ಓ ಮೆಣಸೇ..

Update: 2017-09-10 19:03 GMT


  ಕೇರಳದ ಜನರು ದನದ ಮಾಂಸ ತಿನ್ನುವುದಕ್ಕೆ ಯಾವುದೇ ಅಡೆತಡೆ ಇಲ್ಲ.
- ಅಲ್ಫೋನ್ಸೋ ಕನ್ನಂ ತಾನಂ, ಕೇಂದ್ರ ಸಚಿವ
 
ಮನುಷ್ಯರ ಮಾಂಸ ತಿನ್ನುವವರ ಬಗ್ಗೆಯೂ ಅಭಿಪ್ರಾಯ ಹೇಳಿಬಿಡಿ.

---------------------
 
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ
- ಡಾ.ಜಿ.ಪರಮೇಶ್ವರ್,  ಕೆಪಿಸಿಸಿ ಅಧ್ಯಕ್ಷ
  ಸದಭಿಪ್ರಾಯವಿಲ್ಲ ಎಂದರೆ ಆದೀತೇ?
---------------------
 
ಕಪ್ಪು ಹಣದ ವಿರುದ್ಧ ಹೋರಾಟ ಮುಂದುವರಿಯುತ್ತದೆ
- ನರೇಂದ್ರ ಮೋದಿ, ಪ್ರಧಾನಿ
ಅಂದರೆ ದೇಶ ಇನ್ನೊಮ್ಮೆ ನೋಟು ನಿಷೇಧ ಎದುರಿಸಬೇಕೇ?
---------------------
ಮುಖ್ಯಮಂತ್ರಿ ‘ಯೋಗಿ’ ಉತ್ತರಪ್ರದೇಶವನ್ನು ‘ರೋಗಿ’ಯಾಗಿ ಮಾಡುತ್ತಿದ್ದಾರೆ.
- ರಣದೀಪ್ ಸಿಂಗ್ ಸುರ್ಜೆವಾಲಾ, ಕಾಂಗ್ರೆಸ್ ಮುಖಂಡ
  ಕಾಂಗ್ರೆಸ್ ಯಾಕೆ ಐಸಿಯುನಲ್ಲಿದೆ?
---------------------
 
ಯಾವುದೇ ಸಾಹಸವಾಗಲಿ ಆರಂಭದ ಹಂತ ದಾಟಿದರೆ ಮತ್ತೆ ಸಲೀಸು - ಬಾಬಾ ರಾಮ್‌ದೇವ್, ಯೋಗಗುರು
  ಪತಂಜಲಿ ಸರ್ಕಸ್ ಕಂಪೆನಿ ಆರಂಭಿಸುತ್ತಿದ್ದೀರಾ?
---------------------
 
ರಾಜ್ಯದಲ್ಲಿ ಬಿಜೆಪಿಗೆ ಕಾಂಗ್ರೆಸ್ ಸವಾಲೇ ಅಲ್ಲ.
- ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ
 
ಯಡಿಯೂರಪ್ಪ, ಈಶ್ವರಪ್ಪರೇ ದೊಡ್ಡ ಸವಾಲಿರಬೇಕು.

---------------------
 
ಯಾರಿಗೂ ನನ್ನಿಂದ ಗಂಗೆಯನ್ನು ಕಿತ್ತುಕೊಳ್ಳಲಾಗದು
- ಉಮಾಭಾರತಿ, ಕೇಂದ್ರ ಸಚಿವೆ
  ಆ ಖಾತೆ ಅಷ್ಟೂ ಲಾಭದಾಯಕವೇ?
---------------------
 
ಬಾಂಬ್ ಇಟ್ಟುಕೊಂಡು ರ್ಯಾಲಿ ಮಾಡುವವರಿಗೆ ಸರಕಾರ ಅನುಮತಿ ಕೊಡುತ್ತದೆ.
-ಸಿ.ಟಿ.ರವಿ, ಶಾಸಕ
  ಅಂದರೆ ಬಾಂಬ್ ಇಟ್ಟುಕೊಂಡು ಮತ್ತೊಂದು ರ್ಯಾಲಿ ಹಮ್ಮಿಕೊಳ್ಳುವ ಯೋಚನೆಯೇ?
---------------------
 
ಭದ್ರತೆ ಮತ್ತು ರಕ್ಷಣೆ ವಿಚಾರದಲ್ಲಿ ಭಾರತ ಯಾರಿಗೂ ತಲೆ ಬಾಗುವುದಿಲ್ಲ -ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
  ಯಾರ ಭದ್ರತೆ ಮತ್ತು ಯಾರ ರಕ್ಷಣೆ?
---------------------
ಮುಖ್ಯಮಂತ್ರಿ ಸಿದ್ದರಾಮಯ್ಯರಿಗಿಂತ, ಗ್ರಾಮ ಪಂಚಾಯತ್ ಅಧ್ಯಕ್ಷ ಚೆನ್ನಾಗಿ ಆಡಳಿತ ನಡೆಸುತ್ತಾನೆ
- ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
  ಅಂದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲುವ ಉದ್ದೇಶವೇ?
---------------------
  ಶಿಕ್ಷಕರು ಎಂದಿಗೂ ಮಾಜಿಗಳಾಗುವುದಿಲ್ಲ
- ಪ್ರಮೋದ್ ಮಧ್ವರಾಜ್, ಸಚಿವ
 
ಕೆಲವು ರಾಜಕಾರಣಿಗಳು ಮಾಜಿಗಳಾಗಬೇಕಾದುದು ಇಂದಿನ ಅಗತ್ಯ.

---------------------
 
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಟ್ಲರ್‌ನಂತೆ.
- ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
 
ನರೇಂದ್ರ ಮೋದಿಯ ಬಿರುದನ್ನು ಸಿದ್ದರಾಮಯ್ಯಗೆ ವರ್ಗಾಯಿಸಿದ್ದಕ್ಕೆ ಭಕ್ತರು ನಿಮ್ಮ ಮೇಲೆ ಬೀಳಲಿದ್ದಾರೆ.

---------------------
  ಜಿಎಸ್‌ಟಿ ಜಾರಿಯಿಂದ ಭಾರತದಲ್ಲಿ ವಹಿವಾಟು ಸುಗಮವಾಗಿದೆ.
- ಸುಶ್ಮಾ ಸ್ವರಾಜ್, ಕೇಂದ್ರ ಸಚಿವೆ
  ಯಾರಿಗೆ ಎನ್ನುವುದು ಮುಖ್ಯ.
---------------------
 
ರಾಜ್ಯ ಸರಕಾರಕ್ಕೆ ಶಾಂತಿ ಸುವ್ಯವಸ್ಥೆ ಕಾಪಾಡುವ ಶಕ್ತಿಯಿಲ್ಲ
- ಶೋಭಾ ಕರಂದ್ಲಾಜೆ, ಸಂಸದೆ
 
ಶಕ್ತಿಯಿದೆಯೇ ಎಂದು ಪರೀಕ್ಷಿಸಲು ಅಶಾಂತಿ ಹುಟ್ಟಿಸುತ್ತಿದ್ದೀರಿ ಎಂದು ಕಾಣುತ್ತದೆ.

---------------------
ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಶನಿ ಹಿಡಿದಿದೆ - ಜನಾದರ್ನ ಪೂಜಾರಿ, ಕಾಂಗ್ರೆಸ್ ಮುಖಂಡ
  ತಮ್ಮನ್ನು ತಾವೇ ಶನಿಗೆ ಹೋಲಿಸಿರುವುದು ಎಷ್ಟು ಸರಿ?
---------------------
 
ಇಂದಿನ ಮಕ್ಕಳಲ್ಲಿ ಪ್ರಶ್ನೆಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.
- ಡಾ.ವೀರೇಂದ್ರ ಹೆಗ್ಗಡೆ, 
ಧರ್ಮಾಧಿಕಾರಿ ಧರ್ಮಸ್ಥಳ
  ಮುಂದಿನ ದಿನಗಳಲ್ಲಿ ಸಂಘಪರಿವಾರ ಇನ್ನಷ್ಟು ಪಿಸ್ತೂಲುಗಳನ್ನು ಖರೀದಿಸಬೇಕಾಗುತ್ತದೆ.
---------------------
  ಆಂಧ್ರದ ನಾಗರಿಕರು ಹೆಚ್ಚು ಮಕ್ಕಳನ್ನು ಹೆರಬೇಕು.
- ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಮುಖ್ಯಮಂತ್ರಿ
 
ರಾಜಕೀಯವಾಗಿ ಅವರನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕಾಗಿ ಇರಬೇಕು.

---------------------
  ಗುರುಗಳು ನಿಜವಾದ ಜಗದ್ಗುರು.
- ನಳಿನ್‌ಕುಮಾರ್ ಕಟೀಲು, ಸಂಸದ
  ಜಗದ್ಗುರುಗಳಿಗೆ ಹೋಲಿಸಿ ಗುರುಗಳನ್ನು ಅವಮಾನ ಮಾಡುವುದೇ?
---------------------
 
ಆರೆಸ್ಸೆಸ್ ಬಗ್ಗೆ ರಾಹುಲ್ ಮತ್ತು ಸೋನಿಯಾಗೆ ಏನೂ ಗೊತ್ತಿಲ್ಲ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
 
ಹೌದು. ಅವರ ಪಾತಕಗಳ ಕುರಿತಂತೆ ನಿಮ್ಮಷ್ಟು ಅವರಿಗೆ ಗೊತ್ತಿರಲಿಕ್ಕಿಲ್ಲ.

---------------------
 
ನಾವು ನಮ್ಮ ದೇಶವನ್ನು ಸುಧಾರಣೆ ಮಾಡುತ್ತಿಲ್ಲ, ಪರಿವರ್ತನೆ ಮಾಡುತ್ತಿದ್ದೇವೆ.
- ನರೇಂದ್ರ ಮೋದಿ, ಪ್ರಧಾನಿ
 
ಅಂತೂ ಸುಧಾರಣೆ ನಿಮ್ಮ ಗುರಿಯಲ್ಲ ಎನ್ನುವುದನ್ನು ಒಪ್ಪಿಕೊಂಡಿರಿ.

---------------------
 
ಸಹಿಷ್ಣುತೆ ಎನ್ನುವುದು ಭಾರತದ ಸಂಸ್ಕೃತಿ - ಮುಖ್ತಾರ್‌ಅಬ್ಬಾಸ್ ನಖ್ವಿ,
ಕೇಂದ್ರ ಸಚಿವ
  ಅಸಹಿಷ್ಣುತೆ ಸಂಘಪರಿವಾರದ ಸಂಸ್ಕೃತಿಯಿರಬೇಕು.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!