ಓ ಮೆಣಸೇ..
ಕರ್ನಾಟಕ ಕಾಂಗ್ರೆಸ್‌ಗೆ ಎಟಿಎಂ ಇದ್ದಂತೆ. - ಯೋಗಿ ಆದಿತ್ಯನಾಥ, ಉ.ಪ್ರ. ಮುಖ್ಯಮಂತ್ರಿ
ಬಿಜೆಪಿಯ ಬಳ್ಳಾರಿ ಎಟಿಎಂ ಕೆಟ್ಟು ಕೂತಿದೆ.
---------------------
ರಾಜ್ಯದ ಹಿತ ಕಾಪಾಡಲು ಪ್ರಾದೇಶಿಕ ಪಕ್ಷ ಅನಿವಾರ್ಯ -ದೇವೇಗೌಡ, ಮಾಜಿ ಪ್ರಧಾನಿ
ಮಕ್ಕಳ ಹಿತ ಕಾಪಾಡಲು ಎಂದರೆ ಪ್ರಾಮಾಣಿಕವಾಗಿರುತ್ತಿತ್ತು.
---------------------
ಲಾಲು ಪ್ರಸಾದ್ ಯಾದವ್ ಬಿಜೆಪಿ ಸೇರಿದ್ದರೆ ಶಿಕ್ಷೆ ಅನುಭವಿಸಬೇಕಾಗಿರಲಿಲ್ಲ - ಅಖಿಲೇಶ್ ಯಾದವ್, ಎಸ್ಪಿ ನಾಯಕ
ಬಿಜೆಪಿ ಸೇರುವುದಕ್ಕಿಂತ ದೊಡ್ಡ ಶಿಕ್ಷೆಯಿದೆಯೇ?
---------------------
ಸಿದ್ದರಾಮಯ್ಯ ಸರಕಾರ ಕರಾವಳಿಯ ಪೊಲೀಸರ ಕೈ ಕಟ್ಟಿ ಹಾಕಿದೆ - ನಳಿನ್ ಕುಮಾರ್ ಕಟೀಲು, ಸಂಸದ
ಕೋಮುವಾದಿಗಳ ಜೊತೆಗೆ ಕೈಜೋಡಿಸದೇ ಇರುವುದಕ್ಕಾಗಿ.
---------------------
ಕರಾವಳಿಯಲ್ಲಿ ಶಾಂತಿ ಸ್ಥಾಪನೆಗೆ ಪೇಜಾವರ ಶ್ರೀ - ವೀರೇಂದ್ರ ಹೆಗ್ಗಡೆ ಮುಂದಾಗಲಿ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಸಂಸ್ಥಾಪಕ
ಅವರು ಪ್ರಯತ್ನಿಸುತ್ತಲೇ ಇದ್ದಾರೆ, ನೀವು ಬಿಡಬೇಕಲ್ಲ?
---------------------
ಏಟಿಗೆ ಏಟು - ಕಣ್ಣಿಗೆ ಕಣ್ಣು ಪರಿಹಾರವಲ್ಲ - ಪ್ರತಾಪ್ ಸಿಂಹ, ಸಂಸದ
ತಮ್ಮ ಮೇಲಿರುವ ಕೇಸುಗಳನ್ನು ಹಿಂದೆಗೆಯಲು ಪೊಲೀಸರಿಗೆ ಈ ರೀತಿಯ ಮನವಿಯೇ?
---------------------
ಸಿದ್ದರಾಮಯ್ಯ ಮತ್ತು ಗೋಸುಂಬೆ ಮಧ್ಯೆ ಸ್ಪರ್ಧೆ ನಡೆದರೆ ಗೋಸುಂಬೆ ಸೋಲುತ್ತದೆ. - ಸಿ.ಟಿ. ರವಿ, ಶಾಸಕ
ಹೌದು. ನಿಮಗೆ ಸೋಲೇ ಗತಿ.
---------------------
ಯಡಿಯೂರಪ್ಪರ ಹೆಣ ಹೊರಲು ಬಿಜೆಪಿಯ ನಾಲ್ವರು ನಾಯಕರು ಸಿದ್ಧರಾಗುತ್ತಿದ್ದಾರೆ. - ಸಿದ್ದನಗೌಡ ಪಾಟೀಲ್, ಸಿಪಿಐ ನಾಯಕ
ಅವರ ಜೊತೆಗೆ ರಾಜ್ಯ ಬಿಜೆಪಿಯ ಹೆಣವನ್ನು ಕೂಡ ಹೊರಲಿದ್ದಾರೆ.
---------------------
ಸ್ಮಾರ್ಟ್ ಪ್ರಧಾನಿಗೆ ತಕ್ಕಂತೆ ಸ್ಮಾರ್ಟ್ ಸಿಎಂ ಆಗಿ ಯಡಿಯೂರಪ್ಪರನ್ನು ಆಯ್ಕೆ ಮಾಡಬೇಕಿದೆ - ಅನಂತ ಕುಮಾರ್, ಕೇಂದ್ರ ಸಚಿವ
ಅದಕ್ಕೆ ತಮ್ಮ ಬಣ ಅವಕಾಶ ಕೊಡಬೇಕು.
---------------------
ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜಾಂಗ್ ಉನ್ ಜೊತೆ ಮಾತುಕತೆಗೆ ಸಿದ್ಧ. - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಕೈಯಲ್ಲಿ ಅಣುಬಾಂಬ್ ಇಟ್ಟುಕೊಂಡು ಮಾತುಕತೆಯೇ?
---------------------
ಇನ್ನೆರಡು ಬಾರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದರೆ ಸಿಎಂ ಸಿದ್ದರಾಮಯ್ಯ ಜೈಶ್ರೀರಾಮ್ ಎಂದು ಘೋಷಣೆ ಕೂಗಿದರೂ ಆಶ್ಚರ್ಯವೇನಿಲ್ಲ. - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಹೇ ರಾಮ್ ಎಂಬ ಗಾಂಧಿಯ ಕೊನೆಯ ಉದ್ಗಾರ ಅದು.
---------------------
ಸಿಎಂ ಸಿದ್ದರಾಮಯ್ಯರಿಂದ ಬಿಜೆಪಿ ಮತ್ತು ಆರೆಸ್ಸೆಸ್‌ನ್ನು ಬಗ್ಗುಬಡಿಯಲು ಸಾಧ್ಯವಿಲ್ಲ - ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ
ಅದಕ್ಕಾಗಿ ಅದರ ಹೊಣೆಯನ್ನು ನೀವೇ ವಹಿಸಿದಂತಿದೆ.
---------------------
ಭಾರತ ಹಾಗೂ ಪಾಕಿಸ್ತಾನದ ಪ್ರಧಾನಿಗಳು ಸ್ನೇಹಿತರಾಗಬೇಕು - ಮೆಹಬೂಬ ಮುಫ್ತಿ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ
ಪ್ರಧಾನಿಗಳು ಸ್ನೇಹಿತರಾಗಿಯೇ ಇದ್ದಾರೆ. ಆದರೆ ದೇಶಗಳನ್ನು ಸ್ನೇಹಿತರಾಗಿಸಲು ಅವಕಾಶ ನೀಡುತ್ತಿಲ್ಲ.
---------------------
ಸಾಲ ಮಾಡಿ ಆಡಳಿತ ನಡೆಸುವವನು ನಾನಲ್ಲ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅಂದರೆ ರಾಜ್ಯವನ್ನು ಮಾರಿಯೇ ಆಡಳಿತ ನಡೆಸುವ ಹುನ್ನಾರವೇ ?
---------------------
ನನಗೆ ಕಳೆದುಕೊಳ್ಳಲು ಏನೂ ಇಲ್ಲ - ಉಪೇಂದ್ರ, ಕೆಪಿಜೆಪಿ ಸಂಸ್ಥಾಪಕ
ಕಳೆದುಕೊಳ್ಳುವುದಕ್ಕೆ ಮತದಾರರಿದ್ದಾರಲ್ಲ, ನಿಮಗೇನು ಚಿಂತೆ?
---------------------
ನನ್ನಿಂದ ಬೆಳೆದವರೇ ನನ್ನನ್ನು ಮೂಲೆಗುಂಪು ಮಾಡಿದರು - ಜನಾದರ್ನ ಪೂಜಾರಿ, ಕಾಂಗ್ರೆಸ್ ನಾಯಕ
ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ಇಂತಹದೊಂದು ಆರೋಪವೇ?
---------------------
ನ್ಯೂಟನ್‌ಗಿಂತ ಮೊದಲೇ ಗುರುತ್ವ ನಿಯಮ ಕಂಡುಹಿಡಿದದ್ದು ಎರಡನೇ ಬ್ರಹ್ಮಗುಪ್ತ - ವಾಸುದೇವ್ ದೇವ್ನಾನಿ, ರಾಜಸ್ಥಾನ ಸಚಿವ
ಬಹುಷಃ ನ್ಯೂಟನ್ ಅದನ್ನು ಗುಪ್ತವಾಗಿ ಕದ್ದಿರಬೇಕು.
---------------------
ಎಚ್‌ಡಿಕೆ ಒಬ್ಬ ಹಿಟ್ ಆ್ಯಂಡ್ ರನ್ ಸ್ಪೆಷಲಿಷ್ಟ್ - ಜಗದೀಶ್ ಶೆಟ್ಟರ್, ಬಿಜೆಪಿ ನಾಯಕ
ರಾಗಿ ಹಿಟ್ ತಿಂದ ಜೀವ ಅದು.
---------------------
ಗೋವು ಸಾಯುವವರೆಗೆ ಅದು ನಮ್ಮ ಬಹಳ ದೊಡ್ಡ ಆಸ್ತಿ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಸತ್ತ ನಂತರವೂ ಮಾಂಸಾಹಾರಿಗಳಿಗೆ ಅದು ಆಸ್ತಿಯೇ.
---------------------
ನಾನು ಬೇವರ್ಸಿ ಅಲ್ಲ - ಅನಿಲ್‌ರಾಜ್, ಶಾಸಕ
ಇಷ್ಟು ತಡವಾಗಿ ನಿಮಗೆ ಗೊತ್ತಾಯಿತೇ?
---------------------
ನಮ್ಮದು ಎಲ್ಲರನ್ನೂ ಒಳಗೊಂಡ ಹಿಂದುತ್ವ - ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಸಂದರ್ಭ ಬಂದಾಗ ಆರೆಸ್ಸೆಸ್‌ನ್ನೂ ಬಳಸಿಕೊಳ್ಳುತ್ತೀರಿ ಎಂದಾಯಿತು.
---------------------
ಬುಟ್ಟಿಯಲ್ಲಿ ಹಾವಿಲ್ಲದಿದ್ದರೂ ಯಡಿಯೂರಪ್ಪ ಪುಂಗಿ ಊದುತ್ತಿದ್ದಾರೆ - ಸಿದ್ದರಾಮಯ್ಯ, ಮುಖ್ಯಮಂತ್ರಿ
ಹಾವು ಈಶ್ವರಪ್ಪರ ಪ್ಯಾಂಟೊಳಗೆ ಸೇರಿಕೊಂಡಿದೆ.
---------------------
ಶತಮಾನಗಳ ಇತಿಹಾಸ ಹೊಂದಿರುವ ಕಾಂಗ್ರೆಸನ್ನು ಅಳಿಸಿಹಾಕುವವರು ಯಾರೂ ಹುಟ್ಟಿಲ್ಲ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಕಾಂಗ್ರೆಸ್‌ನ ನಾಯಕರು ಈವರೆಗೆ ಮಾಡಿದ್ದೇನು ಮತ್ತೆ?