ಓ ಮೆಣಸೇ..

Update: 2017-10-23 09:08 GMT

ಕಾಂಗ್ರೆಸ್ ದೇಶಕ್ಕೆ ದೊಡ್ಡ ಗೊಡ್ಡೆಮ್ಮೆ ಇದ್ದಂತೆ - ಜಗದೀಶ್ ಶೆಟ್ಟರ್, ಸಚಿವ

ಬಿಜೆಪಿ ಆ ಗೊಡ್ಡೆಮ್ಮೆ ಹಾಕಿದ ಸೆಗಣಿ ಎಂದು ಹೇಳುವವರಿದ್ದಾರೆ.

---------------------

'ಅಚ್ಛೇದಿನ್' ಶ್ರೀಮಂತರಿಗಷ್ಟೇ ಬಂದಿದೆ; ಬಡವರಿಗೆ ಬಂದಿಲ್ಲ - ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಉಸ್ತುವಾರಿ
ತಮ್ಮಂತಹ ಶ್ರೀಮಂತರಿಗೆ ಒಳ್ಳೆಯದೇ ಆಯಿತು ಬಿಡಿ.

---------------------

ಸಿದ್ದರಾಮಯ್ಯ ಸಿಎಂ ಆಗಿರುವ ತನಕ ಹಿಂದುಳಿದ ವರ್ಗಗಳ ಉದ್ಧಾರ ಅಸಾಧ್ಯ - ಕೆ.ಪಿ.ನಂಜುಂಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ
ಅವರು ಪ್ರಧಾನಮಂತ್ರಿಯಾಗಬೇಕು ಎನ್ನುವ ಬಯಕೆಯೇ?
---------------------
 
ಧರ್ಮವನ್ನು ಒಡೆದು ಆಳುವವರ ಸಂಖ್ಯೆ ಹೆಚ್ಚಾಗಿದೆ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ತಮ್ಮಿಂದಲೇ ಅದನ್ನು ಅವರು ಕಲಿತದ್ದು.

---------------------
 
ಭಾರತ ಹಿಂದಿನಂತಿಲ್ಲ ಬಲಿಷ್ಠವಾಗಿದೆ ಎನ್ನುವುದು ಚೀನಾಕ್ಕೆ ಅರ್ಥವಾಗಿದೆ - ರಾಜನಾಥ್‌ಸಿಂಗ್, ಕೇಂದ್ರ ಸಚಿವ
ಅವರು ಚೀನೀ ಭಾಷೆಯಲ್ಲಿ ಹೇಳಿದ್ದನ್ನು ನೀವು ತಪ್ಪು ತಿಳಿದುಕೊಂಡಿದ್ದೀರಿ.

---------------------
ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಆಸ್ತಿಕರಾಗಿದ್ದಾರೆ - ದೇವೇಗೌಡ, ಮಾಜಿ ಪ್ರಧಾನಿ
ನಿಮ್ಮ ಮಗನಂತೆ ಆಸ್ತಿ-ಕರಾಗಲಿಲ್ಲ ಎಂಬುದು ಸಮಾಧಾನ.

---------------------

ಜನರ ಪ್ರೀತಿ ವಿಶ್ವಾಸದಿಂದ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ - ವೀರಪ್ಪ ಮೊಯ್ಲಿ, ಸಂಸದ
ದುಡ್ಡು ಕೊಟ್ಟು ಅದನ್ನು ಕೊಳ್ಳುವ ಉದ್ದೇಶವೇ?
---------------------
 ಬರುವ ದೀಪಾವಳಿ ಒಳಗೆ ಅಯೋಧ್ಯೆಯಲ್ಲಿ ರಾಮಮಂದಿರ ಪೂರ್ಣ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಸೇತುವೆ, ರೈಲು, ರಸ್ತೆ ಇವುಗಳೆಲ್ಲ ಪೂರ್ಣವಾಗುವ ಅಗತ್ಯವೇ ಇಲ್ಲ ಅಂತೀರಾ?
---------------------
 
ಎಚ್.ಡಿ.ದೇವೇಗೌಡ ಮೃತಪಟ್ಟ ಕೂಡಲೇ ಎಚ್.ಡಿ.ರೇವಣ್ಣ ಕಾಂಗ್ರೆಸ್‌ಗೆ - ಝಮೀರ್‌ಅಹ್ಮದ್, ಜೆಡಿಎಸ್ ಬಂಡಾಯ ಶಾಸಕ
ನೀವು ಜೆಡಿಎಸ್ ತ್ಯಜಿಸಲು ಯಾರು ಮೃತಪಟ್ಟಿರುವುದು ಕಾರಣ?
---------------------
 
ಮೊದಲ ಬಾಂಬ್ ಬೀಳುವ ತನಕ ಉತ್ತರ ಕೊರಿಯ ಜೊತೆ ಸಂಬಂಧ - ರೆಕ್ಸ್ ಟೆಲ್ಲರ್ಸ್‌ನ್, ಅಮೆರಿಕ ವಿದೇಶಾಂಗ ಸಚಿವ
ಮೊದಲ ಬಾಂಬ್ ಬಿದ್ದ ಆನಂತರ ನೀವೆಲ್ಲಿರುತ್ತೀರಿ?
---------------------
ಜಿಎಸ್‌ಟಿ ನನ್ನೊಬ್ಬನ ನಿರ್ಧಾರವಲ್ಲ - ನರೇಂದ್ರ ಮೋದಿ, ಪ್ರಧಾನಿ
ಆರೆಸ್ಸೆಸ್‌ನೋರೂ ಸೇರಿ ನಿರ್ಧರಿಸಿದ್ದೆಂದಾಯಿತು.

---------------------

ಅಭಿವೃದ್ಧಿಯಲ್ಲಿ ಮೋದಿ ಸರಕಾರ ಎಂದೂ ತಾರತಮ್ಯ ಮಾಡಿಲ್ಲ - ಅನಂತ ಕುಮಾರ್, ಕೇಂದ್ರ ಸಚಿವ

ತಾರತಮ್ಯ ಮಾಡದೆ ಎಲ್ಲರಿಗೂ ಶಾಕ್ ಕೊಟ್ಟಿತು.
---------------------

ನಾನು ನೋಡಲು ಮಾತ್ರ ಸಾಫ್ಟ್ ಆಗಿ ಕಾಣುತ್ತೇನೆ ಅಷ್ಟೇ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಒಳಗಡೆ ತುಂಬಾ ಕೆಟ್ಟು ಹೋಗಿದೆ ಎಂದು ಕಾಣುತ್ತದೆ.

---------------------

ಹವಾಮಾನ ವರದಿ - ಮೋದಿ ಗುಜರಾತ್ ಭೇಟಿ ವೇಳೆ ಭರವಸೆಗಳ ಮಳೆಯಾಗಲಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

ಗುಜರಾತಿಗರಿಗೆ ಅವಮಾನ ವರದಿ.
---------------------

ರಮ್ಯಾ ಮುಂದಿನ ಮುಖ್ಯಮಂತ್ರಿ - ಎಚ್.ವಿಶ್ವನಾಥ್, ಮಾಜಿ ಸಂಸದ
ನಿಮ್ಮ ರಮ್ಯ ಕಲ್ಪನೆ ಚೆನ್ನಾಗಿದೆ.

---------------------
 
ತಾಜ್‌ಮಹಲ್ ಭಾರತದ ಬೆವರಿನ ಪ್ರತೀಕ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಕಾರ್ಮಿಕರ ಬೆವರಿಗೆ ಬೆಲೆ ಕೊಡುವವರು ಕಾರ್ಮಿಕ ವಿರೋಧಿ ನೀತಿಗಳನ್ನೇಕೆ ತರುತ್ತಿದ್ದೀರಿ?

---------------------

ಆಯುರ್ವೇದ ಬೆಳವಣಿಗೆಗೆ ಸಂಶೋಧನೆ ಅಗತ್ಯ - ಪ್ರಮೋದ್ ಮಧ್ವರಾಜ್, ಸಚಿವ
ಆಯುರ್ವೇದ ಬೆಳವಣಿಗೆಯಾಗದಿದ್ದರೂ, ಅದರ ಹೆಸರಲ್ಲಿ ನಕಲಿ ಔಷಧಿ ಮಾರುವವರು ಬೆಳೆದಿದ್ದಾರೆ.

---------------------

ಮೋದಿ ರಾವಣ, ಸಿದ್ದು ರಾಮ - ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ನಾನು ಶೂರ್ಪನಖಿ ಎಂದರಂತೆ ಈಶ್ವರಪ್ಪ.
---------------------
 ಸಿಎಂ ಸಿದ್ದರಾಮಯ್ಯ ವೀರಪ್ಪ ಮೊಯ್ಲಿಗಿಂತಲೂ ಮಹಾನ್ ಸುಳ್ಳುಗಾರ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಸಿದ್ದರಾಮಯ್ಯರಿಗೆ ಸರಸ್ವತಿ ಸಮ್ಮಾನ್ ಸಿಗುವವರೆಗೆ ನಿಮ್ಮ ಮಾತು ಒಪ್ಪಿಕೊಳ್ಳಲಾಗದು.

---------------------

  ಬಿಜೆಪಿ ನನ್ನ ತಾಯಿ - ಕೆ.ಎಸ್.ಈಶ್ವರಪ್ಪ, ವಿಪಕ್ಷ ನಾಯಕ
  ಯಡಿಯೂರಪ್ಪ ನಿಮ್ಮ ಮಲತಾಯಿಯ ಮಗನೇ?
---------------------
ಡಾ.ಜಿ.ಪರಮೇಶ್ವರ್ ಬಿಜೆಪಿಗೆ ಬಂದರೆ ಅವರಿಗೆ ಉತ್ತಮ ಸ್ಥಾನ ಸಿಗಲಿದೆ - ಸಿ.ಟಿ.ರವಿ, ಶಾಸಕ

ಎಸ್. ಎಂ. ಕೃಷ್ಣ, ವಿಶ್ವನಾಥ್, ಶ್ರೀನಿವಾಸ ಪ್ರಸಾದರಿಗೆ ಕೊಟ್ಟ ಸ್ಥಾನಗಳೇ?
---------------------
 
ಪುಟಿದೇಳುವ ಸಾಮರ್ಥ್ಯ ಕಾಂಗ್ರೆಸ್‌ಗಿದೆ - ಪ್ರಣವ್ ಮುಖರ್ಜಿ, ಮಾಜಿ ರಾಷ್ಟ್ರಪತಿ
ಬೀಳುವುದಕ್ಕಾಗಿಯೇ ಏಳುವವರು ಅವರು.
 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!