ಓ ಮೆಣಸೇ...

Update: 2018-07-23 08:20 GMT

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ನಮ್ಮಿಂದ ಯಾವುದೇ ಆಕ್ಷೇಪವಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ತಮ್ಮ ಕುಮಾರ ಮುಖ್ಯಮಂತ್ರಿಯಾಗಿರುವವರೆಗೆ.

---------------------

ಮೋದಿ ಸರಕಾರದ ಸಾಧನೆಗೆ ಜಾಗತಿಕ ಮನ್ನಣೆ - ಶೋಭಾ ಕರಂದ್ಲಾಜೆ , ಸಂಸದೆ
ದೇಶದ ಜನರ ಮನ್ನಣೆ ಸಿಗುವುದು ಯಾವಾಗ?

---------------------

ಬಿಜೆಪಿ ಅಪಪ್ರಚಾರಕ್ಕೆ ಹುಟ್ಟಿದ ಪಕ್ಷ- ಪ್ರಮೋದ್ ಮಧ್ವರಾಜ್, ಮಾಜಿ ಸಚಿವ

ಬಿಜೆಪಿ ಸೇರುವ ಕುರಿತ ಅಪಪ್ರಚಾರ ತಣಿದ ಬಳಿಕ ಹೊಳೆದದ್ದಿರಬೇಕು.

---------------------
ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಮೋಡಿ ನಡೆಯದು- ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಮುಂದಿನ ಲೋಕಸಭೆಯಲ್ಲಿ ಮೋಡಿ ನಡೆಯುವ ಬದಲು ಓಡುವ ಸಾಧ್ಯತೆ ಇದೆ.

---------------------
 
ಸಿದ್ದರಾಮಯ್ಯ ನವರೇ ನಮ್ಮ ನಾಯಕ - ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

ಅಧಿಕಾರವನ್ನು ಬಯಸದೇ ಇರುವವರೆಗೆ.

---------------------
ಸಮ್ಮಿಶ್ರ ಸರಕಾರ ನಿಭಾಯಿಸುವುದು ತುಂಬಾ ಕಷ್ಟದ ಕೆಲಸ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ -ನಾಯಕ

ನನಗೆ ಇಷ್ಟದ ಕೆಲಸ ಎಂದರಂತೆ ಕುಮಾರಸ್ವಾಮಿ ಅಳುತ್ತಾ.

---------------------
ಮುಖ್ಯಮಂತ್ರಿ ಕುಮಾರಸ್ವಾಮಿ ಎರಡೆರಡು ಕರ್ಚೀಪು ಒದ್ದೆಯಾಗುವ ರೀತಿ ಅಳುತ್ತಾರೆ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಲಂಗೋಟಿ ಒದ್ದೆಯಾದವರ ಹತಾಶೆಯ ಮಾತು.

---------------------
ಸಿಎಂ ಕಣ್ಣೀರಿಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ - ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಕಣ್ಣೀರಿಗೆ ಕಾರಣರಾದವರನ್ನು ಬಂಧಿಸಲು ಸಿಬಿಐನಿಂದ ತನಿಖೆ ನಡೆಯಲಿ.

---------------------

ಜೆಡಿಎಸ್‌ಗೆ ಕಾಂಗ್ರೆಸ್ -ಕಾಂಗ್ರೆಸ್‌ಗೆ ಜೆಡಿಎಸ್ ಪಕ್ಷ ಶರಣಾಗಿದೆ- ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ

ಬಿಜೆಪಿಗೆ ಶರಣಾಗುವುದಕ್ಕಿಂತ ವಾಸಿ.

---------------------

ಒಲ್ಲದ ಮನಸ್ಸಿನಿಂದ ನಾನು ಸಭಾಪತಿಯಾಗಿದ್ದೇನೆ - ಬಸವರಾಜ ಹೊರಟ್ಟಿ, ವಿ.ಪ.ಹಂಗಾಮಿ

ಸಭಾಪತಿ ಒಲ್ಲದ ಪತ್ನಿಗೊಬ್ಬ ಒಲ್ಲದ ಪತಿ.

---------------------
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ - ಎಂ.ಬಿ.ಪಾಟೀಲ್, ಶಾಸಕ

ಕಾಂಗ್ರೆಸ್‌ಗೆ ‘ಧರ್ಮ’ ಸಂಕಟ.

---------------------
ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರು ಹಾಕುವುದರಿಂದ ಕಾಂಗ್ರೆಸ್‌ನ ವರ್ಚಸ್ಸಿಗೆ ಧಕ್ಕೆಯಾಗಲಿದೆ- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಜನ ಸಾಮಾನ್ಯರ ಕಣ್ಣೀರಿನ ಬಗ್ಗೆ ಮಾತೇಕೆ ಇಲ್ಲ?
---------------------
 ದೇಶಕ್ಕೆ ಕಣ್ಣೀರಿಡುವ ಕುಮಾರ ಸ್ವಾಮಿಯಂತಹ ನಾಯಕರು ಬೇಕಿಲ್ಲ, ಮೋದಿಯಂತಹ ದೃಢ ನಾಯಕಬೇಕು -ಅರುಣ್ ಜೇಟ್ಲಿ, ಕೇಂದ್ರ ಸಚಿವ

ಮೋದಿಯವರು ಕಣ್ಣೀರಿಟ್ಟ್ಟಿದ್ದು ಮರೆತು ಹೋಯಿತೇ?
---------------------

ಪ್ರಧಾನಿ ನರೇಂದ್ರ ಮೋದಿ ದೇಶಕ್ಕೋಸ್ಕರ ಬದುಕಿದವರು - ಕೋಟ ಶ್ರೀನಿವಾಸ್ ಪೂಜಾರಿ, ವಿ.ಪ.ಪ್ರತಿಪಕ್ಷ ನಾಯಕ

ಸದ್ಯಕ್ಕೆ ವಿ-ದೇಶಕ್ಕೋಸ್ಕರ.

---------------------
ರಾಮಮಂದಿರ ನಿರ್ಮಾಣಕ್ಕೆ ಅನೇಕ ತೊಡಕುಗಳಿವೆ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ಒಂದು ತೊಡಕನ್ನು ನಿವಾರಣೆ ಮಾಡಿರುವುದು ಅದೇ ಕಾರಣಕ್ಕಿರಬಹುದೇ?

---------------------

ಅಮಿತ್ ಶಾ ‘ಹೂ’ ಅಂದ್ರೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ

ಬಹುಶಃ ಮತದಾರರ ಕಿವಿಗೆ ‘ಹೂ’ ಇರಬಹುದು.
---------------------

ಕಣ್ಣೀರಿಗೆ ಬಣ್ಣವಿಲ್ಲ - ಕುಮಾರಸ್ವಾಮಿ, ಮುಖ್ಯಮಂತ್ರಿ

ಮೊಸಳೆ ಕಣ್ಣೀರಿಗೆ ?
---------------------

ರೈತರ ಸಮಸ್ಯೆಗಳಿಗೆ ಸಾಲಮನ್ನಾ ಶಾಶ್ವತ ಪರಿಹಾರವಲ್ಲ - ವೆಂಕಟರಾವ್ ನಾಡಗೌಡ, ಸಚಿವ
 
ಆತ್ಮಹತ್ಯೆಯೇ ಪರಿಹಾರ ಎನ್ನುವುದು ನಿಮ್ಮ ತರ್ಕವಿರಬೇಕು.

---------------------
ಸಮ್ಮಿಶ್ರ ಸರಕಾರ ಸಾಲದ ಕೂಪದಲ್ಲಿ ಸಿಲುಕಿದೆ - ಶಿವಶಂಕರ ರೆಡ್ಡಿ, ಸಚಿವ

ಕಾಂಗ್ರೆಸ್‌ನಿಂದ ಪಡೆದ ಸಾಲವಿರಬೇಕು.

---------------------

ಮುಖ್ಯಮಂತ್ರಿ ಹುದ್ದೆ ಹೂವಿನ ಹಾಸಿಗೆಯಲ್ಲ, ಮುಳ್ಳಿನ ಹಾಸಿಗೆ ಇದ್ದಂತೆ - ಕೆ.ಜೆ.ಜಾರ್ಜ್, ಸಚಿವ

ಸಿಂಹಾಸನದ ಕೆಳಗೆ ತಾವು ಮುಳ್ಳು ಇಟ್ಟಿದ್ದು ಗೊತ್ತಿಲ್ಲದೇ ಕೂತು ಬಿಟ್ಟಿದ್ದಾರೆ ಕುಮಾರಸ್ವಾಮಿ.

---------------------

ಸಂಸತ್ತಿನಲ್ಲಿ ರಾಹುಲ್ ಆಲಿಂಗನಕ್ಕೆ ಮೋದಿ ಮುನಿಸು-ಸುದ್ದಿ


ಆಲಿಂಗನಕ್ಕೆ ಬೆದರಿ ಪತ್ನಿಯನ್ನೇ ತೊರೆದವರಲ್ಲವೇ?
 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!