ಓ ಮೆಣಸೇ..

Update: 2017-10-08 18:47 GMT

  ಭಾರತೀಯ ಸಂಸ್ಕೃತಿ ಬಿತ್ತುವ ಶಿಕ್ಷಣ ಸಂಸ್ಥೆಗಳ ಅಗತ್ಯವಿದೆ -ಶೋಭಾ ಕರಂದ್ಲಾಜೆ, ಸಂಸದೆ
 
ನೀವು ಸಾರ್ವಜನಿಕವಾಗಿ ಆಡುತ್ತಿರುವ ಮಾತುಗಳನ್ನು ಕೇಳಿದರೆ ಅಗತ್ಯವಿದೆ ಅನ್ನಿಸುತ್ತದೆ.

---------------------
 
ಜಿಡಿಪಿ ಬೆಳವಣಿಗೆಗೂ, ಜನಜೀವನಕ್ಕೂ ನೇರ ಸಂಬಂಧವಿದೆ -ಆಸ್ಕರ್ ಫೆರ್ನಾಂಡಿಸ್, ರಾಜ್ಯಸಭೆ ಸದಸ್ಯ
 
ಕಾಂಗ್ರೆಸ್‌ಗೂ ಜನಜೀವನಕ್ಕೂ ಇರುವ ಸಂಬಂಧಗಳ ಬಗ್ಗೆ ಮೊದಲು ಹೇಳಿ.

---------------------
 
ವಿದ್ಯಾರ್ಥಿಗಳು ಬಲಿಷ್ಠರಾದಾಗ ಮಾತ್ರ ದೇಶ ಬಲಿಷ್ಠವಾಗುತ್ತದೆ - ಯು.ಟಿ.ಖಾದರ್, ಸಚಿವ
  ತಮ್ಮ ಕ್ಷೇತ್ರದಲ್ಲಿ ವಿಸ್ತರಣೆಯಾಗುತ್ತಿರುವ ಗಾಂಜಾ ಜಾಲಗಳು ಯುವಕರನ್ನು ಬಲಿಷ್ಠಗೊಳಿಸುತ್ತಿರಬೇಕಲ್ಲವೇ?
---------------------
ಇನ್ನು 5-6 ತಿಂಗಳಲ್ಲಿ ಮನೆಗೆ ಹೋಗುತ್ತಿರುವವರ (ಸಿದ್ದರಾಮಯ್ಯ) ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ -ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ
ಈಗಾಗಲೇ ಮನೆ ಸೇರಿರುವವರ ಮಾತು.

---------------------
  ಕಾಂಗ್ರೆಸ್‌ನಲ್ಲಿ ಅಯೋಗ್ಯರಿಗೆ ಜಾಗ ಇಲ್ಲ -ರಮೇಶ್‌ಕುಮಾರ್, ಸಚಿವ
 
ಹಾಗಾದರೆ ಕಾಂಗ್ರೆಸ್‌ನ್ನು ಬರ್ಖಾಸ್ತು ಮಾಡಬೇಕಾಗುತ್ತದೆ.

---------------------
 

ಸಿಎಂ ಸಿದ್ದರಾಮಯ್ಯ ಜಾತಿ ಜಾತಿಗಳ ಮಧ್ಯೆ ಬೆಂಕಿ ಇಡುತ್ತಿದ್ದಾರೆ - ಕೆ.ಆರ್.ಅಶೋಕ್, ಬಿಜೆಪಿ ನಾಯಕ
  ಬೆಂಕಿ ಇಡುವುದು ಬಿಜೆಪಿಗಷ್ಟೇ ಸೀಮಿತವಾಗಿ ಉಳಿಯಬೇಕೇ?

---------------------
  ರಾಜಕೀಯ ಯಶಸ್ಸಿಗೆ ಚಿತ್ರರಂಗದ ಹೆಸರಷ್ಟೇ ಸಾಲದು - ರಜನಿಕಾಂತ್, ನಟ
ಆದರೆ ರಾಜಕೀಯದಲ್ಲಿ ಡ್ಯೂಪ್‌ಗಳನ್ನು ಬಳಸುವುದಕ್ಕೆ ಅವಕಾಶವಿಲ್ಲ.

---------------------

ಮನಸ್ಸು ಸ್ವಚ್ಛವಾಗದೆ ದೇಶ ಸ್ವಚ್ಛವಾಗದು -ನರೇಂದ್ರ ಮೋದಿ, ಪ್ರಧಾನಿ
ಸರಿ, ಮೊದಲು ತಮ್ಮ ಮನಸ್ಸನ್ನೇ ಸ್ವಚ್ಛ ಮಾಡಿ.

---------------------
  ಮೋದಿ ಆಡಳಿತ ನನಗೆ ತೃಪ್ತಿ ತಂದಿಲ್ಲ -ಅಣ್ಣ ಹಝಾರೆ, ಸಾಮಾಜಿಕ ಹೋರಾಟಗಾರ
  ಮತ್ತೇಕೆ ಉಪವಾಸ ಕೂತಿಲ್ಲ?
---------------------
 ವನ್ಯಜೀವಿ ಸಂರಕ್ಷಣೆಗೆ ಸರಕಾರ ಬದ್ಧ -ರಮಾನಾಥ ರೈ, ಸಚಿವ

ರಕ್ಷಣೆ ಮಾಡುವುದಕ್ಕಾದರೂ ಒಂದಿಷ್ಟು ವನ್ಯಜೀವಿಗಳನ್ನು ಉಳಿಸಿ.

---------------------
 
ವಿಧಾನ ಸಭೆ ಚುನಾವಣೆಯಲ್ಲಿ ಬಹುಮತ ಬಂದರೆ ಆಡಳಿತ ನಡೆಸುತ್ತೇವೆ, ಇಲ್ಲದಿದ್ದರೆ ವಿಪಕ್ಷದಲ್ಲಿ ಕೂರುತ್ತೇವೆ -ದೇವೇಗೌಡ, ಮಾಜಿ ಪ್ರಧಾನಿ
ಮನೆಯಲ್ಲಿ ಕೂರಬೇಕಾದ ಸಾಧ್ಯತೆಗಳೇ ಹೆಚ್ಚು.

---------------------
  ಗಾಂಧೀಜಿ ಅವರ ದೃಷ್ಟಿಕೋನವು ಹಿಂದಿಗಿಂತ ಇಂದಿನ ಕಾಲಕ್ಕೆ ಹೆಚ್ಚು ಪ್ರಸ್ತುತ -ಅಮಿತ್ ಶಾ, ಬಿಜೆಪಿ ಅಧ್ಯಕ್ಷ
  ಹೇ ರಾಮ್!
---------------------
  ಹಿಟ್ಲರ್ ಸಂಸ್ಕೃತಿ ಭಾರತದಲ್ಲೂ ಜೀವ ತಳೆಯುತ್ತಿದೆ - ಕಮಲಾ ಹಂಪನಾ, ಹಿರಿಯ ಸಾಹಿತಿ
ಜೀವ ತಳೆಯುತ್ತಿರುವುದಲ್ಲ, ಜೀವ ತೆಗೆಯುತ್ತಿರುವುದು.

---------------------
  ಕಾಂಗ್ರೆಸ್ ಮುಖಂಡರು ಅತೃಪ್ತ ಆತ್ಮಗಳಂತೆ ಅಲೆದಾಡುತ್ತಿದ್ದಾರೆ - ಸುರೇಶ್‌ಕುಮಾರ್, ಬಿಜೆಪಿ ವಕ್ತಾರ
 ಬಹುಶಃ ನಿಮ್ಮದು ರಾಜ್ಯ ಲೂಟಿ ಹೊಡೆದು ಸಂಪೂರ್ಣ ತೃಪ್ತಿ ಹೊಂದಿದ ಆತ್ಮವಿರಬೇಕು.

---------------------

ನನಗೆ 75 ವರ್ಷವಾಗಿದ್ದರೂ ವಯಸ್ಸಾಗಿದೆ ಎಂದೆನಿಸುತ್ತಿಲ್ಲ - ಆಶಾಪರೇಖ್, ನಟಿ
  ಎಲ್ಲರಿಗೂ ಅದೇ ಅನುಭವ
---------------------

ಬೇಲ್ ಪಡೆಯುವುದು ಬೇಲ್ ಪುರಿ ತಿಂದಷ್ಟೇ ಸುಲಭ - ವಿಜಯಮಲ್ಯ, ಉದ್ಯಮಿ
ಬೇಲ್‌ಪುರಿ ತಿನ್ನುವುದು ಬೇಲ್ ಪಡೆಯುವಷ್ಟು ಸುಲಭವಲ್ಲ ಎನ್ನುವುದು ಈಗ ಹೊಸ ಮಾತು.

---------------------

ಪ್ರಜಾತಂತ್ರದಲ್ಲಿ ಹಿಂಸೆಗೆ ಜಾಗವಿಲ್ಲ -ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ
ಅದಕ್ಕಾಗಿ ಪ್ರಜಾತಂತ್ರವನ್ನು ಕಿತ್ತು ಹಾಕಲು ಹೊರಟಿದ್ದೀರಿ ಎಂದು ಕಾಣುತ್ತದೆ.

---------------------
  ರಾಜಕೀಯ ಸೇರುವ ಯುವಕರು ಮೊದಲು ಮದುವೆಯಾಗಬೇಕು - ಅಣ್ಣಾ ಹಝಾರೆ, ಸಾಮಾಜಿಕ ಹೋರಾಟಗಾರ
ಮದುವೆಯಾದರೆ ಸಾಕಾಗದು, ಹೆಂಡತಿಯನ್ನು ಕೊನೆಯವರೆಗೂ ಕೈ ಬಿಡದೇ ಕಾಪಾಡಬೇಕು. 
---------------------
  ಧರ್ಮದ ರಕ್ಷಣೆಗೆ ಹೋರಾಡುವವರಿಗೆ ಇಲ್ಲಿ ರಕ್ಷಣೆ ಇಲ್ಲ -ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಕಾನೂನು ನಿಮ್ಮ ಕೈಯಲ್ಲಿರುವಾಗ, ಧರ್ಮ ರಕ್ಷಣೆಗೆ ಹೋರಾಡುವವರಿಗೆ ರಕ್ಷಣೆ ಸಿಗುವುದಾದರೂ ಹೇಗೆ?
---------------------
  ಭಯೋತ್ಪಾದಕರಿಂದ ದ.ಕ. ಸುರಕ್ಷಿತವಲ್ಲ -ಸಿ.ಟಿ.ರವಿ, ಶಾಸಕ
  ಬಂಧಿಸಿದ ಬೆನ್ನಿಗೇ ಜಾಮೀನು ಕೊಟ್ಟರೆ ಸುರಕ್ಷಿತವಾಗುವುದಾದರೂ ಹೇಗೆ?
---------------------
  ಸಿದ್ದರಾಮಯ್ಯ ಕುರುಬರ ಮಾಲಕ ಅಲ್ಲ -ಎಚ್.ವಿಶ್ವನಾಥ್, ಜೆಡಿಎಸ್ ಮುಖಂಡ
  ಗುಂಪಿನಿಂದ ಚದುರಿದ ಕುರಿಯ ಮಾತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!