಕ್ಕಿಂತಲೂ ಶಿವಸೇನೆಯೇ ತನ್ನ ಅತಿದೊಡ್ಡ ವೈರಿ ಎಂದು ಬಿಜೆಪಿ ಭಾವಿಸಿರುವುದು ದುರ್ದೈವ

  -ಉದ್ಭವ್ ಠಾಕ್ರೆ, ಶಿವಸೇನೆ ನಾಯಕ

ಮಹಾರಾಷ್ಟ್ರ ಸರಕಾರದೊಳಗಿನ ಗಡಿ ವಿವಾದಕ್ಕಿರಬಹುದು.

---------------------

  ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ

   -ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧಕ್ಷರು

ಅದಕ್ಕಾಗಿ ಕಾಂಗ್ರೆಸ್‌ನಲ್ಲಿಯೇ ಬಹಳಷ್ಟು ನಾಯಕರು ಇದ್ದಾರಲ್ಲ?

---------------------

  ಪರಪ್ಪನ ಅಗ್ರಹಾರ ಪಂಚತಾರಾ ಜೈಲು

   -ಕಮಲ್ ಹಾಸನ್, ನಟ

ಮತ್ತೇಕೆ ತಡ, ತಾವೂ ಒಮ್ಮೆ ಹೋಗಿ ಬರಬಹುದಲ್ಲ?

---------------------

  ದೇಶದ ಸಮಗ್ರತೆ ಕಾಪಾಡುವಷ್ಟು ಶಸ್ತ್ರಾಸ್ತ್ರ ಬಲ ನಮ್ಮ ಸೇನೆಯಲ್ಲಿದೆ

-ಅರುಣ್‌ಜೇಟ್ಲಿ, ಕೇಂದ್ರ ಸಚಿವ

ಸೈನಿಕರಿಗೆ ಒಳ್ಳೆಯ ಆಹಾರದ ಕೊರತೆ ಮಾತ್ರ, ಈಗಿನ ಸಮಸ್ಯೆ ಇರಬೇಕು.

---------------------

  ಚಾಲಕ ರಹಿತ ಕಾರುಗಳಿಗೆ ಭಾರತದಲ್ಲಿ ಅವಕಾಶವಿಲ್ಲ

   -ನಿತಿನ್ ಗಡ್ಕರಿ, ಕೇಂದ್ರ ಸಚಿವ

ಚಾಲಕರಿದ್ದೇ ರಸ್ತೆಗಳಲ್ಲಿ ರಕ್ತದ ಓಕುಳಿಯಾಗುತ್ತಿದೆ.

---------------------

  ಚುನಾವಣೆ ಮಾತ್ರ ಮನಸ್ಸಿನಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡದಾರಿಯಲ್ಲಿ ನಡೆಯುತ್ತಿದ್ದಾರೆ

   -ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

ನೀವು ಯಡಿಯೂರಪ್ಪನವರನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡುತ್ತಿರುವುದು ಸರಿಯೇ?

---------------------

  ಚೀನಾದ ಎಲ್ಲ ಉತ್ಪನ್ನಗಳನ್ನು ಭಾರತೀಯರು ಧಿಕ್ಕರಿಸಬೇಕು

   -ಬಾಬಾ ರಾಮ್‌ದೇವ್, ಯೋಗಗುರು

 ಬಳಿಕ ನಿಮ್ಮ ಕಳಪೆ ಉತ್ಪನ್ನಗಳನ್ನು ಬಳಸಿ ಆರೋಗ್ಯ ಕೆಡಿಸಿಕೊಳ್ಳಬೇಕೇ?

---------------------

  ಮಹಾಮೈತ್ರಿ ಉಳಿಸಿಕೊಳ್ಳಲು ನಾನು ಸಾಕಷ್ಟು ಪ್ರಯತ್ನ ಪಟ್ಟೆ

-ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ ಕೊನೆಗೂ ನಿಮ್ಮ ಪ್ರಯತ್ನ ಫಲಿಸಿತು.

---------------------

  ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ನಯವಂಚಕ

-ರಾಹುಲ್ ಗಾಂಧಿ, ಎಐಸಿಸಿ ಉಪಾಧ್ಯಕ್ಷ

ಅಧಿಕಾರಕ್ಕಾಗಿ ಅಂತರಾತ್ಮವನ್ನು ಕೆಲವೊಮ್ಮೆ ಮಾರಿಕೊಳ್ಳುವುದು ಅನಿವಾರ್ಯ.

---------------------

  ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವವರೆಗೆ ವಿಶ್ರಮಿಸುವುದಿಲ್ಲ

   -ಎಚ್.ವಿಶ್ವನಾಥ್, ಮಾಜಿ ಸಂಸದ

ಕಾಂಗ್ರೆಸ್‌ನಲ್ಲಿರುವಾಗ ವಿಶ್ರಮಿಸಿ ಸಾಕಾಯಿತೆಂದು ಕಾಣುತ್ತದೆ.

---------------------

  ಬಿಹಾರದ ರಾಜಕೀಯ ಬೆಳವಣಿಗೆ ಇಷ್ಟೊಂದು ಕೀಳುಮಟ್ಟಕ್ಕೆ ಹೋಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಏನಿದ್ದರೂ ಜೆಡಿಸ್ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಷ್ಟು ಅಲ್ಲ 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!