ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಸಿದ್ದೇಶ್ವರ ಸ್ವಾಮಿ: ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದೇನು?

Update: 2018-01-28 19:03 IST
ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಸಿದ್ದೇಶ್ವರ ಸ್ವಾಮಿ: ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದೇನು?
  • whatsapp icon

ವಿಜಯಪುರ, ಜ,28: ಕರ್ನಾಟಕದ ವಿಜಯಪುರದಲ್ಲಿರುವ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳು ಕೇಂದ್ರ ಸರಕಾರವು ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಗೌರವಪೂರ್ಣವಾಗಿ ನಿರಾಕರಿಸಿದ್ದಾರೆ. ತಾನೊಬ್ಬ ಸನ್ಯಾಸಿ ಹಾಗಾಗಿ ಪ್ರಶಸ್ತಿಯ ಬಗ್ಗೆ ಯಾವುದೇ ಆಸಕ್ತಿಯಿಲ್ಲ ಎಂದು ಅವರು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

“ಜನವರಿ 26ರಂದು ಬರೆದಿರುವ ಪತ್ರದಲ್ಲಿ, ಪ್ರಶಸ್ತಿ ನೀಡಿ ಗೌರವಿಸಿದ ಭಾರತೀಯ ಸರಕಾರಕ್ಕೆ ಕೃತಜ್ಞತೆಗಳು. ಆದರೆ ನಾನು ಅದನ್ನು ವಿನಯಪೂರ್ವಕವಾಗಿ ನಿರಾಕರಿಸುತ್ತೇನೆ. ಓರ್ವ ಸನ್ಯಾಸಿಯಾಗಿ ನನಗೆ ಪ್ರಶಸ್ತಿಗಳಲ್ಲಿ ಯಾವುದೇ ಆಸಕ್ತಿಯಿಲ್ಲ. ಅತ್ಯುನ್ನತ ಮೌಲ್ಯವನ್ನು ಹೊಂದಿರುವ ಪ್ರಶಸ್ತಿಯನ್ನು ನಿರಾಕರಿಸಿರುವ ನನ್ನ ನಿರ್ಧಾರವನ್ನು ನೀವು ಮೆಚ್ಚುತ್ತೀರಿ ಎಂದು ಭಾವಿಸುತ್ತೇನೆ” ಎಂದು ಸ್ವಾಮೀಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News