ಓ ಮೆಣಸೇ..

Update: 2017-09-18 08:23 GMT

ಉ.ಪ್ರ.ದಲ್ಲಿ ಆದಂತೆ ಕರ್ನಾಟಕದ ‘ಯೋಗಿ’ ಆಗುವಂತಹ ಕನಸುಗಳು ನನಗೆ ಬೀಳುತ್ತಿಲ್ಲ -ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ

ಸದ್ಯಕ್ಕೆ ರೋಗಿಯಾಗುವ ಎಲ್ಲ ಅವಕಾಶಗಳೂ ನಿಮಗಿವೆ.

---------------------

ಕರ್ನಾಟಕದಲ್ಲಿ ದೇಶಭಕ್ತರ ಹತ್ಯೆ ನಡೆಯುತ್ತಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಗೌರಿಯ ಹತ್ಯೆಯ ಕುರಿತಂತೆ ಈ ಹೇಳಿಕೆಯೇ?
---------------------
 
ಕಾಶ್ಮೀರ ಸ್ವರ್ಗ ಆಗೋದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ - ರಾಜನಾಥ್ ಸಿಂಗ್, ಕೇಂದ್ರ ಸಚಿವ

ಶ್ರೀಸಾಮಾನ್ಯರಂತೂ ಒಬ್ಬೊಬ್ಬರಾಗಿ ಸ್ವರ್ಗವಾಸಿಯಾಗುತ್ತಿದ್ದಾರೆ.

---------------------
  
ಗೌರಿ ಲಂಕೇಶ್ ಹತ್ಯೆಯಂತಹದ್ದೇನಾದರೂ ಬಿಹಾರದಲ್ಲಿ ನಡೆದಿದ್ದರೆ ದೇಶದಾದ್ಯಂತ ದೊಡ್ಡ ವಿವಾದವೇ ಆಗುತಿತ್ತು - ನಿತೀಶ್ ಕುಮಾರ್ , ಬಿಹಾರ ಮುಖ್ಯಮಂತ್ರಿ

ಈಗಾಗಲೇ ಬಿಹಾರದಲ್ಲಿ ನಡೆಯುತ್ತಿರುವ ಹತ್ಯೆಗಳು ವಿವಾದವಾಗಲು ಸಾಕಾಗುವುದಿಲ್ಲವೇ?
---------------------
ವಂದೇ ಮಾತರಂ ಸ್ವಚ್ಛ ಮನಸ್ಕರ ಹಕ್ಕು - ನರೇಂದ್ರ ಮೋದಿ, ಪ್ರಧಾನಿ
ಅಂದರೆ ಅದಕ್ಕೂ ಸ್ವಚ್ಛತಾ ತೆರಿಗೆ ವಿಧಿಸುವ ಆಲೋಚನೆಯೆ?
---------------------
ಗೌತಮ ಬುದ್ಧ ಇದ್ದಿದ್ದರೆ ರೊಹಿಂಗ್ಯಾ ಮುಸ್ಲಿಮರಿಗೆ ಖಂಡಿತ ಸಹಾಯ ಮಾಡುತ್ತಿದ್ದ.- ದಲಾಯಿ ಲಾಮ , ಟಿಬೆಟ್ ಆಧ್ಯಾತ್ಮ್ಮಿಕ ಗುರು

ಬುದ್ಧನಿಲ್ಲ ಎನ್ನುವ ಕಾರಣಕ್ಕಾಗಿ, ಅವರಿಗೆ ಸಹಾಯ ಮಾಡುವ ಅಗತ್ಯವಿಲ್ಲ ಎಂದೇ?
---------------------
ಜಗತ್ತಿನ ಯಾವ ಶಕ್ತಿಗೂ ನಮ್ಮನ್ನ್ನು ಒಡೆಯಲು ಸಾಧ್ಯವಿಲ್ಲ -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಅಮೆರಿಕವನ್ನು ಒಡೆಯಲು ನೀವೊಬ್ಬರೇ ಸಾಕು.

---------------------
  
ಲಂಚ ಪಡೆಯಿರಿ, ಆದರೆ ಅದು ನಿಮ್ಮ ಆಹಾರದಲ್ಲಿರುವ ಉಪ್ಪಿನ ಪ್ರಮಾಣದಲ್ಲಿರಲಿ -ಕೇಶವ ಪ್ರಸಾದ್ ಮೌರ್ಯ, ಉ.ಪ. ಉಪ ಮುಖ್ಯಮಂತ್ರಿ

 ಉತ್ತರ ಪ್ರದೇಶದಲ್ಲಿ ಉಪ್ಪಿನ ಮೇಲೆ ಪ್ರೀತಿ ಜಾಸ್ತಿಯಾಗಿದೆಯಂತೆ.

---------------------
  
ಲಿಂಗಾಯತ-ವೀರಶೈವ ನಡುವಿನ ಸಂಘರ್ಷ ಪತ್ರಕರ್ತರಿಗೆ ಹಬ್ಬವಾಗಿದೆ - ಶಾಮನೂರು ಶಿವಶಂಕರಪ್ಪ, ಶಾಸಕ

ಕೆಲವು ರಾಜಕಾರಣಿಗಳಿಗೆ ಅವುಗಳು ಓಟಿನ ಡಬ್ಬವಾಗಿದೆ.
---------------------
  
ಬಿಜೆಪಿಯಲ್ಲಿ ವಂಶವಾಹಿ ರಾಜಕಾರಣವಿಲ್ಲ - ಮುರಳೀಧರ ರಾವ್, ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ

ರಕ್ತದಾಹಿ ರಾಜಕಾರಣ ಮಾತ್ರ.

---------------------
ಜೆಡಿಎಸ್ ಹುದ್ದೆ ಹೊಂದಿರುವವರು ಕೇವಲ ವಿಸಿಟಿಂಗ್ ಕಾರ್ಡ್‌ಗೆ ಸೀಮಿತವಾಗಬಾರದು - ಎಚ್.ಡಿ ದೇವೇಗೌಡ, ಮಾಜಿ ಪ್ರಧಾನಿ

ಜೆಡಿಎಸ್ ಹುದ್ದೆ ಹೊಂದಿದವರಿಗೆ ಆಧಾರ್ ಕಾರ್ಡ್ ಕಡ್ಡಾಯವೇ?
---------------------
ಬಿಜೆಪಿಯ ವಿಭಜಕ ರಾಜಕೀಯ ಇಲ್ಲಿ ನಡೆಯುವುದಿಲ್ಲ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಕಾಂಗ್ರೆಸ್‌ನೊಳಗೂ ನಡೆಯುವುದಿಲ್ಲ ಎಂದು ಹೇಳಿ ಮುಖ್ಯಮಂತ್ರಿ ಕಡೆಗಣ್ಣಿನಿಂದ ನಿಮ್ಮನ್ನು ನೋಡುತ್ತಿದ್ದಾರೆ.
---------------------
ಬ್ರಾಹ್ಮಣರು ಮತ್ತು ಹಿಂದುಳಿದ ವರ್ಗಗಳು ಬಿಜೆಪಿ ಕಡೆ ಹೆಚ್ಚಿನ ಒಲವು ತೋರಿಸುತ್ತಿರುವುದರಿಂದ ಕಾಂಗ್ರೆಸ್ ಕಂಗಾಲಾಗಿದೆ

-ಕೆ.ಎಸ್.ಈಶ್ವರಪ್ಪ ,ವಿಪಕ್ಷ ನಾಯಕ

ಬಿಜೆಪಿಯ ವರಿಷ್ಠರು ಬ್ರಾಹ್ಮಣ ಮುಖ್ಯಮಂತ್ರಿಯ ಕಡೆಗೆ ಒಲವು ತೋರಿಸಿರುವುದರಿಂದ ತಾವು ಕಂಗಾಲಾಗಿರುವ ಕುರಿತು ವರದಿಗಳು ಬರುತ್ತಿವೆ.

---------------------
ಮಕ್ಕಳ ಬಿಸಿಯೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಲ್ಲಿ ಭಿಕ್ಷೆ ಬೇಡುವುದಿಲ್ಲ - ಕಲ್ಲಡ್ಕ ಪ್ರಭಾಕರ್ ಭಟ್,ಆರೆಸ್ಸೆಸ್ ನಾಯಕ

ಅಂದರೆ ಎಂದಿನಂತೆ, ಬಿಸಿಯೂಟಕ್ಕಾಗಿ ಕಲ್ಲಡ್ಕದಲ್ಲಿ ರೋಲ್‌ಕಾಲ್ ಮುಂದುವರಿಯುತ್ತದೆ.

---------------------
ಬೆಂಗಳೂರಿನಲ್ಲಿ ಮಳೆಯ ಅನಾಹುತಕ್ಕೆ ಕಸದ ಸಮಸ್ಯೆಯೇ ಕಾರಣ - ಕೆ.ಜೆ. ಚಾರ್ಜ್, ಸಚಿವ

ರಾಜಕೀಯ ಕಸಗಳೇ ಇರಬೇಕು.

---------------------
ಚೀಲದಲ್ಲಿರುವ ಬೆಕ್ಕು (ದಾವೂದ್ ಇಬ್ರಾಹೀಂ ) ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ - ವಿ.ಕೆ.ಸಿಂಗ್, ಕೇಂದ್ರ ಸಚಿವ

ಅಂದರೆ ಬೆಕ್ಕು ನಿಮ್ಮ ಚೀಲದೊಳಗೇ ಇದೆ ಎಂದಾಯಿತು.

---------------------
 ರಾಹುಲ್ ಗಾಂಧಿ ವಿಫಲ ಕುಟುಂಬ ರಾಜಕಾರಣಿ - ಸ್ಮೃತಿ ಇರಾನಿ , ಕೇಂದ್ರ ಸಚಿವೆ

ಕುಟುಂಬದಲ್ಲಿ ವಿಫಲರಾದವರು ಪ್ರಧಾನಿಯಾಗಿ ರಾಜಕಾರಣ ಮಾಡುತ್ತಿರುವ ಬಗ್ಗೆಯೂ ಹೇಳಿ.

---------------------
 ಬುದ್ಧಿ ಜೀವಿಗಳಿಗೆ ಆರೆಸ್ಸೆಸ್, ಬಿಜೆಪಿಯನ್ನು ತೆಗಳುವುದೇ ಫ್ಯಾಶನ್‌ ಆಗಿದೆ - ಜಗದೀಶ್ ಶೆಟ್ಟರ್, ಬಿಜೆಪಿ ನಾಯಕ

ಬುದ್ಧಿರಹಿತ ಜೀವಿಗಳು ಆರೆಸ್ಸೆಸ್ ಬಿಜೆಪಿಯ ಗಂಜಲ ಬಾಚುವುದು ಸಹಜವಾಗಿದೆ.

---------------------
ಬಿಜೆಪಿ ಮತ್ತು ಅದರ ಸರಕಾರಗಳನ್ನು ಆರೆಸ್ಸೆಸ್ ನಿಯಂತ್ರಿಸುತ್ತಿಲ್ಲ - ಮೋಹನ್ ಭಾಗವತ್ , ಆರೆಸ್ಸೆಸ್ ಮುಖಂಡ

ಆರೆಸ್ಸೆಸ್ ನೇರವಾಗಿ ನಡೆಸುತ್ತಿದೆ.
---------------------
ಭಾರತಕ್ಕೆ ಸಮಸ್ಯೆ ಇರುವುದು ಆಂತರಿಕ ಶತ್ರುಗಳಿಂದ, ಬಾಹ್ಯ ಶತ್ರುಗಳಿಂದಲ್ಲ - ಫಾರೂಕ್ ಅಬ್ದುಲ್ಲಾ, ಜಮ್ಮು ಕಾಶ್ಮೀರ ಮಾಜಿ ಮುಖ್ಯ ಮಂತ್ರಿ

ಗಡಿಯಲ್ಲಿರುವ ಟ್ಯಾಂಕರ್‌ಗಳನ್ನು ದೇಶದ ಜನರ ಕಡೆಗೆ ತಿರುಗಿಸಲು ಸಲಹೆಯೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!