ನೇತಾಜಿಯ ಸೇನೆಗಾಗಿ ಸರ್ವ ಸಂಪತ್ತನ್ನೇ ದಾನ ಮಾಡಿದ ಮಹಾನ್ ದೇಶಪ್ರೇಮಿ ಅಬ್ದುಲ್ ಹಬೀಬ್

Update: 2018-03-05 18:58 GMT

ಮೂಲತಃ ಸೌರಾಷ್ಟ್ರದ ದೊರಾಜಿ ಪಟ್ಟಣದ ನಿವಾಸಿಯಾಗಿದ್ದ ಮೆಮನ್ ಅಬ್ದುಲ್ ಹಬೀಬ್ ಯೂಸುಫ್ ಮರ್ಫಾನಿ ಅವರು ಹೆಚ್ಚುಕಮ್ಮಿ 1 ಕೋಟಿ ರೂ. ವೌಲ್ಯದ ತನ್ನ ಇಡೀ ಆಸ್ತಿಯನ್ನು ಇಂಡಿಯನ್ ನ್ಯಾಶನಲ್ ಆರ್ಮಿಗೆ ದಾನ ಮಾಡಿದ್ದರು. ಆ ಕಾಲದಲ್ಲಿ ಅದೊಂದು ದೊಡ್ಡ ಮೊತ್ತವೇ ಆಗಿತ್ತು. ಆವಾಗ ಮೆಮನ್ ಕುಟುಂಬವು ರಂಗೂನ್‌ನಲ್ಲಿ ನೆಲೆಸಿತ್ತು. 1944ರ ಜುಲೈ 9ರಂದು ನೇತಾಜಿಯವರು ರಂಗೂನ್‌ನಲ್ಲಿ ಐಎನ್‌ಎ ಸ್ಥಾಪಿಸಿದಾಗ, ಅದರ ಆಝಾದ್ ಹಿಂದ್ ಬ್ಯಾಂಕ್‌ಗೆ ಆರ್ಥಿಕವಾಗಿ ನೆರವಾಗಲು ಮುಂದೆ ಬಂದವರಲ್ಲಿ ಮರ್ಫಾನಿ ಮೊದಲಿಗರಾಗಿದ್ದರು.

ಮಹಾತ್ಮಾ ಗಾಂಧೀಜಿಯವರ ಅಹಿಂಸಾತ್ಮಕ ಸ್ವಾತಂತ್ರ ಹೋರಾಟಕ್ಕೆ ಗುಜರಾತ್‌ನ ಉದ್ಯಮಿಗಳು ಉದಾರ ದೇಣಿಗೆಯನ್ನು ನೀಡಿದ್ದರೆ, ನೇತಾಜಿ ಸುಭಾಶ್ಚಂದ್ರ ಭೋಸ್ ಅವರ ಇಂಡಿಯನ್ ನ್ಯಾಶನಲ್ ಆರ್ಮಿ (ಐಎನ್‌ಎ)ಗೆ ಇನ್ನು ಕೆಲವರು ನೆರವಾಗಿದ್ದರು.

 ಮೂಲತಃ ಸೌರಾಷ್ಟ್ರದ ದೊರಾಜಿ ಪಟ್ಟಣದ ನಿವಾಸಿಯಾಗಿದ್ದ ಮೆಮನ್ ಅಬ್ದುಲ್ ಹಬೀಬ್ ಯೂಸುಫ್ ಮರ್ಫಾನಿ ಅವರು ಹೆಚ್ಚುಕಮ್ಮಿ 1 ಕೋಟಿ ರೂ. ವೌಲ್ಯದ ತನ್ನ ಇಡೀ ಆಸ್ತಿಯನ್ನು ಇಂಡಿಯನ್ ನ್ಯಾಶನಲ್ ಆರ್ಮಿಗೆ ದಾನ ಮಾಡಿದ್ದರು. ಆ ಕಾಲದಲ್ಲಿ ಅದೊಂದು ದೊಡ್ಡ ಮೊತ್ತವೇ ಆಗಿತ್ತು. ಆವಾಗ ಮೆಮನ್ ಕುಟುಂಬವು ರಂಗೂನ್‌ನಲ್ಲಿ ನೆಲೆಸಿತ್ತು. 1944ರ ಜುಲೈ 9ರಂದು ನೇತಾಜಿಯವರು ರಂಗೂನ್‌ನಲ್ಲಿ ಐಎನ್‌ಎ ಸ್ಥಾಪಿಸಿದಾಗ, ಅದರ ಆಝಾದ್ ಹಿಂದ್ ಬ್ಯಾಂಕ್‌ಗೆ ಆರ್ಥಿಕವಾಗಿ ನೆರವಾಗಲು ಮುಂದೆ ಬಂದವರಲ್ಲಿ ಮರ್ಫಾನಿ ಮೊದಲಿಗರಾಗಿದ್ದರು. ಆನಂತರ ಶೀಘ್ರವಾಗಿ ರಂಗೂನ್ ಹಾಗೂ ಸಿಂಗಾಪುರಗಳಲ್ಲಿನ ಅನಿವಾಸಿ ಭಾರತೀಯರಿಂದ ದೇಣಿಗೆಗಳ ಮಹಾಪೂರವೇ ಹರಿದುಬಂದು, ಆಝಾದ್ ಹಿಂದ್ ಬ್ಯಾಂಕ್‌ನ ಬೊಕ್ಕಸ ತುಂಬಿ ತುಳುಕಿತು.

    ಮರ್ಫಾನಿ ಅವರು ಐಎನ್‌ಎಗೆ ದೇಣಿಗೆ ನೀಡಿದ ಮೊದಲ ದಾನಿಗಳಲ್ಲೊಬ್ಬರಾಗಿದ್ದರು ಹಾಗೂ ಅವರಿಗೆ ನೇತಾಜಿಯವರು ‘ಸೇವಕೆ ಹಿಂದ್ ಪದಕ’ವನ್ನು ಪ್ರದಾನ ಮಾಡುವ ಮೂಲಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರು. ಮರ್ಫಾನಿ ‘ಸೇವಕೆ ಹಿಂದ್’ ಪ್ರಶಸ್ತಿಯ ಪ್ರಪ್ರಥಮ ಪುರಸ್ಕೃತರಾಗಿದ್ದರು. ಮರ್ಫಾನಿಯವರ ಔದಾರ್ಯವು, ಇತಿಹಾಸದ ವಿವಿಧ ಪುಸ್ತಕಗಳಲ್ಲಿ ದಾಖಲಾಗಿವೆೆ. ಇತಿಹಾಸಕಾರ ರಾಜ್ ಮಾಲ್ ಕಾಸ್ಲಿವಾಲ್ ತನ್ನ ಆಂಗ್ಲ ಕೃತಿ ‘ನೇತಾಜಿ, ಆಝಾದ್ ಹಿಂದ್ ಫೌಜ್ ಆ್ಯಂಡ್ ಆಫ್ಟರ್’ನಲ್ಲಿ ಹೀಗೆ ಹೇಳಿದ್ದಾರೆ: ‘‘ಬರ್ಮಾದ ರಂಗೂನ್‌ನಲ್ಲಿ ಓರ್ವ ಮುಸ್ಲಿಂ ಉದ್ಯಮಿ ಒಂದು ಕೋಟಿ ರೂ. ವೌಲ್ಯದ ನಗದು ಹಾಗೂ ಆಭರಣಗಳನ್ನು ದೇಣಿಗೆಯಾಗಿ ನೀಡಿದರು ಹಾಗೂ ಸ್ವಾತಂತ್ರ ಚಳವಳಿಗೆ ತನ್ನನ್ನು ಮುಡಿಪಾಗಿಡುವುದಾಗಿ ಘೋಷಿಸಿದರು. ಮರ್ಫಾನಿ ಅವರು ನೇತಾಜಿ ಅವರ ಮುಂದೆ ತಾನು ತಂದಿದ್ದ ತಟ್ಟೆಯಲ್ಲಿದ್ದ ಎಲ್ಲಾ ಚಿನ್ನಾಭರಣಗಳನ್ನು ಸುರಿದರು ಹಾಗೂ ತನ್ನ ಆಸ್ತಿಯ ಹಕ್ಕುಪತ್ರಗಳ ದೊಡ್ಡ ಕಂತೆಯನ್ನೇ ಇರಿಸಿದರು. ಮರ್ಫಾನಿ ಅವರ ಔದಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಬೋಸ್, ‘ಸಹೋದರರೇ, ಇಂದು ಜನರು ತಮ್ಮ ಕರ್ತವ್ಯಗಳನ್ನು ಅರಿತುಕೊಳ್ಳಲಾರಂಭಿಸಿರುವುದು ನನಗೆ ತುಂಬಾ ಸಂತಸ ತಂದಿದೆ. ಜನತೆ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಾಗಿದ್ದಾರೆ. ಹಬೀಬ್ ಸೇಠ್ ಅವರು ಶ್ಲಾಘನೀಯವಾದ ಕೆಲಸ ಮಾಡಿದ್ದಾರೆ ಹಾಗೂ ತಾಯ್ನಾಡಿನ ಸೇವೆಗಾಗಿ ಯಾರಾದರೂ ಅವರನ್ನು ಅನುಕರಿಸಿದಲ್ಲಿ ಅದು ನಿಜಕ್ಕೂ ಪ್ರಶಂಸನೀಯವಾಗಿದೆ’ ಎಂದರು.’’


ಮರ್ಫಾನಿ ಅವರು ಸುಭಾಶ್‌ಚಂದ್ರ ಭೋಸ್ ಅವರ ಐಎನ್‌ಎಗೆ ಕೊಡುಗೆೆ ನೀಡಿದ ಗುಜರಾತ್‌ನ ಏಕೈಕ ಮುಸ್ಲಿಮರೇನಲ್ಲ. ಸೂರತ್‌ನ ಗುಲಾಮ್ ಹುಸೈನ್ ಮುಷ್ತಾಕ್ ರಂಧೇರಿ, ಸೇನೆಯ ನೇಮಕಾತಿ ಅಧಿಕಾರಿಯಾಗಿದ್ದರು. ಭೋಸ್ ಅವರ ಜನ್ಮಶತಮಾನೋತ್ಸವ ಆಚರಿಸಿದ ಸಂದರ್ಭದಲ್ಲಿ ಮರ್ಫಾನಿಯವರ ಮೊಮ್ಮಗ ಯಾಕೂಬ್ ಹಬೀಬ್‌ರನ್ನು ಅವರ ಪೂರ್ವಜನ ಉದಾತ್ತ ಕಾರ್ಯದ ಸ್ಮರಣಾರ್ಥವಾಗಿ ಸನ್ಮಾನಿಸಲಾಯಿತು. ಆದಾಗ್ಯೂ, ಈ ಕಾರ್ಯಕ್ರಮದಲ್ಲಿ ಐಎನ್‌ಎ ಕ್ಯಾಪ್ ಧರಿಸಿ ಪಾಲ್ಗೊಂಡಿದ್ದ ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿ, ಭೋಸ್‌ರೊಂದಿಗೆ ಗುಜರಾತ್‌ಗಿದ್ದ ಸಂಬಂಧವನ್ನು ದೃಢಪಡಿಸಲು ಬಹಳಷ್ಟು ಶ್ರಮಿಸಿದ್ದರಾರೂ, ಅವರು ತನ್ನ ಭಾಷಣದಲ್ಲಿ ಮರ್ಫಾನಿ ಬಗ್ಗೆ ಪ್ರಸ್ತಾಪಿಸಿರಲೇ ಇಲ್ಲ.
 ನೇತಾಜಿ ಅವರ ಆಝಾದ್ ಹಿಂದ್ ಚಳವಳಿಗೆ 1.3 ಕೋಟಿ ರೂ. ಮೊತ್ತದ ತನ್ನ ಸಮಸ್ತ ಸಂಪತ್ತನ್ನು ದಾನವಾಗಿ ನೀಡಿದ ಬಳಿಕ ಕೋಟ್ಯಧಿಪತಿ ಅಬ್ದುಲ್ ಹಬೀಬ್, ಬರಿಗೈ ಫಕೀರನಾಗಿಬಿಟ್ಟರು. 1944ರಲ್ಲಿ ರಂಗೂನ್‌ನಲ್ಲಿ ನಡೆದ ಐಎನ್‌ಎನ ಸಾರ್ವಜನಿಕ ಸಭೆಯಲ್ಲಿ ವೇದಿಕೆಯೇರಿದ ಅಬ್ದುಲ್ ಹಬೀಬ್ ಸಾಹೇಬ್ ಬುಟ್ಟಿಯೊಂದರಲ್ಲಿ ತುಂಬಿತುಳುಕುತ್ತಿದ್ದ ವಜ್ರ ಹಾಗೂ ಚಿನ್ನಾಭರಣಗಳನ್ನು ಬೆಳ್ಳಿಯ ತಟ್ಟೆಗೆ ಸುರಿದರು ಹಾಗೂ ತಟ್ಟೆಯ ಮೂಲೆಯಲ್ಲಿ ತನ್ನ ಆಸ್ತಿಯ ಹಕ್ಕುಪತ್ರಗಳನ್ನು ಕೂಡಾ ಇರಿಸಿದರು.ಆನಂತರ ತಟ್ಟೆಯನ್ನು ಎತ್ತಿ ಹಿಡಿದು, ಅದನ್ನು ಮುಗುಳ್ನಗೆಯೊಂದಿಗೆ ನೇತಾಜಿಗೆ ಹಸ್ತಾಂತರಿಸಿದರು. ನೇತಾಜಿಯವರು ತನ್ನ ಎದೆಯ ಮೇಲೆ ಸೇವಕೆ ಹಿಂದ್ ಪದಕವನ್ನು ಅಂಟಿಸಿದಾಗ, ಅಬ್ದುಲ್ ಹಬೀಬ್ ‘‘ನನಗೆ ತುಂಬಾ ಹೆಮ್ಮೆ ಹಾಗೂ ಸಂತಸವಾಗುತ್ತಿದೆ’’ ಎಂದರು.

ನೇತಾಜಿ ಹೋರಾಟಕ್ಕೆ ಹೆಗಲುಕೊಟ್ಟ ಇನ್ನಿತರ ಮುಸ್ಲಿಂ ಮಹನೀಯರು

ಹಬೀಬ್ ಯೂಸುಫ್ ಮರ್ಫಾನಿಯವರನ್ನು ಆಝಾದ್ ಹಿಂದ್ ಫೌಜ್‌ನ ಪೂರೈಕೆ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅಲ್ಲದೆ ಎ. ಸತ್ತಾರ್ ಪಾಲ್‌ವಾಲಾ ಹಾಗೂ ಎ. ಲತೀಫ್ ಅದ್ಮಾನಿ ಅವರು ಕೂಡಾ ಈ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಮುಸ್ಲಿಮ್ ಸಮುದಾಯದ ಕೆಲವು ಪ್ರಮುಖರಾಗಿದ್ದಾರೆ. ಅದ್ಮಾನಿ ಅವರನ್ನು ಕೆಲಸಮಯದ ಬಳಿಕ ಬ್ರಿಟಿಷ್ ಸರಕಾರವು ಬಂಧಿಸಿ, ಜೈಲಿಗೆ ಕಳುಹಿಸಿತ್ತು.

Writer - ಆರ್.ಎನ್.

contributor

Editor - ಆರ್.ಎನ್.

contributor

Similar News

ಜಗದಗಲ
ಜಗ ದಗಲ