40 ಯುವ ಬರಹಗಾರರಿಗೆ ಚೊಚ್ಚಲ ಕೃತಿ ಪ್ರೋತ್ಸಾಹ ಧನ
ಬೆಂಗಳೂರು, ಡಿ.18: ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕೊಡಮಾಡುವ ವಾರ್ಷಿಕ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹ ಧನಕ್ಕೆ 2016 ನೆ ಸಾಲಿಗೆ 40 ಜನರನ್ನು ಆಯ್ಕೆ ಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲಿ 2016 ನೆ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹ ಧನಕ್ಕೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಈ ಪುರಸ್ಕಾರಕ್ಕೆ 140 ಕೃತಿಗಳು ಬಂದಿದ್ದು, ಅದರಲ್ಲಿ 40 ಕೃತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಪ್ರತಿ ಕೃತಿಗೆ 15 ಸಾವಿರ ರೂ.ಗಳು ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು. ಅಳಿಲುಮರ(ಎಂ.ಕಾಳೀರ ಶೆಟ್ಟಿ), ಕವನ ಸಂಕಲನ(ಹಣಮಂತರಾವ ಘಂಟೇಕರ್), ಮೊದಲ ಮಳೆ (ಬಸವರಾಜ್ ಬಳ್ಳಾರಿ), ಕನಸಿನ ಕುಸುಮಗಳು(ಉಷಾ), ಹೊಸತನ(ಸತೀಶ್ ಕುಮಾರ್ ಎನ್. ಗರಣಿ), ಹಾರುವ ಹೂಗಳು(ದ್ವಾರನಕುಂಟೆ ಪಿ.ಚಿತ್ತನಾಯಕ), ಮುರಿದ ಟೊಂಗೆಯ ಚಿಗುರು(ಸೂಗೂರೇಶ ಹಿರೇಮಠ), ಅಂತರಂಗದ ಹೆಜ್ಜೆಗಳು(ಮೈತ್ರಿ ಭಟ್), ಮುಸ್ಸಂಜೆ ಪಯಣ(ಮಹಾತೇಂಶ ಜಿ. ಹೊದ್ಲಾರ), ಗದ್ದೆಯಲ್ಲಿಯ ಪದ್ಯಗಳು(ಚನ್ನಬಸಪ್ಪ ಗು.ನಾಡರ ), ಬಂದೂಕು ಹಿಡಿದ ಕೈಗಳು(ಕೆ.ಅಂಜಲಿ ಬೆಳಗಲ್), ಮೀರಾ ಮೋಹನ ಮಿಲನ(ಗಣೇಶ, ಜಕಾಪುರ, ಮೈಂದರ್ಗಿ), ತಾಯಿ ಗರ್ಭದಿಂದ ಭೂಗರ್ಭದವರೆಗೂ(ಎಚ್.ಎಸ್. ದರ್ಶನ) ಕೃತಿಗಳು ಆಯ್ಕೆಯಾಗಿವೆ.
ಬಿಂಬ(ಬಸವರಾಜ ಜಾಡರ), ಬಾಡದಿರಲಿ ಭಾವಕುಸುಮ(ಗೀತಾಂಜಲಿ ಎಸ್.ಪಾಟೀಲ್), ಒಂಟಿ ಹೊಸ್ತಿಲು(ಅಶೋಕ ಬ.ಹೊಸಮನಿ), ಹೆಜ್ಜೆ ಗುರುತು(ಅಜ್ಜಂಪುರ ಎಸ್.ಶೃತಿ), ತೇಲಿಹೋದ ದೋಣಿ(ವಿ.ಮಂಜುನಾಥ್ ಸರ್ಜಾಪುರ), ನನ್ನೊಳಗೊಬ್ಬ ಬುದ್ಧನಿದ್ದಾನಂತೆ(ಬಿ.ತೇಜಸ್ವಿನಿ), ಋತುಗಾನ(ಎಸ್.ರಘುರಾಮ), ಮುರಳಿಗಾನ(ಇಂದುಚೇತನ ಬೋರುಗಡ್ಡೆ), ಬಿಕರಿಗಿಟ್ಟ ಕನಸು(ದೇವು ಮಾಕೊಂಡ), ಈ ಹೂವ ಹೆಸರು ನಿಮ್ಮಿಚ್ಚೆಯಂತೆ(ಪರಿಮಳಾ ಕಮತರ), ಕನಸು ಮನಸು(ಆರ್.ಎ.ಬಸವರಾಜ), ಜಾಲಬಂಧ(ಎಂ.ಪಿ.ಓಹಿಲ), ನೀಲಿ ಗಗನ(ಭೀಮಪ್ಪ ಎನ್.ದೊಡ್ಡಮನಿ), ಬುದ್ಧಗಿತ್ತಿಯ ನೆನಪು(ನಾಗರಾಜ ಕೋರಿ), ಚೈತ್ರಾಕ್ಷಿ(ಪಿ.ಕೀರ್ತಿ), ಕಡಲ ಚಡಪಡಿಕೆ(ಮಧು ಬಿರಾದಾರ) ಹಾಗೂ ಮಾರಾಟವಾಗದ ಗೊಂಬೆ(ಇಸ್ಮಾಯಿಲ್ ತಳಕಲ್) ಕೃತಿಗಳಿವೆ.
ಆಯಿಶನ್ ಸಪ್ವಾನ ಅವರ ಬಿಸಿಲ್ಗುದುರ ಕಾದಂಬರಿ, ಎ.ಎಸ್.ಸೌಮ್ಯಶ್ರೀ ಅವರ ಪ್ರಕೃತಿಯ ಕೂಗು, ಸಿದ್ಧಾರೂಡ ಕಟ್ಟಿಮನೆ ಅವರ ತೇರಾಮೇಲು ಹಾಗೂ ನೋಟದಲ್ಲೊಂದಿಷ್ಟು(ಕೈಲಾಸ ಎಸ್.ಡೋಣಿ), ನಿಮ್ಮ ಮಕ್ಕಳು ನಿಮಗೆಷ್ಟು ಗೊತ್ತು?( ನಾಗರಾಜ ಎಂ.ನಾಯಕ), ಅಸಮಾನತೆ ನಿವಾರಸುವಲ್ಲಿ ಶರಣರ ಪಾತ್ರ(ಬಸವರಾಜ ಚಂದ್ರಕಾಂತ ಭಾಸ್ಕರ್), ನೆಲ ಸಂಸ್ಕೃತಿಯ ಚಿಂತನೆ(ಪದ್ಮಾವತಿ ಬಿ. ಕಲೆಗಾರ), ಕತ್ತಲನಾಡಿನ ಕಾಲುದನಿ(ಮಹೇಶ್ ಆರ್.ಕೋಡಿಉಗನೆ), ಶೆಟ್ಟಿಕೇರಾ ಗ್ರಾಮಾಧ್ಯಯನ(ಸಿ.ಆರ್.ಕಂಬಾರ ಶೆಟ್ಟಿಕೇರಾ) ಹಾಗೂ ಅಫಜಲಪೂರ ತಾಲೂಕಿನ ಶಾಸನ(ಸುನೀಲ್) ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.