ವಾಟ್ಸ್ಯಾಪ್, ಫೇಸ್ ಬುಕ್ ನಂತೆ ಅಂಕಪಟ್ಟಿಯಲ್ಲೂ ಸ್ಮೈಲಿ !
Update: 2018-01-27 17:43 IST

ಭೋಪಾಲ್,ಜ.27: ಮಧ್ಯಪ್ರದೇಶದ ಒಂದನೆ ತರಗತಿ, ಎರಡನೆ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳ ಅಭಿವೃದ್ಧಿ ಪತ್ರದಲ್ಲಿ ಅಂಕದ ಬದಲಿಗೆ ಸ್ಮೈಲಿ ನೀಡಲು ರಾಜ್ಯದ ಪ್ರಾಥಮಿಕ ಶಾಲಾ ಪಠ್ಯ ಪದ್ಧತಿ ತಯಾರಿಸುವ ರಾಜ್ಯ ಶಿಕ್ಷಾ ಕೇಂದ್ರ ತೀರ್ಮಾನಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದುಜಾರಿಗೆ ಬರಲಿದೆ.
ಇದಕ್ಕೆ ಸಂಬಂಧಿಸಿದ ನಿರ್ದೇಶ, ತೀರ್ಮಾನಗಳನ್ನು ಎಲ್ಲ ಜಿಲ್ಲೆಯ ಶಿಕ್ಷಣಾಧಿಕಾರಿಗಳಿಗೆ ಕಳಿಸಿದ್ದೇವೆ ಎಂದು ರಾಜ್ಯ ಶಿಕ್ಷಾ ಕೇಂದ್ರ ನಿರ್ದೇಶಕ ಲೋಕೇಶ್ ಜಾಧವ್ ತಿಳಿಸಿದ್ದಾರೆ.
ಪ್ರಥಮ ತರಗತಿಯಿಂದಲೇ ಸ್ಪರ್ಧಾತ್ಮಕ ಮನಸ್ಸಿನಿಂದ ಕಲಿತು ಅಂಕ ಗಳಿಸಲು ಹೆತ್ತವರು ಮಕ್ಕಳ ಮೇಲೆ ಒತ್ತಡ ಹಾಕುತ್ತಾರೆ. ಆದ್ದರಿಂದ ಸ್ಮೈಲಿ ನೀಡಲು ನಾವು ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಕಲಿಯಲು ಮಕ್ಕಳು ಆಸಕ್ತಿ ಪ್ರಕಟಿಸಿದರೆ ಎರಡು ಸ್ಮೈಲಿಗಳನ್ನು ಕೊಡಲಾಗುವುದು. ಸ್ವಲ್ಪ ಕಡಿಮೆ ಉತ್ಸಾ ಹ ತೋರಿಸುವ ಮಕ್ಕಳಿಗೆ ಒಂದು ಸ್ಮೈಲಿ ಮಾತ್ರ ನೀಡಲಾಗುತ್ತದೆ ಎಂದು ಲೋಕೇಶ್ ಜಾಧವ್ ತಿಳಿಸಿದ್ದಾರೆ.