ಓ ಮೆಣಸೇ...

Update: 2018-07-16 10:06 GMT

ಸಮ್ಮಿಶ್ರ ಸರಕಾರ ಯಾವಾಗ ಬೀಳುತ್ತದೆ ಎಂದು ಜನ ಕಾಯುತ್ತಿದ್ದಾರೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

ಸೂಟ್‌ಕೇಸ್ ಹಿಡಿದು ತಮ್ಮ ಜನ ಕಾಯುತ್ತಿದ್ದಾರೆ ಎಂದಾಯಿತು.

---------------------
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ - ಬಿ.ಎಸ್. ವಿಜಯೇಂದ್ರ, ಬಿಜೆಪಿ ನಾಯಕ
ಸಾಮಾಜಿಕ ವ್ಯವಸ್ಥೆಯಲ್ಲಿ ತಾಂಡವವಾಡಿದರೆ ಸರಿ ಅಂತಾಯಿತು.

---------------------
ನನ್ನದು ಸ್ವಾತಿ ನಕ್ಷತ್ರ, ಆದ್ದರಿಂದ ಯಾರು ಮಾಟ, ಮಂತ್ರ ಮಾಡಿದರೂ ಅದು ನನಗೆ ತಟ್ಟುವುದಿಲ್ಲ -ಎಚ್.ಡಿ. ರೇವಣ್ಣ, ಸಚಿವ
ಜನರ ದುರದೃಷ್ಟ.

---------------------
ಪ್ರಧಾನಿ ನರೇಂದ್ರ ಮೋದಿ ‘ಹಿಂಸೆಯ ಪೂಜಾರಿ’ - ಕಪಿಲ್ ಸಿಬಲ್, ಕಾಂಗ್ರೆಸ್ ನಾಯಕ
ಅವರ ರಾಜಕೀಯ ದೇವರಿಗೆ ನರಬಲಿ ಇಷ್ಟವಂತೆ.

---------------------

2019ರ ಲೋಕಸಭಾ ಚುನಾವಣೆಯಲ್ಲಿ ಶೇ.30-35ರಷ್ಟು ಅಲ್ಪಸಂಖ್ಯಾತರು ಬಿಜೆಪಿ ಬೆಂಬಲಿಸಲಿದ್ದಾರೆ -ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ದೇಶದಲ್ಲಿರುವ ಉಳಿದೆಲ್ಲ ಬಹುಸಂಖ್ಯಾತರು ಬಿಜೆಪಿಯನ್ನು ವಿರೋಧಿಸಲಿದ್ದಾರೆ ಎಂದಾಯಿತು.

---------------------

ಮರ್ಯಾದಾ ಪುರುಷ ಶ್ರೀರಾಮ ಬಂದರೂ ಭಾರತದಲ್ಲಿ ಅತ್ಯಾಚಾರ ತಡೆಯಲು ಸಾಧ್ಯವಿಲ್ಲ. -ಸುರೇಂದ್ರ ನಾರಾಯಣ್ ಸಿಂಗ್, ಉತ್ತರಪ್ರದೇಶದ ಬಿಜೆಪಿ ಶಾಸಕ

ದೇವಸ್ಥಾನದಲ್ಲೇ ಸಾಮೂಹಿಕ ಅತ್ಯಾಚಾರ ನಡೆಯುತ್ತಿರುವುದು ಅದೇ ಧೈರ್ಯದಲ್ಲಿ.

---------------------
ಬಿಜೆಪಿಗೆ ನಿಜವಾಗಿಯೂ ಹಿಂದುತ್ವದ ಬಗ್ಗೆ ಕಾಳಜಿ ಇದ್ದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿಯೇ ಚುನಾವಣೆಗೆ ಬರಲಿ -ಎಸ್.ಕೆ. ಬೆಳ್ಳುಬ್ಬಿ, ಮಾಜಿ ಸಚಿವ

ಅವರಿಗಿಲ್ಲದ ಆತುರ ನಿಮಗೇಕೆ?
---------------------

ರಾಜ್ಯದಲ್ಲಿ ವಿರೋಧಪಕ್ಷ ಮಲಗಿದೆ. -ಡಿ.ಕೆ. ಶಿವಕುಮಾರ್, ಸಚಿವ
ಕೇಂದ್ರದಲ್ಲಿ ಸತ್ತಿದೆ ಎಂಬ ವದಂತಿಯಿದೆ.

---------------------

ನಮ್ಮ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯನ್ನು ಆಹ್ವಾನಿಸಲು ನಮಗೆ ಯಾವುದೇ ಹಿಂಜರಿಕೆಯಿರಲಿಲ್ಲ -ಮೋಹನ್ ಭಾಗವತ್, ಆರೆಸ್ಸೆಸ್ ಸರ ಸಂಘಚಾಲಕ

ಭಾಗವಹಿಸಲು ಮುಖರ್ಜಿಗೂ ಹಿಂಜರಿಕೆಯಿದ್ದಂತೆ ಕಾಣುತ್ತಿರಲಿಲ್ಲ.

---------------------

ಗೋವು ಸುಖವಾಗಿದ್ದರೆ ಭೂಮಿ ಸ್ವರ್ಗ -ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ತಮ್ಮ ಹಟ್ಟಿಯಲ್ಲಿರುವ ಗೋವುಗಳು ಬೇರೇನೋ ಆರೋಪಿಸುತ್ತಿವೆ. .
---------------------
ಕೆಪಿಸಿಸಿ ಅಧ್ಯಕ್ಷ ಹುದ್ದೆ ನನ್ನ ಪಾಲಿಗೆ ಬರುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ -ದಿನೇಶ್ ಗುಂಡೂರಾವ್, ಕೆಪಿಸಿಸಿ ನೂತನ ಅಧ್ಯಕ್ಷ
ಕನಸಿನಲ್ಲಿ ಮುಖ್ಯಮಂತ್ರಿ ಹುದ್ದೆಯೇ ಕಾಣುತ್ತಿದ್ದಿರಬೇಕು.

---------------------

ನಮ್ಮ ಸೋಲಿಗೆ ಬಿಜೆಪಿ, ಆರೆಸ್ಸೆಸ್ ಅಪಪ್ರಚಾರ ಕಾರಣ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಜೊತೆಗೆ ಕಾಂಗ್ರೆಸ್ ನಾಯಕರೂ ಸೇರಿದ್ದು ನಿಮಗೆ ತಿಳಿದಿಲ್ಲವೇ?
---------------------
ಬಜೆಟ್ ಘೋಷಣೆ ಬೆಟ್ಟದಷ್ಟು, ಕೊಟ್ಟದ್ದು ಮುಷ್ಟಿಯಷ್ಟು -ಸಿ.ಟಿ. ರವಿ, ಶಾಸಕ
ಮುಖ್ಯಮಂತ್ರಿಯ ಬಳಿಯಿರುವುದು ಮುಷ್ಟಿಯಷ್ಟು ಶಾಸಕರಷ್ಟೇ ಅಲ್ಲವೇ?
---------------------
ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ -ಡಾ. ಜಿ. ಪರಮೇಶ್ವರ್, ಉಪಮುಖ್ಯಮಂತ್ರಿ 
ಆ ತಪ್ಪು ಕಲ್ಪನೆಯಿಂದಲೇ ಕಾಂಗ್ರೆಸ್ ಅಪ್ರಸ್ತುತವಾಗುತ್ತಿದೆ.

---------------------
ಕಾಂಗ್ರೆಸ್ 70 ವರ್ಷಗಳಿಂದ ಒಂದು ನಿರ್ದಿಷ್ಟ ಕುಟುಂಬದ ಏಳಿಗೆಗಾಗಿ ರೈತರನ್ನು ದುರ್ಬಳಕೆ ಮಾಡಿಕೊಂಡಿದೆ - ನರೇಂದ್ರ ಮೋದಿ, ಪ್ರಧಾನಿ
ಅದಕ್ಕಾಗಿ ನೀವು ಅಂಬಾನಿ ಕುಟುಂಬಕ್ಕಾಗಿ ದುರ್ಬಳಕೆ ಮಾಡಿಕೊಳ್ಳಬೇಕೇ?
---------------------
2019ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ‘ಹಿಂದೂ ಪಾಕಿಸ್ತಾನ’ ಆಗುತ್ತದೆ - ಶಶಿ ತರೂರ್, ಕಾಂಗ್ರೆಸ್ ನಾಯಕ
ಪಾಕಿಸ್ತಾನವೇ ಸಂಘಪರಿವಾರಕ್ಕೆ ಮಾದರಿಯಂತೆ.

---------------------
ನಾನಲ್ಲ, ನನ್ನ ಡೆಡ್‌ಬಾಡಿ ಕೂಡ ಬಿಜೆಪಿಗೆ ಹೋಗಲ್ಲ - ಡಾ. ಎಚ್.ಸಿ. ಮಹದೇವಪ್ಪ, ಮಾಜಿ ಸಚಿವ
ಬಿಜೆಪಿಯೇನು ಮೋರ್ಚರಿಯೇ?
---------------------

ಜಮ್ಮು ಕಾಶ್ಮೀರದ ಜನರಿಗೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆಯಿದೆ -ಮೆಹಬೂಬ ಮುಫ್ತಿ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ
ಅನುಮಾನವಿರುವುದು ತಮ್ಮ ಬಗ್ಗೆ ಮಾತ್ರ.

---------------------
ನಮ್ಮ ದೇಶದ ಇಂದಿನ ಪರಿಸ್ಥಿತಿಗೆ ಮಾಧ್ಯಮಗಳೇ ನೇರ ಕಾರಣ -ಶೋಭಾ ಕರಂದ್ಲಾಜೆ, ಸಂಸದೆ
ತಮ್ಮ ಪರಿಸ್ಥಿತಿಗೆ ಮಾಧ್ಯಮಗಳು ಬಿಜೆಪಿಯನ್ನು ಹೊಣೆ ಮಾಡುತ್ತಿವೆೆ.

---------------------

ನಾನು ಪ್ರಧಾನಿ ಹುದ್ದೆ ರೇಸ್‌ನಲ್ಲಿಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ರೇಸ್ ಗೆಲ್ಲುವ ಭರವಸೆಯಿಲ್ಲ ಎಂದು ಕಾಣುತ್ತದೆ.

---------------------

ದೇಶಕ್ಕೆ ಸಮವಸ್ತ್ರ ತೊಡಿಸಲು ಬಿಜೆಪಿ - ಆರೆಸ್ಸೆಸ್ ಸಂಚು ರೂಪಿಸುತ್ತಿದೆ -ಜೈರಾಮ್ ರಮೇಶ್, ಕಾಂಗ್ರೆಸ್ ಮುಖಂಡ
ಅರ್ಥವ್ಯವಸ್ಥೆಯ ಬಿಕ್ಕಟ್ಟು ಹೀಗೆ ಮುಂದುವರಿದರೆ, ದೇಶ ಲಂಗೋಟಿಯನ್ನೇ ಸಮವಸ್ತ್ರವಾಗಿ ಧರಿಸಬೇಕಾಗುತ್ತದೆ.

---------------------
ಸಚಿವನಾಗಿರಲಿ, ಶಾಸಕನಾಗಿರಲಿ ನಾನು ಯಾವಾಗಲೂ ಪವರ್‌ಫುಲ್ - ಎಂ.ಬಿ. ಪಾಟೀಲ್, ಮಾಜಿ ಸಚಿವ
ಶರಣನಾಗಿಯೂ ಪವರ್‌ಫುಲ್ ಆಗಿ ಉಳಿಯಿರಿ.

---------------------

ರಾಷ್ಟ್ರೀಯ ಪಕ್ಷ ಬಿಜೆಪಿ ಹುಲಿ ಇದ್ದಂತೆ -ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ
ಅದು ಗೋವಿನ ಮುಖವಾಡದಲ್ಲಿರುವ ನರಭಕ್ಷಕ ಹುಲಿ.
 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!