ಓ ಮೆನಸೇ…!

Update: 2018-10-14 18:55 GMT

ಸೋತರೂ ಮತ್ತೆ ಮುಖ್ಯಮಂತ್ರಿ ಆಗುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿರುವ ದ್ರೋಹ - ಕೆ.ಎಸ್.ಈಶ್ವರಪ್ಪ, ಶಾಸಕ

► ಯಡಿಯೂರಪ್ಪ ಪ್ರಮಾಣ ವಚನ ದಿನಾಂಕವನ್ನೇ ಘೋಷಿಸಿರಲಿಲ್ಲವೇ?

---------------------

ಎಚ್.ಡಿ.ಕುಮಾರಸ್ವಾಮಿ ಮತ್ತು ಕುಟುಂಬದವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡ್ತಾರೆ -ಶ್ರೀರಾಮುಲು, ಬಿಜೆಪಿ ರಾಜ್ಯ ಉಪಾಧ್ಯಕ್ಷ

► ಏನೂ ಮಾಡದೆಯೇ ಅಧಿಕಾರ ಅವರ ಪಾದ ಬುಡಕ್ಕೆ ಬಂದಿರುವ ಬಗ್ಗೆ ಏನು ಹೇಳುತ್ತೀರಿ?

---------------------

ರಾಜಕಾರಣ ನಿಂತ ನೀರಲ್ಲ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ  

► ಅದೀಗ ನಿಮ್ಮ ಪಾಲಿನ ನಿಲ್ಲದ ಕಣ್ಣೀರು.

---------------------

ರಾಜಕೀಯದಲ್ಲಿ ‘ದುರಹಂಕಾರ’ ಎಂಬುದು ಇರಬಾರದು -ಯಶವಂತ್ ಸಿನ್ಹಾ, ಹಿರಿಯ ರಾಜಕಾರಣಿ

► ಅದಕ್ಕೆ ತೆತ್ತ ಬೆಲೆಯನ್ನು ನೆನೆದು ಪಶ್ಚಾತ್ತಾಪವೇ?

---------------------

ಪೊಲೀಸ್ ಪಡೆಗಳು ಕ್ರೂರತ್ವದ ಹಣೆಪಟ್ಟಿ ಹೊತ್ತುಕೊಳ್ಳುವಂತಹ ಕೆಲಸಗಳನ್ನು ಮಾಡಬಾರದು - ರಾಜನಾಥ್‌ಸಿಂಗ್, ಕೇಂದ್ರ ಸಚಿವ

► ಅದೆಲ್ಲ ರಾಜಕಾರಣಿಗಷ್ಟೇ ಸೀಮಿತವಾದ ಪಟ್ಟಿಯೇ?

---------------------

ಲೈಂಗಿಕ ಕಿರುಕುಳದ ಬಗೆಗಿರುವ ವೌನದ ಗಾಜು ಒಡೆಯಲೇ ಬೇಕಿದೆ - ಮೇನಕಾಗಾಂಧಿ, ಕೇಂದ್ರ ಸಚಿವೆ  

► ಮೋದಿಯ ಕಡೆಗೆ ಮೊದಲ ಕಲ್ಲನ್ನು ನೀವೇ ಎಸೆಯಿರಿ.

---------------------

ಭಾರತವು ವಿಶ್ವದ ಆರ್ಥಿಕ ಪ್ರಗತಿಯ ಇಂಜಿನ್ - ನರೇಂದ್ರ ಮೋದಿ, ಪ್ರಧಾನಿ

►ಸದ್ಯಕ್ಕೆ ಆ ಇಂಜಿನ್ ಅಮೆರಿಕದ ಗುಜರಿ ಅಂಗಡಿಯ ತಕ್ಕಡಿಯಲ್ಲಿ ತೂಗುತ್ತಿದೆ.

---------------------

ಜಲ್ಲಿಕಟ್ಟು ಮಾದರಿಯಲ್ಲಿ ಕಂಬಳಕ್ಕೂ ಮಾನ್ಯತೆಗೆ ಪ್ರಯತ್ನಿಸುವೆ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

► ಕೋಳಿಕಟ್ಟಕ್ಕೆ ಮಾತ್ರ ಯಾಕೆ ಅನ್ಯಾಯ?

---------------------

ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿರುವ ನುಸುಳುಕೋರರು ನಮ್ಮ ಯುವಕರ ಉದ್ಯೋಗ ಕಸಿಯುತ್ತಿದ್ದಾರೆ -ಅಮಿತ್ ಶಾ, ಬಿಜೆಪಿ ಅಧ್ಯಕ್ಷ

► ಅಕ್ರಮವಾಗಿ ರಾಜಕೀಯಕ್ಕೆ ನುಸುಳಿರುವವರ ಕೊಡುಗೆಯ ಬಗ್ಗೆ ಹೇಳುತ್ತಿರಬೇಕು.

---------------------

ಆತ್ಮರಕ್ಷಣೆಗಾಗಿ ಕರಾಟೆ ಕಲಿಯಿರಿ - ನಳಿನ್‌ಕುಮಾರ್ ಕಟೀಲು, ಸಂಸದ

► ಅಂದರೆ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಬದುಕು ಇನ್ನಷ್ಟು ಅಪಾಯದಲ್ಲಿ ಬೀಳಲಿದೆ.

---------------------

ಕೇವಲ ಸೀಟಿಗಾಗಿ ಕಾಂಗ್ರೆಸ್ ಬಳಿ ಭಿಕ್ಷೆ ಬೇಡುವುದಿಲ್ಲ - ಮಾಯಾವತಿ, ಬಿಎಸ್ಪಿ ನಾಯಕಿ

► ನಿಮ್ಮ ಭಿಕ್ಷೆಯಲ್ಲಿ ಪ್ರಧಾನಿ ಹುದ್ದೆಯೂ ಇರಬೇಕೆಂದು ಕಾಣುತ್ತದೆ.

---------------------

ಪ್ರಧಾನಿ ಮೋದಿ ಕರ್ನಾಟಕದ ಯಾವ ಮೂಲೆಯಲ್ಲಿ ಸ್ಪರ್ಧಿಸಿದರೂ ಅವರನ್ನು ಸೋಲಿಸುತ್ತೇವೆ - ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

► ಸಿದ್ದರಾಮಯ್ಯರನ್ನು ಸೋಲಿಸಿದ ಹಿನ್ನೆಲೆಯಲ್ಲಿ ಬಂದ ಆತ್ಮವಿಶ್ವಾಸದ ಮಾತು.

---------------------

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುವುದು ಶೇ.100ರಷ್ಟು ಖಚಿತ - ಕೆ.ಎಸ್.ಈಶ್ವರಪ್ಪ, ಶಾಸಕ

► ನಿಮ್ಮ ಭರವಸೆ ನೋಡಿ, ಯಡಿಯೂರಪ್ಪ ಭರವಸೆ ಕಳೆದುಕೊಂಡರಂತೆ. 

---------------------

ನಾವು ಅಧಿಕಾರಕ್ಕೆ ಬಂದಿರುವುದು ರಾಜಕಾರಣ ಮಾಡುವುದಕ್ಕೆ ಹೊರತು ಸಮಾಜ ಸೇವೆಗಲ್ಲ - ಅನಂತಕುಮಾರ ಹೆಗಡೆ, ಕೇಂದ್ರ ಸಚಿವ

► ದರೋಡೆ ಮಾಡುವುದಕ್ಕೆ ಎಂದು ನೇರವಾಗಿ ಹೇಳಿ.

---------------------

ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ. ಆದರೂ ಸಂತೋಷದಿಂದಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

► ಅಂದರೆ ನಿಮ್ಮ ಸಂತೋಷಕ್ಕಾಗಿ ಮೂರನೆ ಬಾರಿ ಮುಖ್ಯಮಂತ್ರಿ ಮಾಡಬೇಕೇ?

---------------------

ಅರ್ಹತೆಯುಳ್ಳವರಿಗೆ ಸಚಿವ ಸ್ಥಾನ ಸಿಗಲೇಬೇಕು -ದೇಶಪಾಂಡೆ, ಸಚಿವ

► ಮತ್ತೆ ನಿಮಗೆ ಸಿಕ್ಕಿದ್ದೇಕೆ?

---------------------

ಕನಸು ಕಾಣುವವರು ಮಾತ್ರ ಗುರಿ ಮುಟ್ಟುತ್ತಾರೆ -ಆರ್.ಅಶೋಕ್, ಮಾಜಿ ಉಪ ಮುಖ್ಯಮಂತ್ರಿ

► ನೀವು ಕಾಣುತ್ತಿರುವುದು ದುಃಸ್ವಪ್ನ

---------------------

ಎಷ್ಟು ಬುದ್ಧಿ ಹೇಳಿದರೂ ಕೇಳದೆ ನನ್ನ ಮಗ ಚಂದ್ರಶೇಖರ ಬಿಜೆಪಿ ಸೇರಿದ್ದಾನೆ - ಸಿ.ಎಂ.ಲಿಂಗಪ್ಪ, ವಿ.ಪ.ಸದಸ್ಯ

► ಬುದ್ಧಿ ಇದ್ದವರು ಬಿಜೆಪಿ ಯಾಕೆ ಸೇರುತ್ತಾರೆ?

---------------------

ಬಳ್ಳಾರಿ ಲೋಕಸಭಾ ಉಪ ಚುನಾವಣೆ ಮಹಾಭಾರತ ಯುದ್ಧ, ಈ ಯುದ್ಧದಲ್ಲಿ ನಾವು ಪಾಂಡವರು -ಶ್ರೀರಾಮುಲು, ಶಾಸಕ

► ಸೀರೆ ಎಳೆಸಿಕೊಳ್ಳಲು ಸಿದ್ಧವಾಗಿರುವ ಆ ದ್ರೌಪದಿ ಯಾರು?

---------------------

ಜನರು ಆಧಾರರಹಿತ ಆರೋಪವನ್ನು ನಂಬುವುದಿಲ್ಲ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

► ಅಂದರೆ ಆರೋಪಕ್ಕೆ ಆಧಾರ್ ಲಿಂಕ್ ಮಾಡಬೇಕೆ?

---------------------

ಬಿಜೆಪಿಯೇತರ ಪಕ್ಷಗಳು ಒಟ್ಟಾಗುವುದು ಅನುಮಾನ - ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ

► ಬಹುಶಃ ಚುನಾವಣೆಯನಂತರ ಬಿಜೆಪಿಯೊಂದಿಗೆ ಒಟ್ಟಾಗುವ ಉದ್ದೇಶವಿರಬೇಕು.

---------------------

ನಮ್ಮ ದೇಶದಲ್ಲಿ ಗರಿಷ್ಠ ನಾಲ್ಕು ರಾಜಕೀಯ ಪಕ್ಷಗಳಿದ್ದರೆ ಒಳ್ಳೆಯದು -ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ

► ನೀವೀಗ ಎಷ್ಟು ಪಕ್ಷಗಳನ್ನೆಲ್ಲ ಪಕ್ಷಾಂತರ ಮಾಡಿ ಮುಗಿಸಿದಿರಿ?

---------------------

ನಾನು ಪಕ್ಷ ವಹಿಸಿದ ಜವಾಬ್ದಾರಿಯನ್ನಷ್ಟೇ ನಿಭಾಯಿಸುತ್ತಿದ್ದೇನೆ - ಡಿ.ಕೆ.ಶಿವಕುಮಾರ್, ಸಚಿವ

► ಅಂದರೆ ಸಿದ್ದರಾಮಯ್ಯರಿಗೆ ಮೂಗುದಾರ ತೊಡಿಸುವುದು ಪಕ್ಷ ವಹಿಸಿದ ಜವಾಬ್ದಾರಿಯೇ?

---------------------

ಪ್ರಧಾನಿ ನರೇಂದ್ರ ಮೋದಿ ವಿಷ್ಣುವಿನ 11ನೇ ಅವತಾರ -ಅವಧೂತ್ ವಾಘ್, ಮಹಾರಾಷ್ಟ್ರ ಬಿಜೆಪಿ ವಕ್ತಾರ

► ಕರಾವಳಿಯ ಯಕ್ಷಗಾನ ಮೇಳಗಳು 11ನೇ ಅವತಾರ ಬಯಲಾಟ ಆಡಿಸಲು ವೇಷತೊಡುತ್ತಿವೆಯಂತೆ.

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!