ಬೆಂಗಳೂರು: ನಗರದ ಎಲ್ಲ ಕ್ಷೇತ್ರಗಳಿಗೆ ನೋಡೆಲ್ ಅಧಿಕಾರಿಗಳ ನೇಮಕ

Update: 2018-03-30 13:08 GMT

ಬೆಂಗಳೂರು, ಮಾ.30: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 28 ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಆದೇಶಿಸಿದ್ದಾರೆ.

ಚುನಾವಣಾ ಆಯೋಗದ ನಿರ್ದೇಶನದಂತೆ ನೋಡೆಲ್ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಿದ್ದು, ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ನೋಡೆಲ್ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಕುರಿತು ಹಾಗೂ ದೈನಂದಿನ ವರದಿಯನ್ನು ಜಿಲ್ಲಾ ಚುನಾವಣಾಧಿಕಾರಿಗೆ ಹಾಗೂ ಜಿಲ್ಲಾ ಮಾದರಿ ನೀತಿ ಸಂಹಿತಿ ನೋಡಲ್ ಅಧಿಕಾರಿಗಳಿಗೆ ವರದಿ ನೀಡಬೇಕು. ವರದಿ ನೀಡಲು ವಿಫಲರಾದ ಅಧಿಕಾರಿಗಳ ವಿರುದ್ಧ ಚುನಾವಣಾ ಕಾಯ್ದೆ ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿವರ: ವಾಸು(ಯಲಹಂಕ), ಮೋಹನ್‌ದಾಸ್(ಬ್ಯಾಟರಾಯನಪುರ), ಗೋವಿಂದರಾಜು(ಮಲ್ಲೇಶ್ವರಂ), ಪಾಲಾಕ್ಷಯ್ಯ(ಗಾಂಧಿನಗರ), ನಾಗರಾಜ್(ಶಾಂತಿನಗರ), ಎಚ್.ಎನ್.ಜಯಸಿಂಹ(ಶಿವಾಜಿನಗರ), ರಾಜು(ಸಿ.ವಿ.ರಾಮನ್ ನಗರ), ಎಸ್.ಜಗದೀಶ್(ಸರ್ವಜ್ಞನಗರ), ಮಾಗಡಿ ರಂಗಪ್ಪ(ಪುಲಕೇಶಿ ನಗರ), ಮೋಹನ್ ಸಿ.ಹೊಂಡದಕೇರಿ(ಹೆಬ್ಬಾಳ), ಎಲ್.ತಿಮ್ಮರಸ್(ಮಹಾಲಕ್ಷ್ಮಿ ಲೇಔಟ್), ವೈ.ಎನ್.ಶೇಷಾದ್ರಿ(ದಾಸರಹಳ್ಳಿ), ಎಂ.ಶ್ರೀನಿವಾಸ್(ರಾಜರಾಜೇಶ್ವರಿನಗರ), ಜಯಪ್ರಕಾಶ್(ಯಶವಂತಪುರ) ಹಾಗೂ ಪರಮೇಶ್ವರಗೌಡ(ಕೆ.ಆರ್.ಪುರಂ) ನೇಮಕವಾಗಿದ್ದಾರೆ.

ಅಲ್ಲದೆ, ಲಕ್ಷ್ಮಿಸಾಗರ(ಆನೇಕಲ್), ಬಸವರಾಜು (ಬೆಂಗಳೂರು ದಕ್ಷಿಣ), ಎಚ್.ಕೆ.ವೆಂಕಟೇಶ್(ಬೊಮ್ಮನಹಳ್ಳಿ), ಪಾಪರೆಡ್ಡಿ(ಮಹದೇವಪುರ), ಎಸ್.ಬಿ.ರಾಹುಲ್(ಜಯನಗರ), ವೀರಸಿಂಗ್ನಾಯಕ್(ಬಿಟಿಎಂ ಲೇಔಟ್), ವಿಜಯಕುಮಾರ್ ಹರಿದಾಸ್(ಪದ್ಮನಾಭನಗರ), ಎಂ.ಮಹದೇವ್(ಬಸವನಗುಡಿ), ಮಂಜುನಾಥರೆಡ್ಡಿ(ಚಿಕ್ಕಪೇಟೆ), ತನ್ವೀರ್ ಅಹಮದ್(ಚಾಮರಾಜಪೇಟೆ), ಭೀಮೇಶ್(ವಿಜಯನಗರ), ಬಿ.ಎ.ಶಿವಾನಂದ(ಗೋವಿಂದರಾಜ ನಗರ) ಮತ್ತು ಶಶಿಕುಮಾರ್(ರಾಜಾಜಿನಗರ)ರನ್ನು ನೇಮಕ ಮಾಡಲಾಗಿದೆ ಎಂದು ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News