ಓ ಮೆಣಸೇ..

Update: 2018-02-12 08:01 GMT

ಸಾಮರಸ್ಯ ಮತ್ತು ಸಹಿಷ್ಣುತೆ ನಮ್ಮ ಡಿಎನ್‌ಎಯಲ್ಲಿಯೇ ಇದೆ - ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ

ಬರೇ ಡಿಎನ್‌ಎಯಲ್ಲಿದ್ದರೆ ಸಾಕೇ, ವರ್ತನೆಯಲ್ಲೂ ಕಾಣಬೇಡವೇ?

---------------------
ರೋಗ ಬರುವ ಮೊದಲೇ ಎಚ್ಚೆತ್ತುಕೊಳ್ಳಿ - ಪ್ರಮೋದ್ ಮಧ್ವರಾಜ್, ಸಚಿವ

ಇರುವ ಸರಕಾರಿ ಆಸ್ಪತ್ರೆಗಳೆಲ್ಲ ಖಾಸಗಿಯವರ ತೆಕ್ಕೆಗೆ ಹಾಕಿದವರಿಂದ ಎಚ್ಚರಿಕೆಯ ಮಾತು.

---------------------

ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕನಸಿಲ್ಲ, ಬರೀ ನಿದ್ದೆ ಮಾತ್ರ - ಅನಂತಕುಮಾರ್, ಕೇಂದ್ರ ಸಚಿವ

ನರೇಂದ್ರ ಮೋದಿಯವರದ್ದು ಹಗಲುಗನಸು ಇರಬೇಕು.

---------------------
ನಾನೊಬ್ಬ ಆಶಾವಾದಿ ಮನುಷ್ಯ - ನರೇಂದ್ರ ಮೋದಿ, ಪ್ರಧಾನಿ

ಮನುಷ್ಯ ಎನಿಸಿಕೊಳ್ಳುವ ಕುರಿತಂತೆ ಇನ್ನೂ ಆಸೆ ಉಳಿಸಿಕೊಂಡಿದ್ದೀರಿ ಎಂದಾಯಿತು.

---------------------
ಕೊಟ್ಟ ಭರವಸೆ ಈಡೇರಿಸಿದವನೇ ನಿಜವಾದ ನಾಯಕ - ಎಚ್.ವಿಶ್ವನಾಥ, ಮಾಜಿ ಸಂಸದ

ಸಿದ್ದರಾಮಯ್ಯರನ್ನು ಮತ್ತೆ ನಾಯಕನೆಂದು ಕರೆಯುವ ಆಸೆಯೇ?

---------------------
ದೇಶದಲ್ಲಿ ಅಧಿಕಾರ ಅನುಭವಿಸುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ - ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆಯ ಅಧ್ಯಕ್ಷ

ಅವರಿಂದ ಕಲಿತ ಪಾಠದ ಫಲ ಇರಬೇಕು.

---------------------

ಸಾವಿರ ಹಸುಗಳನ್ನು ಸಾಕುತ್ತಿರುವ ನಾನೇ ನಿಜವಾದ ಮಣ್ಣಿನ ಮಗ - ವರ್ತೂರು ಪ್ರಕಾಶ್, ಶಾಸಕ

ದನ ಕಾಯೋನು ಸಿನೆಮಾ ನಿಮ್ಮದೇ ಆತ್ಮಕತೆಯಂತೆ ಹೌದೇ?

---------------------
ನನ್ನ ಕೊನೆಯ ಉಸಿರು ಇರುವ ತನಕ ತಾಯಿ (ಬಿಜೆಪಿ)ಯನ್ನು ತೊರೆಯುವ ಪ್ರಶ್ನೆಯೇ ಇಲ್ಲ - ಎಸ್.ಎ.ರಾಮದಾಸ್, ಮಾಜಿ ಸಚಿವ

ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಕೆಲಸ ಬಿರುಸಿನಲ್ಲಿ ನಡೆದಿದೆ.

---------------------
ವಾಟಾಳ್ ನಾಗರಾಜ್ ನಿವೃತ್ತಿ ಹೊಂದಿದರೆ ಕನ್ನಡ ಉದ್ಧಾರವಾಗುತ್ತದೆ - ಶ್ರೀವೀರಭದ್ರ ಚೆನ್ನಮಲ್ಲ ಸ್ವಾಮೀಜಿ,

ಕನ್ನಡ ನಿವೃತ್ತಿಯಾದ ಬಳಿಕವೇ ನನ್ನ ನಿವೃತ್ತಿ ಎಂದು ಅವರು ಘೋಷಿಸಿದ್ದಾರೆ.

--------------------- 
ಬಿಜೆಪಿ ಹಾಲಿದ್ದಂತೆ, ಯಡಿಯೂರಪ್ಪ ಜೇನು ಇದ್ದಂತೆ - ಬಸನಗೌಡ ಯತ್ನಾಳ್, ಕೇಂದ್ರದ ಮಾಜಿ ಸಚಿವ

ಅನಂತಕುಮಾರ್ ಕೈಯಲ್ಲಿ ಹುಳಿ ಹಿಡಿದುಕೊಂಡು ಕಾಯುತ್ತಿದ್ದಾರೆ ಹಿಂಡುವುದಕ್ಕೆ.

---------------------

ಕೆಲಸವಿಲ್ಲದೇ ಇರುವುದಕ್ಕಿಂತ ಪಕೋಡಾ ಮಾರಿ ಬದುಕುವುದು ಒಳ್ಳೆಯದು - ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಎಲ್ಲ ನಿರುದ್ಯೋಗಿಗಳು ಪಕೋಡಾ ಮಾರ ತೊಡಗಿದರೆ ಅದನ್ನು ಕೊಳ್ಳುವವರು ಯಾರು?

---------------------
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರಲ್ಲಿ ಇರುವ ದೂರದೃಷ್ಟಿ ಬೇರೆ ಯಾರಲ್ಲೂ ಇಲ್ಲ - ಪ್ರತಾಪ್ ಸಿಂಹ, ಸಂಸದ

ಅದಕ್ಕೇ ಇರಬೇಕು ಅವರು ಆಗಾಗ ತಮ್ಮ ಕನ್ನಡಕವನ್ನು ಬದಲಿಸುತ್ತಿರುವುದು.

---------------------

ಈ ದೇಶದ ಜನರಿಗೆ ಭಾರತೀಯ ಸೇನೆಯ ಸಾಮರ್ಥ್ಯದ ಮೇಲೆ ಸಂಪೂರ್ಣ ವಿಶ್ವಾಸವಿದೆ - ರಾಜನಾಥ್‌ಸಿಂಗ್, ಕೇಂದ್ರ ಸಚಿವ

ಆದರೆ ಸರಕಾರದ ಮೇಲೆ ವಿಶ್ವಾಸವಿಲ್ಲ.

---------------------

ಈಶ್ವರಪ್ಪರಿಗೆ ಮೆದುಳು ಮತ್ತು ನಾಲಗೆಯ ನಡುವೆ ಕನೆಕ್ಷನ್ ಇಲ್ಲ - ಸಿದ್ದರಾಮಯ್ಯ, ಮುಖ್ಯಮಂತ್ರಿ

ಬರೇ ನಾಲಗೆ ಮಾತ್ರ ಇದೆ, ಮೆದುಳಿಲ್ಲ ಎನ್ನುವುದು ಯಡಿಯೂರಪ್ಪರ ವಾದ.

---------------------

60 ವರ್ಷಗಳಲ್ಲಿ ಕಾಂಗ್ರೆಸ್ ಮಾಡದ್ದನ್ನು ಮೋದಿ ಮಾಡಿ ತೋರಿಸಿದರು - ರಾಕೇಶ್ ಸಿಂಗ್, ಬಿಜೆಪಿ ನಾಯಕ

ಹೌದು. ಆ ಮಟ್ಟಿಗೆ ದೇಶ ಎಕ್ಕುಟ್ಟಿ ಹೋಗಿದೆ.

---------------------

ಅತ್ಯಾಚಾರಿಗಳ ಪಾಲಿಗೆ ಕರ್ನಾಟಕ ಸ್ವರ್ಗದಂತಾಗಿದೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

ಗುಜರಾತ್ ಮಾದರಿ ಎಂದರಂತೆ ಅತ್ಯಾಚಾರಿಗಳು.

---------------------

ಸತ್ತರೂ, ಬದುಕಿದರೂ ನಾನು ಬಿಜೆಪಿಯಲ್ಲಿಯೇ ಇರುತ್ತೇನೆ - ಸುರೇಶ್‌ಬಾಬು,ಶಾಸಕ

ಬಿಜೆಪಿ ಸತ್ತ ಮೇಲೆ ನೀವು ಹೇಗೆ ಅದರೊಳಗೆ ಇರಲು ಸಾಧ್ಯ?

---------------------

ಕರ್ನಾಟಕದ ಅಭಿವೃದ್ಧಿಗೆ ಡಿಎಂಕೆ, ಆಪ್‌ನಂತಹ ಪ್ರಾದೇಶಿಕ ಪಕ್ಷಗಳು ಬೇಕು - ಚಂದ್ರಶೇಖರ ಪಾಟೀಲ, ಸಾಹಿತಿ

ಆದರೆ ಡಿಎಂಕೆ, ಆಪ್‌ನಲ್ಲಿರುವ ನಾಯಕರು ಕರ್ನಾಟಕದಲ್ಲಿ ಇನ್ನು ಹುಟ್ಟಿಲ್ಲವಲ್ಲ?

---------------------

ಪಕೋಡಾ ಮಾರುವವರನ್ನು ಕಾಂಗ್ರೆಸ್ ಅವಮಾನ ಮಾಡಿದೆ - ಪ್ರಹ್ಲಾದ್ ಜೋಷಿ, ಸಂಸದ

ನರೇಂದ್ರ ಮೋದಿಯವರು ಬಾಲ್ಯದಲ್ಲಿ ಪಕೋಡಾ ಮಾರುತ್ತಿದ್ದರು ಎಂದು ಹೇಳಿಕೆ ಕೊಡಿ.

---------------------
ಸರ್ವರಿಗೂ ಸಮಪಾಲು -ಸಮಬಾಳು ಎಂಬ ಸಿದ್ಧಾಂತದಲ್ಲಿ ನಮ್ಮ ಪಕ್ಷ ನಂಬಿಕೆ ಇಟ್ಟಿದೆ - ವೀರಪ್ಪಮೊಯ್ಲಿ, ಸಂಸದ

ಬಹುಶಃ ಭ್ರಷ್ಟಾಚಾರದಲ್ಲಿ ಇರಬೇಕು.

---------------------
ಕಾಂಗ್ರೆಸ್ ಬಿತ್ತಿದ ವಿಷಬೀಜದಿಂದಾಗಿ ಇಂದೂ 125 ಕೋಟಿ ಜನ ನರಳುವಂತಾಗಿದೆ - ನರೇಂದ್ರ ಮೋದಿ, ಪ್ರಧಾನಿ

ಅವರು ಬಿತ್ತಿದ ವಿಷ ಬೀಜ ಇಂದು ಆರೆಸ್ಸೆಸ್ ರೂಪದಲ್ಲಿ ಫಲಕೊಡುತ್ತಿದೆ.

---------------------

ಪ್ರಧಾನಿ ನರೇಂದ್ರ ಮೋದಿಯಂತೆ ಕೇವಲ ಭಾಷಣ ಮಾಡುವ ಜಾಯಾಮಾನ ನಮ್ಮದಲ್ಲ - ಕುಮಾರಸ್ವಾಮಿ,ಜೆಡಿಎಸ್ ರಾಜ್ಯಾಧ್ಯಕ್ಷ

ಅದರ ಜೊತೆಗೆ ಪದ್ಯವನ್ನೂ ಹಾಡುತ್ತೀರಾ?

---------------------
ಧರ್ಮಕ್ಕೆ ರಾಜಕೀಯ ಸೋಂಕು ಇರಬಾರದು - ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

ಸದ್ಯಕ್ಕೆ ರಾಜಕೀಯ ಧರ್ಮದ ಸೋಂಕಿನಿಂದ ನರಳುತ್ತಿದೆ.

---------------------

 ಪ್ರಧಾನಿ ಹೇಳುವುದೊಂದು-ಮಾಡುವುದೊಂದು - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ನೀವು ಹೇಳುವುದೂ ಇಲ್ಲ, ಮಾಡುವುದೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!