ಓ ಮೆಣಸೇ..
ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
ಬಹುಶಃ ಅದು 150ನೇ ಸ್ಥಾನವಾಗುವ ಸಾಧ್ಯತೆಯಿದೆ.
---------------------
ಬಿಜೆಪಿಯಲ್ಲಿ ಕೆಜೆಪಿಯಿಂದ ಬಂದವರಿಗೆ ಮಾತ್ರ ಮಾನ್ಯತೆ ನೀಡಲಾಗುತ್ತಿದೆ - ಸೊಗಡು ಶಿವಣ್ಣ , ಮಾಜಿ ಸಚಿವ
ಯಡಿಯೂರಪ್ಪ ಅವರು ಕೆಜೆಪಿಯಿಂದಲೇ ಬಂದವರಲ್ಲವೇ?
---------------------
ಪಾಪಗಳ ಪ್ರಾಯಶ್ಚಿತಕ್ಕೆ ಬಿಜೆಪಿ ರ್ಯಾಲಿ - ಸಿದ್ದರಾಮಯ್ಯ, ಮುಖ್ಯಮಂತ್ರಿ
ಮಾಡಿದ ಪಾಪಗಳಿಗೆ ಪ್ರಾಯಶ್ಚಿತ ಮಾಡದೇ ಇರುವವರಿಗಿಂತ ವಾಸಿ.
---------------------
ಒಬ್ಬ ಬಡ ತಂದೆಯ ಮಗ (ಮೋದಿ) ಈ ದಿನ ನಿಮ್ಮ ಮುಂದೆ ನಿಂತಿದ್ದಾನೆ ಎಂದರೆ ಅದು ಪ್ರಜಾಪ್ರಭ್ವುತದ ಶಕ್ತಿ - ನರೇಂದ್ರ ಮೋದಿ, ಪ್ರಧಾನಿ
ಆ ಶಕ್ತಿಯನ್ನು ವಿಫಲಗೊಳಿಸುವ ಸಂಚಿನ ಪಾಲುದಾರರು ನೀವು ಎನ್ನುವುದನ್ನು ಮರೆಯದಿರಿ.
---------------------
ಬಹುತೇಕ ದೇಶಗಳು ಭಾರತವೇ ಜಗತ್ತನ್ನು ಮುನ್ನಡೆಸಬೇಕೆಂದು ಬಯಸುತ್ತಿವೆ - ಮೋಹನ್ ಭಾಗವತ್,ಆರೆಸ್ಸೆಸ್ ಮುಖ್ಯಸ್ಥ
ತಾವು ಚಡ್ಡಿ ಕಳಚಿ ಪ್ಯಾಂಟು ಧರಿಸಿದ ಪರಿಣಾಮ ಇರಬಹುದೇ?
---------------------
ಬಿಜೆಪಿ ಗೆಲ್ಲುವ ಪಕ್ಷವಾದ್ದರಿಂದ ಟಿಕೆಟ್ ಆಕಾಂಕ್ಷಿಗಳು ಹೆಚ್ಚು - ಶೋಭಾ ಕರಂದ್ಲಾಜೆ, ಸಂಸದೆ
ದೋಚುವ ಪಕ್ಷವಾಗಿರುವುದರಿಂದ ಎನ್ನುವುದು ಯಡಿಯೂರಪ್ಪ ಅಭಿಮಾನಿಗಳ ಮಾತು.
---------------------
ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದು ಸ್ವಾತಂತ್ರಕ್ಕಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಬ್ರಿಟಿಷರ ವಿರುದ್ಧ ಆರೆಸ್ಸೆಸ್ ಹೋರಾಡದೇ ಇದ್ದುದು ಯಾವುದಕ್ಕೆ ಎನ್ನುವುದನ್ನು ವಿವರಿಸಬಹುದೇ?
---------------------
ನಾನು ಕೇಂದ್ರ ಸರಕಾರದ ಏಜಂಟ್ ಅಲ್ಲ - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ತಮ್ಮನ್ನು ನೋಡಿದಾಗ ಎಲ್‌ಐಸಿ ಏಜೆಂಟ್ ತರ ಕಾಣೋದಿಲ್ಲ.
---------------------
ಉತ್ತಮ ಆಡಳಿತ ನೀಡುತ್ತೇನೆಂದು ರಕ್ತದಲ್ಲಿ ಬರೆದುಕೊಡುವೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಅಮಾಯಕ ಜನರ ರಕ್ತದಲ್ಲೇ?
---------------------
ತನ್ನನ್ನು ಮತ್ತು ತನ್ನ ಮಿತ್ರದೇಶಗಳನ್ನು ರಕ್ಷಿಸಿಕೊಳ್ಳಲು ತನ್ನ ಸೇನೆ ಸಂಪೂರ್ಣ ಸಿದ್ಧವಾಗಿದೆ - ಡೊನಾಲ್ಡ್ ಟ್ರಂಪ್,ಅಮೆರಿಕ ಅಧ್ಯಕ್ಷ
ಉಳಿದವರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಮಾತ್ರ ಭಯೋತ್ಪಾದನೆಯಾಗುತ್ತದೆ ಅಲ್ಲವೇ?
---------------------
ನೋಟು ನಿಷೇಧದಿಂದಾಗಿ ದೇಶದಲ್ಲಿ ನಕ್ಸಲ್ ಹಾಗೂ ಭಯೋತ್ಪಾದನೆ ಚಟುವಟಿಕೆ ಕಡಿಮೆಯಾಗಿದೆ - ರಾಜನಾಥ್‌ಸಿಂಗ್, ಕೇಂದ್ರ ಸಚಿವ
ಯಾವ ದೇಶದಲ್ಲಿ?
---------------------
ಶ್ರೀಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಕಟ್ಟುಕಥೆಯಲ್ಲ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಕನಕದಾಸರಿಗೆ ದೇವರ ದರ್ಶನಕ್ಕೆ ಪ್ರವೇಶ ನಿರಾಕರಿಸಿದ್ದು ಕೂಡ.
---------------------
ನೋಟು ಅಮಾನ್ಯದಿಂದ ನಾನೂ ಕಷ್ಟದಲ್ಲಿದ್ದೇನೆ - ಪ್ರಮೋದ್ ಮಧ್ವರಾಜ್, ಸಚಿವ
ನೋಟು ಅಮಾನ್ಯ ಮಾಡಿರುವುದು ಟಿಪ್ಪುಸುಲ್ತಾನ್ ಎಂದು ಭಾವಿಸಿ ಟಿಪ್ಪು ಜಯಂತಿಯನ್ನು ಬಹಿಷ್ಕರಿಸಿದಿರಾ?
---------------------
ನನಗೆ ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಬಿದ್ದಿಲ್ಲ - ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ
ಅಂತಹ ಕನಸು ಬಿದ್ದರೆ ಅದನ್ನು ಭಗ್ನಗೊಳಿಸಲು ಬಿಜೆಪಿಯೊಳಗೆ ಕಾಯುತ್ತಿದ್ದಾರೆ.
---------------------
ಕರ್ನಾಟಕ ಪ್ರಾಕೃತ ಭಾಷೆಯ ತವರು - ವೀರಪ್ಪ ಮೊಯ್ಲಿ, ಸಂಸದ
ಪ್ರಾಕೃತ ಭಾಷೆಯಲ್ಲಿ ಮಹಾಕಾವ್ಯ ಬರೆಯುವ ಬೆದರಿಕೆಯೇ?
---------------------
ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ನಿಮ್ಮ ಮಾತು ಕೇಳಿ ರೈತರು ಸಾಲ ಮಾಡಲು ಬ್ಯಾಂಕ್ ಕಡೆಗೆ ಧಾವಿಸಿದ್ದಾರೆ.
---------------------
ನಾನು ಕೆಲ ಕಂಪೆನಿಗಳ ವಸ್ತುಗಳನ್ನು ಬಳಸುವುದಿಲ್ಲ - ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡದ ನಾಯಕ
ಬಹುಶಃ ನೀವು ಯಾವೆಲ್ಲ ಜಾಹೀರಾತುಗಳಲ್ಲಿ ಭಾಗವಹಿಸಿದ್ದೀರೋ ಆ ಕಂಪೆನಿಗಳ ವಸ್ತುಗಳಿರಬೇಕು.
---------------------
ಐಟಿ ದಾಳಿ ಮೂಲಕ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ - ಪಿ.ಚಿದಂಬರಂ, ಕೇಂದ್ರದ ಮಾಜಿ ಸಚಿವ
ಕನಿಷ್ಠ ಐಟಿ ದಾಳಿಯ ಕಾರಣದಿಂದಲಾದರೂ ಬಾಯಿ ತೆರೆದಿರಲ್ಲ, ಸಂತೋಷ.
---------------------
ಯಡಿಯೂರಪ್ಪ ಜೊತೆ ಕೆಲ ದಲಿತ ನಾಯಕರು ಇರುವುದು ದುರ್ದೈವ - ಆರ್.ಬಿ.ತಿಮ್ಮಾಪುರ, ಸಚಿವ
ಅದು ಯಡಿಯೂರಪ್ಪರ ದುರ್ದೈವ.
---------------------
ನನಗೆ ಪಕ್ಷಕ್ಕಿಂತ ಜನ ಮುಖ್ಯ - ಆನಂದ್ ಸಿಂಗ್, ಬಿಜೆಪಿ ಶಾಸಕ
ಜನರಿಗೆ ನಿಮ್ಮ ಪಕ್ಷಕ್ಕಿಂತ ಅವರ ನೆಮ್ಮದಿ ಮುಖ್ಯ.
---------------------
ದೇವೇಗೌಡರ ನಂತರದಲ್ಲಿ ನನ್ನ ಜೀವ ಇರುವವರೆಗೂ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವುದಿಲ್ಲ - ಎಚ್.ಡಿ.ರೇವಣ್ಣ , ಶಾಸಕ
ಜೆಡಿಎಸ್‌ನೊಳಗಿದ್ದೇ ಕಾಂಗ್ರೆಸ್ ಪರ ಕೆಲಸ ಮಾಡುತ್ತೀರಿ ಎಂದಾಯಿತು.
---------------------
ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದುಗೊಳಿಸಲಾಗುವುದು - ಶ್ರೀರಾಮುಲು, ಸಂಸದ
ಜಯಂತಿಯ ಜೊತೆಗೆ ಟಿಪ್ಪು ಇರುವುದರಿಂದ ಇದು ಲವ್ ಜಿಹಾದ್ ಎಂದು ತಪ್ಪು ತಿಳಿದುಕೊಂಡಿದ್ದಾರೆ.
---------------------
ಕೆ.ಸಿ.ವೇಣುಗೋಪಾಲ್ ಹಾಗೂ ವಿಶ್ವನಾಥನ್‌ರಂತಹ ಅತ್ಯಾಚಾರಿಗಳು ಕರ್ನಾಟಕಕ್ಕೆ ಬರುವುದು ಬೇಡ - ಅರವಿಂದ ಲಿಂಬಾವಳಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ
ತಮ್ಮ ಪಕ್ಷದಲ್ಲಿರುವ ಅತ್ಯಾಚಾರಿಗಳೇ ಕರ್ನಾಟಕಕ್ಕೆ ಸಾಕಷ್ಟಾಯಿತು.
---------------------
ಶೇ.99 ರಾಜಕಾರಣಿಗಳು ಢೋಂಗಿಗಳು - ಬಾಬಾ ರಾಮ್‌ದೇವ್, ಯೋಗ ಗುರು
ಢೋಂಗಿ ಬಾಬಾಗಳು ಎಷ್ಟು ಶೇಕಡ ಇದ್ದಾರೆ ಎನ್ನುವ ಅಂಕಿಅಂಶವನ್ನೂ ನೀಡಬಾರದೇ?