ಆರೆಸ್ಸೆಸ್ ಕಾರ್ಯಕರ್ತನ ಕೊಲೆ ಪ್ರಕರಣ: ನಾಲ್ವರು ಪೊಲೀಸ್ ವಶಕ್ಕೆ

Update: 2018-01-20 14:13 IST
ಆರೆಸ್ಸೆಸ್ ಕಾರ್ಯಕರ್ತನ ಕೊಲೆ ಪ್ರಕರಣ: ನಾಲ್ವರು ಪೊಲೀಸ್ ವಶಕ್ಕೆ
  • whatsapp icon

ಪೆರಾವೂರ್(ಕೇರಳ),ಜ.20: ಕಾಕ್ಕಯಂಗಾಡ್ ಸರಕಾರಿ ಐಟಿಐ ವಿದ್ಯಾಥಿ ಶ್ಯಾಮ್ ಪ್ರಸಾದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾರಕ್ಕಂಡಂ ನಿವಾಸಿ ಮುಹಮ್ಮದ್(20),ಮಿನಿಕ್ಕೋಲ್ ಸಲೀಂ(26), ನಿರ್ವೇಲಿ ಸಮೀರ್(25), ಪಾಲಯಾಡ್ ನಿವಾಸಿ ಹಾಷಿಂ(39) ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ಕೊಲೆ ಕೃತ್ಯ ನಡೆದು ಎರಡು ಗಂಟೆಗಳಲ್ಲಿ ವಯನಾಡಿನ ತಲಪ್ಪುಯ ಎಂಬಲ್ಲಿಂದ ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿದ್ದ ಜನರು ದುಷ್ಕರ್ಮಿಗಳು ತಂಡ ಕೊಮ್ಮೆರಿ ದಾರಿಯಾಗಿ ನೆಡುಂಪೊಯಿ ಹೋಗಿದೆ ಎಂದು ತಿಳಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ  ಪೆರಾವೂರ್ ಸಿಐ ಕುಟ್ಟಿಕೃಷ್ಣನ್ ನೇತೃತ್ವದ ಪೊಲೀಸರು ತಲಪ್ಪುಯ ಪೊಲೀಸ್ ಠಾಣೆಗೆವಿವರ ನೀಡಿದ್ದಾರೆ. ಅದರಂತೆ ವಾಹನ ತಪಾಸಣೆಗಿಳಿದ ತಲಪ್ಪುಯ ಪೊಲೀಸರು ಕಾರು  ಸಹಿತ ನಾಲ್ವರು ಆರೋಪಿಗಳನ್ನು  ಕಸ್ಟಡಿಗೆ ಪಡೆದು ರಾತ್ರಿಯೇ ತನಿಖಾಧಿಕಾರಿಗಳ ವಶಕ್ಕೊಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News