ಭಾರತದ ರಾಯಭಾರಿ ಸೈಯದ್ ಅಕ್ಬರುದ್ದೀನ್ ಟ್ವಿಟರ್ ಖಾತೆ ಹ್ಯಾಕ್

Update: 2018-01-14 22:04 IST
ಭಾರತದ ರಾಯಭಾರಿ ಸೈಯದ್ ಅಕ್ಬರುದ್ದೀನ್ ಟ್ವಿಟರ್ ಖಾತೆ ಹ್ಯಾಕ್
  • whatsapp icon

ಹೊಸದಿಲ್ಲಿ, ಜ. 14: ಭಾರತದ ರಾಯಭಾರಿ ಹಾಗೂ ವಿಶ್ವಸಂಸ್ಥೆಯ ಖಾಯಂ ಸದಸ್ಯ ಸೈಯದ್ ಅಕ್ಬರುದ್ದೀನ್ ಅವರ ಟ್ವಿಟರ್ ಖಾತೆಯನ್ನು ಶನಿವಾರ ಟರ್ಕಿಯ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ. ಹ್ಯಾಕರ್‌ಗಳು ಪಾಕಿಸ್ತಾನ ಹಾಗೂ ಟರ್ಕಿಯ ಧ್ವಜದ ಚಿತ್ರ, ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್ ಹುಸೈನ್ ಅವರ ಭಾವಚಿತ್ರ ಹಾಗೂ ಸಂಗೀತ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಅಕ್ಬರುದ್ದೀನ್ ಅವರ ಹ್ಯಾಕ್ ಮಾಡಿದ ಟ್ವಿಟ್ಟರ್ ಖಾತೆಯಲ್ಲಿ ‘‘ಟರ್ಕಿಸ್ ಸೈಬರ್ ಆರ್ಮಿ ಅಯಿಲ್ಡಿಜ್ ಟಿಮ್ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿದೆ. ನಾವು ನಿಮಗೆ ಟರ್ಕಿಗಳ ಸಾಮರ್ಥ್ಯ ತೋರಿಸುತ್ತೇವೆ. ! ಪಾಕಿಸ್ತಾನವನ್ನು ಪ್ರೀತಿಸಿ’’ ಎಂದು ಸಂದೇಶ ಪೋಸ್ಟ್ ಮಾಡಿದ್ದಾರೆ. ಹ್ಯಾಕ್ ಮಾಡಿದ ಬಳಿಕ ಹ್ಯಾಕರ್‌ಗಳು ಟ್ವಿಟ್ಟರ್‌ನ ಹ್ಯಾಂಡಲ್ ಅನ್ನು ಬದಲಾಯಿಸಿದ್ದಾರೆ. ಇದರಿಂದ ಅಕ್ಬರುದ್ದೀನ್ ಅವರ ಖಾತೆ ‘ನೀಲಿ ಗುರುತು’ ಕಳೆದುಕೊಂಡಿತು. ಟ್ವಿಟ್ಟರ್ ಖಾತೆಯನ್ನು ಅಧಿಕೃತವೆಂದು ಪರಿಗಣಿಸಿದೆ ಎಂಬುದಕ್ಕೆ ‘ನೀಲಿ ಗುರುತು’ ಸೂಚಕ.

ಅಕ್ಬರುದ್ದೀನ್ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ತಜ್ಞರ ತಂಡ ಹ್ಯಾಕರ್‌ಗಳ ಪೋಸ್ಟ್‌ಗಳನ್ನು ತೆಗೆದು ಹಾಕಿ, ತಾಂತ್ರಿಕ ದೋಷ ಸರಿಪಡಿಸಿತು. ಹ್ಯಾಕ್ ಸಂದರ್ಭ ಅಕ್ಬರುದ್ದೀನ್ ಅವರು ಟ್ವಿಟ್ಟರ್ ಖಾತೆ ಕೆಲವು ಸಮಯ ಅದೃಶ್ಯವಾಗಿತ್ತು. ತಾಂತ್ರಿಕ ಸಮಸ್ಯೆ ಸರಿಪಡಿಸಿದ ಬಳಿಕ ಖಾತೆಗೆ ಮರು ಚಾಲನೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News