ಓ ಮೆಣಸೇ..

Update: 2017-12-18 08:43 GMT

ಶಿಕ್ಷಣ ಕ್ಷೇತ್ರಗಳಲ್ಲಿ ಇಂದು ಸರ್ಟಿಫಿಕೆಟ್ ಸಿಗುತ್ತಿದೆಯೇ ಹೊರತು ಜ್ಞಾನ ದೊರೆಯುತ್ತಿಲ್ಲ - ಅನಂತ್ ಕುಮಾರ್ ಹೆಗಡೆ, ಕೇಂದ್ರ ಸಚಿವ

ಅದಕ್ಕೆ ಅಪ್ಪಟ ಉದಾಹರಣೆಯಾಗಿ ನೀವೇ ಇದ್ದೀರಲ್ಲ?

---------------------

ವಂದೇ ಮಾತರಂ ಹಾಡುವುದಕ್ಕೆ ಇರುವ ಸಮಸ್ಯೆಗಳೇನು ಎಂಬುದೇ ಅರ್ಥವಾಗುತ್ತಿಲ್ಲ - ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ.
ದೇಶದ ಉಳಿದ ಸಮಸ್ಯೆಗಳನ್ನೆಲ್ಲ ಪರಿಹರಿಸಿ ಆಯಿತೇ?

---------------------

ಮದ್ಯಪಾನ ನಿಷೇಧದಿಂದ ಕೋಮು ಸೌಹಾರ್ದ ಸಾಧ್ಯ - ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ
ಕುಡುಕರಿಗೆ ಜಾತಿ ಭೇದವಿಲ್ಲ ಎನ್ನುವುದು ಈವರೆಗಿನ ನಂಬಿಕೆ.

---------------------

ಮಣ್ಣಿಗೆ ಗೌರವ ಕೊಡುವ ಸಂಸ್ಕೃತಿ ಉಳಿದಿರುವುದು ಭಾರತದಲ್ಲಿ ಮಾತ್ರ - ನಳಿನ್‌ಕುಮಾರ್ ಕಟೀಲು,ಸಂಸದ
ಮನುಷ್ಯರಿಗೆ ಗೌರವ ಕೊಡುವ ಸಂಸ್ಕೃತಿ ಇನ್ನೂ ಬಂದಿಲ್ಲ ಎನ್ನುವುದು ವಿಷಾದನೀಯ.

---------------------

ಇಂದಿರಾಗಾಂಧಿಯವರ ಹಾದಿಯಲ್ಲಿಯೇ ಸೋನಿಯಾ ಗಾಂಧಿಯವರು ನಡೆಯುತ್ತಿರುವುದು ಖುಷಿಯ ವಿಚಾರ - ಜನಾದರ್ನ ಪೂಜಾರಿ, ಮಾಜಿ ಕೇಂದ್ರ ಸಚಿವ
ನೀವು ಮಾತ್ರ ಇತ್ತೀಚೆಗೆ ಪ್ರಭಾಕರ ಭಟ್ಟರ ಹಾದಿಯಲ್ಲಿ ತೂರಾಡುತ್ತಿದ್ದೀರಲ್ಲ?

---------------------

ಹಿಂಬಾಗಿಲಿನ ಮೂಲಕ ರಾಜಕೀಯಕ್ಕೆ ಬಂದು ಅಧಿಕಾರ ಅನುಭವಿಸುವ ಜಾಯಮಾನ ನಮ್ಮದಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಅದರ ಎಲ್ಲಾ ಹಕ್ಕನ್ನು ಮಗನಿಗೆ ನೀಡಿದಂತಿದೆ.

---------------------

ಬಿಜೆಪಿಯಲ್ಲಿ ಮೋದಿ-ಯಡಿಯೂರಪ್ಪ, ಕಾಂಗ್ರೆಸ್‌ನಲ್ಲಿ ರಾಹುಲ್-ಸಿದ್ದರಾಮಯ್ಯ ಜೋಡೆತ್ತುಗಳಿದ್ದಂತೆ - ಆರ್.ಅಶೋಕ್, ಬಿಜೆಪಿ ಮುಖಂಡ
ನೀವು ಜೋಡೆತ್ತು ಹಾಕಿರುವ ಸೆಗಣಿ ಎನ್ನುವುದು ಜನರ ಅಂಬೋಣ.

---------------------

ಬದುಕು ಬಹಳ ಸುಲಭ - ಬಾಬಾ ರಾಮ್‌ದೇವ್, ಯೋಗಗುರು
ಜನರನ್ನು ಮೋಸಗೊಳಿಸುವ ತಂತ್ರ ಗೊತ್ತಿದ್ದರೆ.

---------------------

ಜನ ಪ್ರತಿನಿಧಿಗಳ ನಾಲಿಗೆ ಅವರ ಹಿಡಿತದಲ್ಲಿರಬೇಕು - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಅವರ ಎಂದರೆ, ಮೋದಿಯ ಹಿಡಿತದಲ್ಲೇ?

---------------------

ದಲಿತರ ವಿರುದ್ಧ ದೌರ್ಜನ್ಯ ನಿಲ್ಲದಿದ್ದರೆ ಬೌದ್ಧ ಧರ್ಮ ಸೇರುತ್ತೇನೆ - ಮಾಯಾವತಿ, ಬಿಎಸ್ಪಿ ನಾಯಕಿ
ಈಗ ನೀವಿರುವ ಧರ್ಮ ಯಾವುದು ಎನ್ನುವುದನ್ನು ವಿವರಿಸುತ್ತೀರಾ?

---------------------

ಮೋದಿ ‘ಬಚ್ಚಾ’ನಾ, ಸಿದ್ದರಾಮಯ್ಯ ‘ಬಚ್ಚಾ’ನಾ ಶೀಘ್ರದಲ್ಲಿ ಗೊತ್ತಾಗಲಿದೆ - ವೀರಪ್ಪ ಮೊಯ್ಲಿ, ಸಂಸದ
ಸಿದ್ದರಾಮಯ್ಯ ಅವರನ್ನು ಬಚ್ಚಾನಾಗಿ ಮಾಡುವ ನಿಮ್ಮ ಯೋಜನೆ ಪೂರ್ತಿಯಾದಂತಿದೆ.

---------------------

ರಾಜಕೀಯ ಎಂಬ ನಾಟಕದಲ್ಲಿ ಅಭಿನಯ ಬಾರದ ನಾನು ದುರಂತ ನಾಯಕನಾದೆ - ಗಾಲಿ ಜನಾರ್ದನ ರೆಡ್ಡಿ, ಬಿಜೆಪಿ ಮುಖಂಡ
ಗಾಳಿ ಹೋದ ಗಾಲಿಯಂತೆ.

---------------------

ಕಾಂಗ್ರೆಸ್ ಮನೆಗೆ ಹೋದ ದಿನ ಕರ್ನಾಟಕದಲ್ಲಿ ಅಚ್ಛೇದಿನ್ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಆದರೆ ಅದಕ್ಕೆ ಬಿಜೆಪಿ ಅವಕಾಶ ನೀಡಬೇಕಲ್ಲ?

---------------------

ಇನ್ನು ಮುಂದೆ ಕೇಜ್ರಿವಾಲ್‌ನಂತಹವರು ನನ್ನ ಆಂದೋಲನದಿಂದ ಹೊರ ಹೊಮ್ಮುವುದಿಲ್ಲ - ಅಣ್ಣಾ ಹಝಾರೆ, ಸಾಮಾಜಿಕ ಹೋರಾಟಗಾರ

ಒಂದು ಹೆರಿಗೆಯೇ ಸಾಕಾಯಿತೇ?

---------------------

ಕಾಂಗ್ರೆಸ್ ನಾಯಕರು ಪ್ರತಿಷ್ಠೆ ಬಿಟ್ಟು ಕೆಲಸ ಮಾಡಿದರೆ ಪಕ್ಷಕ್ಕೆ ಒಳ್ಳೆಯದು - ಜಾಫರ್‌ ಶರೀಫ್, ಕಾಂಗ್ರೆಸ್ ನಾಯಕ
ಜೊತೆಗೆ ತಮ್ಮಂಥವರು ಸ್ವಜನಪಕ್ಷಪಾತ ಬಿಡಬೇಕು.

---------------------

ಜೀವನ ಪೂರ್ತಿ ನಾವು ವಿದ್ಯಾರ್ಥಿಗಳಾಗಿಯೇ ಇರಬೇಕು - ನರೇಂದ್ರ ಮೋದಿ, ಪ್ರಧಾನಿ
ಆದರೆ ಅಂಕಪಟ್ಟಿ ಮಾತ್ರ ಕೇಳಬಾರದು.

---------------------
 
ಬಿಜೆಪಿಗೆ ನಾನು ನನಗೆ ಬಿಜೆಪಿ ಅನಿವಾರ್ಯವಾಗಿದೆ - ಬಸನಗೌಡ ಪಾಟೀಲ ಯತ್ನಾಳ್, ಕೇಂದ್ರದ ಮಾಜಿ ಸಚಿವ

ಆದರೆ ಮತದಾರರಿಗೆ ಅನಿವಾರ್ಯವಾಗಬೇಕೆಂದೇನೂ ಇಲ್ಲವಲ್ಲ.

---------------------

ನಮ್ಮದು ರಾಷ್ಟ್ರೀಯಪಕ್ಷ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಬಹುಶಃ ಅದಕ್ಕೇ ಇರಬೇಕು, ಎಲ್ಲ ರಾಜ್ಯಗಳಲ್ಲೂ ಸೋಲು ಎದುರಾಗುತ್ತಿರುವುದು.
---------------------

ಕಾಂಗ್ರೆಸ್ ಈಗ ಮೂರು ಬಾಗಿಲು ಇರುವ ಮನೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ
ಮೂರು ನಾಲಗೆ ಇರುವ ಮನುಷ್ಯನಿಗಿಂತ ವಾಸಿ.

---------------------

ಯಡಿಯೂರಪ್ಪ ಖಾಲಿ ಬುಟ್ಟಿ ತೋರಿಸಿ ಹಾವು ಬಿಡ್ತೇನೆ ಅಂತ ಹೆದರಿಸುತ್ತಿದ್ದಾರೆ - ಸಿದ್ದರಾಮಯ್ಯ, ಮುಖ್ಯಮಂತ್ರಿ
ಹಾವು ಈಶ್ವರಪ್ಪರ ಹೆಸರಲ್ಲಿ ಬಿಜೆಪಿ ಮನೆಯೊಳಗೇ ಓಡಾಡುತ್ತಿದೆ.

---------------------

ಅಮಿತ್ ಶಾ ಸೂಚನೆಯಂತೆ ಬಿಜೆಪಿ ನಾಯಕರು ರಾಜ್ಯದಲ್ಲಿ ಗಲಭೆ ನಡೆಸುತ್ತಿದ್ದಾರೆ. - ಪ್ರಮೋದ್ ಮಧ್ವರಾಜ್, ಸಚಿವ
ಅದನ್ನು ನಿಯಂತ್ರಿಸದೇ ಇರಲು ನಿಮಗೆ ನಿರ್ದೇಶಿಸಿದ ಬಿಜೆಪಿ ನಾಯಕರು ಯಾರು?

---------------------

ಕಲ್ಲಡ್ಕ ಪ್ರಭಾಕರ ಭಟ್ ಧೈರ್ಯವಿದ್ದರೆ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿ - ರಮಾನಾಥ ರೈ, ಸಚಿವ
ಸ್ಪರ್ಧಿಸದಿದ್ದರೂ ಕಲ್ಲಡ್ಕವನ್ನು ಆಳುತ್ತಿರುವುದು ಭಟ್ಟರೇ ಆಗಿರುವಾಗ ಯಾರು ಗೆದ್ದರೇನು?

---------------------

ಬಿಜೆಪಿ ನಾಯಕರಲ್ಲಿ ಈಗ ಬೆಂಕಿ ಹಚ್ಚುವ ಸ್ಪರ್ಧೆ ನಡೆದಿದೆ - ಯು.ಟಿ. ಖಾದರ್, ಸಚಿವ

ಮತ್ತು ಕಾಂಗ್ರೆಸ್‌ನೊಳಗೆ ಪಿಟೀಲು ನುಡಿಸುವ ಸ್ಪರ್ಧೆ ನಡೆಯುತ್ತಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!