ಚೀನಾದಲ್ಲಿ ಬಲೆಗೆ ಬಿದ್ದ ಮೀನು-ಹಕ್ಕಿ!

Update: 2018-06-21 18:33 GMT

ದಕ್ಷಿಣ ಚೀನಾದ ಗುಯಿರೊ ಪ್ರಾಂತದ ನದಿಯಲ್ಲಿ ಇತ್ತೀಚೆಗೆ ಮೀನುಗಾರರ ಬಲೆಗೆ ವಿಶೇಷ ಜಲಚರವೊಂದು ಬಿದ್ದಿತ್ತು. ಇದನ್ನು ಮೀನು ಎಂದು ಹೇಳುವಂತಿಲ್ಲ. ಯಾಕೆಂದರೆ, ಈ ಮೀನಿನ ತಲೆ ಹಕ್ಕಿಯ ತಲೆಯಂತಿದೆ. ದೇಹ ಮಾತ್ರ ಮೀನಿನಂತಿದೆ. ಆದುದರಿಂದ ಇದನ್ನು ಮೀನು ಹಕ್ಕಿ ಎಂದು ಹೇಳಬಹುದು. ಈ ಅಸಾಮಾನ್ಯ ಜಲಚರದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಜನರು ಕನಿಷ್ಠ ಪಕ್ಷ ಅದರ ಬಗ್ಗೆ ವಿವರಣೆ ನೀಡಲು ಕೂಡ ಪ್ರಯಾಸ ಪಟ್ಟರು. ಈ ಬಗ್ಗೆ ವರದಿ ಪ್ರಕಟಿಸಿದ ಚೀನಾದ ಗುಯಿರೊ ಅರ್ಬನ್ ನ್ಯೂಸ್ ಪೇಪರ್ ಈ ಜಲಚರವನ್ನು ಸಿಹಿನೀರಿನ ಸಿಪ್ರಿನಸ್ ಕಾರ್ಪಿಯೊ ಎಂದಿತು. ಆದರೂ ಇದೊಂದು ಅರ್ಧ ಮೀನು, ಅರ್ಧ ಹಕ್ಕಿಯ ತಲೆ, ಕೊಕ್ಕಿನಂತೆ ಮೂತಿ, ರೆಕ್ಕೆಯಂತೆ ಕಿವಿರು ಇರುವ ವಿಶೇಷವಾದ ಜಲಚರ ಎಂಬ ವದಂತಿಯನ್ನು ಜನರು ಹಬ್ಬಿಸಿದರು. ಈ ಹಿನ್ನೆಲೆಯಲ್ಲಿ ತಜ್ಞರು ಇದರ ಬಗ್ಗೆ ವಿವರಣೆ ನೀಡಲು ಮುಂದಾದರು. ಬಹಳ ಹಿಂದೆ ಈ ಜಲಚರದ ಮೂತಿ ಡಾಲ್ಫಿನ್‌ನಂತೆ ಅಥವಾ ಹಕ್ಕಿಯಂತೆ ರೂಪಾಂತರ ಹೊಂದಿದೆ ಎಂದು ಅವರು ಹೇಳಿದರು. ಮೀನು ಹಕ್ಕಿಯ ಕುರಿತ ಯಾವುದೇ ಚರ್ಚೆ ಸರಿಯಲ್ಲ ಎಂದು ಇಂಗ್ಲೆಂಡ್‌ನ ಲಿವರ್‌ಪೂಲ್ ವಿಶ್ವವಿದ್ಯಾನಿಲಯದ ಪ್ರಾಣಿಗಳ ಶರೀರ ಶಾಸ್ತ್ರಜ್ಞ ಆ್ಯಂಡ್ರೂ ಕೋಸಿನ್ಸ್ ಹೇಳಿದ್ದಾರೆ. ದೋಷಪೂರ್ಣ ಅಂಗಾಂಶಗಳ ಬೆಳವಣಿಗೆಯಿಂದ ಈ ಜಲಚರಕ್ಕೆ ಹೊಳೆಯುವ ಗುಮ್ಮಟಾಕಾರದ ಹಾಗೂ ಪಾರಿವಾಳದ ಕೊಕ್ಕಿನಂತೆ ಕಾಣುವ ಮೂತಿ ರೂಪುಗೊಂಡಿರಬಹುದು ಎಂದು ಅವರು ತಿಳಿಸಿದ್ದಾರೆ. ತಲೆಯ ಪ್ರದೇಶದಲ್ಲಿ ಅಸ್ಥಿಪಂಜರ ವ್ಯವಸ್ಥೆ ವಿರೂಪತೆ ಊದಿಕೊಳ್ಳಲು ಕಾರಣಾಗಿರಬಹುದು. ಈ ಚಲಚರದ ತಲೆಯಲ್ಲಿ ಮುಂಚಾಚುವಿಕೆಯಂತಹ ನಿಖರ ಪ್ರಚೋದಕವನ್ನು ಗುರುತಿಸುವುದು ಕಷ್ಟ. ಈ ವಿರೂಪತೆಗೆ ಕಾರಣವನ್ನು ಫೋಟೊ ಅಥವಾ ದೇಹವನ್ನು ನೋಡಿ ಗುರುತಿಸಲು ಸಾಧ್ಯವಿಲ್ಲ. ಮೀನುಗಳ ಎಲುಬುಗಳ ಬೆಳವಣಿಗೆಗೆ ಅಡ್ಡಿ ಉಂಟು ಮಾಡುವ ನೀರಿನ ರಾಸಾಯನಿಕ ಕಲುಷಿತತೆ ಸರಣಿ ತಳಿ ರೂಪಾಂತರಕ್ಕೆ ಕಾರಣವಾಗಿರಬಹುದು ಎಂದು ಕೋಸಿನ್ಸ್ ತಿಳಿಸಿದ್ದಾರೆ. ಲಾರ್ವಾಗಳು ಮೀನುಗಳಾಗಿ ಬೆಳೆಯುವ ನಿರ್ಣಾಯಕ ಹಂತದಲ್ಲಿ ಅಪಾಯಕಾರಿ ರಾಸಾಯನಿಕಗಳ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇದೆ. ಈ ರಾಸಾಯನಿಕ ಮೀನುಗಳ ಸಾಮಾನ್ಯ ಬೆಳವಣಿಗೆಯ ಮೇಲೆ ಪರಿಣಾಮ ಉಂಟು ಮಾಡಿರಬಹುದು. ಅದು ಅಂಗಾಂಶ ಬೆಳವಣಿಗೆ ಮೇಲೆ ದುಷ್ಪರಿಣಾಮ ಉಂಟು ಮಾಡಿರಬಹುದು ಎಂದು ಕೋಸಿನ್ಸ್ ತಿಳಿಸಿದ್ದಾರೆ.

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News