ಓ ಮೆಣಸೇ..
ಹೆಣ್ಣೆಂದರೆ ಮನೆಗೆ ಮಹಾಲಕ್ಷ್ಮೀ ಇದ್ದಂತೆ - ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
ತೆಗೆದುಕೊಂಡ ಸಾಲಕ್ಕೆ ಚಕ್ರಬಡ್ಡಿ ಕಟ್ಟುವ ಹೆಣ್ಣು ಲಕ್ಷ್ಮೀಯಲ್ಲದೆ ಇನ್ನೇನು?
---------------------
ರಾಷ್ಟ್ರಪತಿ ಕೋವಿಂದ್ ಬಿಜೆಪಿಯ ರಬ್ಬರ್ ಸ್ಟಾಂಪ್ ಅಲ್ಲ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಆರೆಸ್ಸೆಸ್‌ನ ರಬ್ಬರ್ ಸ್ಟಾಂಪ್ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ.
---------------------
ರಾಹುಲ್‌ಗಾಂಧಿ ದಲಿತ ಯುವತಿಯೊಬ್ಬಳನ್ನು ಮದುವೆಯಾಗಲಿ - ರಾಮ್‌ದಾಸ್ ಅಠಾವಳೆ, ಕೇಂದ್ರ ಸಚಿವ
ನಿಮ್ಮದೇ ಮಿತ್ರ ಪಕ್ಷದ ನಾಯಕರಲ್ಲಿ ಮೊದಲು ಈ ಪ್ರಸ್ತಾಪ ಇಡಬಾರದೇ?
---------------------
ಭಾರತ ವಿಶ್ವಶಾಂತಿಯ ಸಂದೇಶ ವಾಹಕ - ನರೇಂದ್ರ ಮೋದಿ, ಪ್ರಧಾನಿ
ಬರೇ ವಿಶ್ವದಲ್ಲಿ ಶಾಂತಿ ಹರಡಿದರೆ ಸಾಕೆ, ಭಾರತದಲ್ಲಿ ಶಾಂತಿ ಬೇಡವೆೇ?
---------------------
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನರೇಂದ್ರ ಮೋದಿ, ಯೋಗಿಯ ಕಾಲಕ್ಕಿಂತ ಒಳ್ಳೆಯ ಕಾಲ ಯಾವಾಗ ಬಂದೀತು? - ಸಾದ್ವಿ ರಿತಂಬರ, ಹಿಂದುತ್ವ ನಾಯಕಿ
ಶ್ರೀರಾಮನ ಆದರ್ಶಗಳಿಗೆ ಮಾತ್ರ ಕೇಡುಗಾಲ.
---------------------
ರಾಜ್ಯದಲ್ಲಿ ಬಿಜೆಪಿ ಮುಳುಗುವ ಹಡಗು - ಸಿದ್ದರಾಮಯ್ಯ, ಮುಖ್ಯಮಂತ್ರಿ
ನಿಮ್ಮೊಳಗೆ ಮುಳುಗಿಸುವವರ ಸಂಖ್ಯೆ ಕಡಿಮೆಯೇನಿಲ್ಲ, ಯಾವುದಕ್ಕೂ ಈಜು ಕಲಿತುಕೊಳ್ಳಿ.
---------------------
ಪ್ರಧಾನಿ ಒಂದು ಭೂತವನ್ನು ಕಲ್ಪಿಸಿಕೊಂಡು ಅದರ ಜೊತೆ ಗುದ್ದಾಡುತ್ತಿದ್ದಾರೆ - ಪಿ.ಚಿದಂಬರಂ, ಕಾಂಗ್ರೆಸ್ ನಾಯಕ
ಒಟ್ಟಿನಲ್ಲಿ ಒಂದು ಕಲ್ಪನೆಯ ಭೂತದ ಜೊತೆಗೆ ನಿಜವಾದ ಭೂತ ಗುದ್ದಾಡುತ್ತಿದೆ.
---------------------
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ - ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ
ಗೆಲ್ಲುವ ಪಕ್ಷಕ್ಕೆ ತಾನೇ ಅದರ ಅಗತ್ಯ.
---------------------
ಸಂತರ ಬಲಿದಾನಗಳು ನಡೆದರೂ ಗೋಮಾತೆಯ ವಧೆ ನಿಷೇಧವಾಗಿಲ್ಲ - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಮಾತೆಯರ ಅತ್ಯಾಚಾರ ನಡೆದರೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎನ್ನುವುದು ಭಕ್ತರ ಖೇದ.
---------------------
ಕೆಲವರು ನನ್ನ ಬಾಯಿ ಮುಚ್ಚಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ - ಡಿ.ಕೆ.ಶಿವಕುಮಾರ್, ಸಚಿವ
ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವ ಕಾರಣಕ್ಕಿರಬಹುದೇ?
---------------------
ಅಮಿತ್ ಶಾ ಹಿಂದೂ ಅಲ್ಲ - ವಿನಯ್ ಕುಲಕರ್ಣಿ, ಸಚಿವ
ಇದನ್ನು ಲಿಂಗಾಯತರು ಹೇಳಿದರೆ ಮಾತ್ರ ಯಾಕೆ ಸಿಟ್ಟು ?
---------------------
ನೋಟು ನಿಷೇಧ ವ್ಯವಸ್ಥಿತ ಲೂಟಿ - ಮನಮೋಹನ್‌ಸಿಂಗ್, ಮಾಜಿ ಪ್ರಧಾನಿ
ನಿಷೇಧ ಮಾಡದೆ ನಿಮ್ಮವರು ಲೂಟಿ ಮಾಡಿದರು, ನಿಷೇಧ ಮಾಡಿ ಅವರು ಲೂಟಿ ಮಾಡಿದರು. ವ್ಯತ್ಯಾಸ ಇಷ್ಟೇ.
---------------------
ಕೇಂದ್ರದ ಆಡಳಿತದಿಂದ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ - ರಮಾನಾಥ ರೈ, ಸಚಿವ
ಬಂಟ್ವಾಳ ತಾಲೂಕಿನೊಳಗಿನ ಅಘೋಷಿತ ತುರ್ತು ಪರಿಸ್ಥಿತಿಗೆ ಕೇಂದ್ರ ಕಾರಣವೆೇ?
---------------------
ಜಿಎಸ್‌ಟಿ ಉತ್ತಮ ಯೋಜನೆ, ನರೇಂದ್ರ ಮೋದಿ ಸರಕಾರ ಅದನ್ನು ಹಾಳುಮಾಡಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ಅಂದರೆ ಹಾಳನ್ನು ಮತ್ತೊಮ್ಮೆ ಹಾಲು ಮಾಡುವುದಕ್ಕಾಗಿ ನಿಮಗೆ ಮತ ಹಾಕಬೇಕೇ?
---------------------
ದಲಿತರು ಮುಖ್ಯವಾಹಿನಿಗೆ ಬರುವವರೆಗೂ ಮೀಸಲು ಅಗತ್ಯವಿದೆ - ಉಮಾಭಾರತಿ, ಕೇಂದ್ರ ಸಚಿವ
ಸಚಿವ ಸಂಪುಟದಲ್ಲೂ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸುವ ಯೋಚನೆಯೇ?
---------------------
ನೋವುಂಡ ಸ್ಥಳದಲ್ಲಿಯೇ ನೋವು ಕಳೆದುಕೊಳ್ಳಲು ಇಚ್ಛಿಸುತ್ತೇನೆ - ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ
ಅಂದರೆ ಮತ್ತೊಮ್ಮೆ ಜೈಲು ಸೇರುವ ಯೋಚನೆಯೇ?
---------------------
ಇಂಗ್ಲಿಷ್ ಕುರಿತ ಭ್ರಮೆಯೇ ಕನ್ನಡಕ್ಕೆ ಅಪಾಯಕಾರಿ - ಪ್ರಮೋದ್ ಮಧ್ವ್ವರಾಜ್, ಸಚಿವ
ಅದು ಭ್ರಮೆಯಲ್ಲ, ವಾಸ್ತವ.
---------------------
ಸರಕಾರಿ ಶಾಲೆ ಮುಚ್ಚಲು ಆರ್‌ಟಿಇ ಕಾರಣ - ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಸರಕಾರ ಕಾರಣ ಎಂದರೆ ಇನ್ನಷ್ಟು ಅರ್ಥಪೂರ್ಣವಾಗಿರುತ್ತಿತ್ತು.
---------------------
ನನಗೂ ಸಿ.ಎಂ. ಆಗುವ ಆಸೆ ಇದೆ - ಎಂ.ಬಿ.ಪಾಟೀಲ್. ಸಚಿವ
ಲಿಂಗಾಯತ ರಾಜ್ಯ ಅಸ್ತಿತ್ವಕ್ಕೆ ಬಂದ ದಿನ.
---------------------
2022ರ ಹೊತ್ತಿಗೆ ಭಾರತ ಭಯೋತ್ಪಾದನೆ ಮುಕ್ತ ದೇಶವಾಗಲಿದೆ - ರಾಜನಾಥ್‌ಸಿಂಗ್, ಕೇಂದ್ರ ಸಚಿವ
ಅಂದರೆ ನೀವೆಲ್ಲ ತೊಲಗುವುದಕ್ಕೆ ಅಲ್ಲಿಯವರೆಗೆ ಕಾಯಬೇಕೇ?
---------------------
ಕೆಟ್ಟ ಸಾರಾಯಿ ಕುಡಿಯಬೇಡಿ, ಒಳ್ಳೆಯ ಸಾರಾಯಿ ಕುಡಿಯಿರಿ - ಆರ್.ಬಿ.ತಿಮ್ಮಾಪುರ, ಸಚಿವ
ಕೆಟ್ಟ ವಿಷ ಮತ್ತು ಒಳ್ಳೆಯ ವಿಷ ಎನ್ನುವುದು ಇದೆಯೇ?
---------------------
ಹಿಂದೂಗಳಲ್ಲೂ ಭಯೋತ್ಪಾದಕರಿದ್ದಾರೆ - ಕಮಲ್‌ಹಾಸನ್, ನಟ
ನಾಥೂರಾಂ ಗೋಡ್ಸೆ ಅದನ್ನು 1947ರಲ್ಲೇ ಸಾಬೀತು ಮಾಡಿದ್ದಾನೆ.
---------------------
ನೋಟು ಅಮಾನ್ಯ ಮತ್ತು ಜಿಎಸ್‌ಟಿ ಕುರಿತು ನನ್ನ ಮತ್ತು ಮಮತಾ ಬ್ಯಾನರ್ಜಿಯ ಅಭಿಪ್ರಾಯ ಒಂದೇ ಆಗಿದೆ - ಉದ್ಧವ್‌ಠಾಕ್ರೆ, ಶಿವಸೇನೆ ಮುಖ್ಯಸ್ಥ
ಒಟ್ಟಿನಲ್ಲಿ ಮೋದಿಯ ವಿಷಯದಲ್ಲಿ ನೀವು ಮಮತಾಮಯಿ.
---------------------
ಶಿವಸೇನೆ ಜೊತೆ ಸೇರಿ ಬಿಜೆಪಿಗೆ ತಕ್ಕ ಪಾಠ ಕಲಿಸುವೆ - ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ, ಮುಖ್ಯಸ್ಥ
ಶಿವಸೇನೆ ಪಾಠ ಕಲಿಯುವ ಸಮಯ ಹತ್ತಿರ ಬಂದಂತಿದೆ.