ಓ ಮೆಣಸೇ....

Update: 2018-09-17 06:53 GMT

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡಲಾಗಿದೆ - ಶೋಭಾ ಕರಂದ್ಲಾಜೆ, ಸಂಸದೆ

► ಯಡಿಯೂರಪ್ಪರನ್ನು ಬಿಜೆಪಿ ಮೂಲೆಗುಂಪಾಗಿಸಿದ ಬಗ್ಗೆ ಯಾಕೆ ಖೇದವಿಲ್ಲ?
---------------------
ರಾಮಮಂದಿರ ವಿಷಯದಲ್ಲಿ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ - ಪ್ರವೀಣ್ ತೊಗಾಡಿಯಾ, ವಿಎಚ್‌ಪಿ ಅಧ್ಯಕ್ಷ

► ನಿಮ್ಮ ಈ ಮುಖ ಎಷ್ಟನೆಯದು?
---------------------
ಭಾರತದ ಪ್ರಧಾನಿ ಮೋದಿಯವರನ್ನು ನಾನು ಬಹಳ ಇಷ್ಟಪಡುತ್ತೇನೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

► ಸುಪ್ರೀಂಕೋರ್ಟ್ ಇತ್ತೀಚೆಗೆ ನಿಮಗಾಗಿಯೇ ಕಾನೂನನ್ನು ಸಡಿಲಿಸಿದೆ.

---------------------
ಸಮಿಶ್ರ ಸರಕಾರ ಬೀಳಲಿದೆ ಎನ್ನುವುದು ತೋಳಬಂತು ತೋಳ ಕಥೆ ಇದ್ದಂತೆ - ಕುಮಾರಸ್ವಾಮಿ, ಮುಖ್ಯಮಂತ್ರಿ

► ಹಾಗಾದರೆ ಈಗ ನಿಜಕ್ಕೂ ತೋಳ ಬಂದಿರಬೇಕು.

---------------------
ಭಾರತ-ಪಾಕಿಸ್ತಾನದ ಮಧ್ಯೆಯೂ ಮಾತುಕತೆ ನಡೆಯುತ್ತದೆ ಎಂದಾದರೆ ಬಿಜೆಪಿ-ಕಾಂಗ್ರೆಸ್ ನಾಯಕರು ಮಾತುಕತೆ ನಡೆಸುವುದರಲ್ಲೇನು ತಪ್ಪು -ಸಿ.ಟಿ.ರವಿ, ಶಾಸಕ

► ಬಿಜೆಪಿ ಪಾಕಿಸ್ತಾನವೆಂದು ಒಪ್ಪಿಕೊಂಡಂತಾಯಿತು.

---------------------
ಜೆಡಿಎಸ್ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಸೇರಿದಾಗ ಮಾತ್ರ ಸಮನ್ವಯ ಸಮಿತಿ ಪೂರ್ಣವಾಗಲಿದೆ - ಎಚ್.ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ

► ಅಂದರೆ ಸರಕಾರದೊಳಗೆ ಇನ್ನೂ ಸಮನ್ವಯವಿಲ್ಲ ಎಂದಾಯಿತು.

---------------------
ಮೇಲ್ವರ್ಗದ ಜನ ಬಿಜೆಪಿಯ ಬೆನ್ನೆಲುಬು ಅವರಿಗೆ ಶೇ.15ರಷ್ಟು ಮೀಸಲಾತಿ ಸಿಗಬೇಕು - ರಾಮ್‌ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ

► ದಲಿತರ ಬೆನ್ನೆಲುಬನ್ನು ಮುರಿದು ಮೇಲ್ವರ್ಗದವರಿಗೆ ಕೊಟ್ಟು ಬಿಡಿ.

---------------------
ತಮ್ಮದಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಬಿಲ್ಲವ ಯುವಕರು ಜೈಲು ಸೇರುತ್ತಿರುವುದು ಬೇಸರ ಉಂಟು ಮಾಡಿದೆ - ಕೋಟಾ ಶ್ರೀನಿವಾಸ ಪೂಜಾರಿ, ವಿ.ಪ.ವಿ.ಪ.ನಾಯಕ

► ಆರೆಸ್ಸೆಸ್‌ನ ಸಮಸ್ಯೆಗಳನ್ನು ಬಿಲ್ಲವರ ಸಮಸ್ಯೆ ಎಂದು ಅವರಿಗೆ ತಪ್ಪು ಮಾಹಿತಿ ನೀಡಲಾಗಿದೆ.

---------------------
ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾಗುತ್ತಿರುವ ಕೈದಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಉತ್ತಮ ವ್ಯಕ್ತಿಗಳಾಗಿ ಜೀವನ ನಡೆಸಬೇಕು - ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ.

► ಮೊದಲು ಅದಕ್ಕೆ ರಾಜಕಾರಣಿಗಳು ಅವಕಾಶ ನೀಡಬೇಕು.

---------------------
ಭಾಷಾ ಬೆಳವಣಿಗೆ ಹಿನ್ನೆಲೆಯಲ್ಲಿ ಕಸಾಪ ನೇಪಾಳದೊಂದಿಗೆ ನೆಂಟಸ್ತಿಕೆಗೆ ಮುಂದಾಗಿದೆ - ಡಾ.ಮನು ಬಳಿಗಾರ್, ಕಸಾಪ ಅಧ್ಯಕ್ಷ.
► ಮೊದಲು ಕನ್ನಡಿಗರ ಜೊತೆಗಿರುವ ನೆಂಟಸ್ತಿಕೆ ಗಟ್ಟಿಯಾಗಲಿ.

---------------------

ಥಳಿಸಿ ಹತ್ಯೆ ಮಾಡುವವರನ್ನು ರಾಷ್ಟ್ರವಾದಿಗಳೆಂದು ಕರೆಯಲಾಗದು - ವೆಂಕಯ್ಯನಾಯ್ಡು, ಉಪ ರಾಷ್ಟ್ರಪತಿ.

► ಮುಖ್ಯಮಂತ್ರಿ, ಪ್ರಧಾನಮಂತ್ರಿ ಅಭ್ಯರ್ಥಿಗಳೆಂದು ಕರೆದರಾದೀತೇ?
---------------------
ಬಣ್ಣದ ವೇಷ ಮುಗಿಯಿತು ಎಂಬ ಆತಂಕ ಅನಗತ್ಯ - ಕುಂಬಳೆ ಸುಂದರ ರಾವ್, ಮಾಜಿ ಶಾಸಕ.

► ಆತಂಕ ಆ ವೇಷಕ್ಕೆ ಬಲಿಯಾದ ಸುರತ್ಕಲ್‌ನ ಅಮಾಯಕ ಜನರದು.

---------------------

ಲೋಕಸಭೆಗೆ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ - ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ.

► ಆದಷ್ಟು ಬೇಗ ಟಿಕೆಟ್ ಸಿಗಲಿ ಎಂದು ಕಾಂಗ್ರೆಸ್‌ನೊಳಗೆ ಹಲವರು ಕಾಯುತ್ತಿದ್ದಾರೆ.

---------------------
ಕಬ್ಬಿನಿಂದ ಡಯಾಬಿಟಿಸ್ ಬರುತ್ತೆ - ಯೋಗಿ ಆದಿತ್ಯನಾಥ್, ಉ.ಪ. ಮುಖ್ಯಮಂತ್ರಿ.

► ಕಬ್ಬಿನಿಂದ ಕಬ್ಬಿಣ ತಯಾರಿಸಲಾಗುತ್ತದೆ ಎಂದು ಹೇಳಲಿಲ್ಲವಲ್ಲ, ಪುಣ್ಯ.

---------------------
ಬಿಜೆಪಿ ಎಣ್ಣೆ ಬಂದಾಗ ಕಣ್ಣುಮುಚ್ಚಿ ಕೂರುವುದಿಲ್ಲ - ಸಿ.ಟಿ.ರವಿ, ಶಾಸಕ

► ಅಂದರೆ ಕಣ್ಣು ತೆರೆದೇ ಎಣ್ಣೆ ಹಾಕುವವರು ಎಂದಾಯಿತು.

---------------------

ಬಿಜೆಪಿಯ ಶಾಸಕರು ಹುಲಿಗಳಿದ್ದಂತೆ - ಕೆ.ಎಸ್.ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ.

► ಮೃಗಾಲಯಕ್ಕೆ ಸೇರಿಸುವ ಅಗತ್ಯವಿದೆ.

---------------------

ನನ್ನ ಹಣೆಬರಹವನ್ನು ಯಾರೋ ಬರೆಯಲು ಸಾಧ್ಯವಿಲ್ಲ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ.

► ಅದು ಕಾಂಗ್ರೆಸ್‌ನ ಹಣೆಬರಹ.

---------------------
ಮೋದಿ ಸರಕಾರದ ಪ್ರತಿಯೊಂದು ಹೆಜ್ಜೆಯೂ ದೇಶವನ್ನು ಅಭಿವೃದ್ಧಿಯ ಕಡೆಗೆ ಸಾಗುವಂತೆ ಮಾಡುತ್ತಿದೆ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ.

► ಅದಕ್ಕೆ ಇತ್ತೀಚೆಗೆ ಹೆಜ್ಜೆಯನ್ನೇ ಇಡದೆ, ವಿಮಾನದಲ್ಲಿ ಓಡಾಡುವುದು.

---------------------

ರಾಜ್ಯ ರಾಜಕಾರಣದಲ್ಲಿ ಬೆಂಕಿಯಿಲ್ಲದೆಯೂ ಹೊಗೆಯಾಡುತ್ತದೆ - ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.

► ಬೆಂಕಿ ಮತ್ತು ಹೊಗೆಯಿಲ್ಲದೆ ರಾಜಕೀಯ ನಡೆಸುವುದಾದರೂ ಹೇಗೆ?

---------------------

ದೈವ ಬಲ ಇರುವವರೆಗೆ ರಾಜ್ಯದ ಸಮಿಶ್ರ ಸರಕಾರ ಬೀಳುವುದಿಲ್ಲ - ದೇವೇಗೌಡ, ಮಾಜಿ ಪ್ರಧಾನಿ.

► ದೈವ ಬಲಗಳಿಗಿಂತ ದೆವ್ವ ಬಲಗಳೇ ಹೆಚ್ಚು ಕೆಲಸ ಮಾಡುತ್ತಿವೆ.

---------------------
‘ವಿಶ್ವವೇ ಒಂದು ಕುಟುಂಬ’ ಭಾರತದ ವಿಶಿಷ್ಟ ಅಸ್ಮಿತೆ - ನರೇಂದ್ರ ಮೋದಿ, ಪ್ರಧಾನಿ

 ► ಆ ಕುಟುಂಬವನ್ನು ಒಡೆಯುವುದು ತಮ್ಮ ಅಸ್ಮಿತೆಯಿರಬಹುದೇ?
---------------------
 ಕೇಂದ್ರ ಸರಕಾರದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ -ವೀರಪ್ಪ ಮೊಯ್ಲಿ, ಸಂಸದ

 ► ದೇಶದೊಳಗೆ ಇದೆ ಅಂತೀರಾ?
 

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!