ಓ ಮೆಣಸೇ....
ಮುಖ್ಯಮಂತ್ರಿ ಕುಮಾರಸ್ವಾಮಿ ಪೇಪರ್ ಟೈಗರ್ - ಸಿ.ಟಿ.ರವಿ, ಶಾಸಕ
►ಟೈಗರ್ ಜಯಂತಿಗೆ ಹೆದರಿ ಮನೆಯಲ್ಲಿ ಕೂತದ್ದಕ್ಕೆ ಈ ಆರೋಪವೇ?
---------------------
ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನಾಗಲಿ, ನನ್ನ ಕುಟುಂಬದವರಾಗಲಿ ಸ್ಪರ್ಧಿಸುವುದಿಲ್ಲ - ವಿ.ಶ್ರೀನಿವಾಸ್ ಪ್ರಸಾದ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ
►ಸೋಲುವುದಕ್ಕಾಗಿ ಸ್ಪರ್ಧಿಸುವ ಅಗತ್ಯವೂ ಇಲ್ಲ.
---------------------
ಮೀಟೂ ವಿಚಾರದಲ್ಲಿ ಹೆಣ್ಣನ್ನು ಪದೇ ಪದೇ ಮುಜುಗರಕ್ಕೆ ಒಳಪಡಿಸುವ ಕೆಲಸ ನಡೆಯುತ್ತಿದೆ -ಜಯಮಾಲಾ, ಸಚಿವೆ
►ಹೆಣ್ಣು ಬೇಗ ಮುಜುಗರಕ್ಕೆ ಒಳಗಾಗುತ್ತಾಳೆ ಎಂಬ ಧೈರ್ಯದಿಂದ.
---------------------
ಕಾಂಗ್ರೆಸ್‌ನ ಪಾಪವೆಲ್ಲ ಕಳೆಯಬೇಕಾದರೆ ರಾಮಮಂದಿರ ಶಿಲಾನ್ಯಾಸಕ್ಕೆ ರಾಹುಲ್ ಗಾಂಧಿ ನನ್ನ ಜೊತೆ ಅಯೋಧ್ಯೆಗೆ ಬರಲಿ - ಉಮಾಭಾರತಿ, ಕೇಂದ್ರ ಸಚಿವೆ
►ಮೊದಲು ನಿಮ್ಮ ಕೈಗೆ ಅಂಟಿಕೊಂಡ ರಾಮನ ರಕ್ತವನ್ನು ಗಂಗೆಯಲ್ಲಿ ತೊಳೆದು ಬನ್ನಿ.
---------------------
ವನ್ಯ ಜೀವಿಗಳ ಮೇಲೆ ಸರಕಾರಕ್ಕೆ ದಯಾಪರತೆಯ ಕೊರತೆ ಇದೆ - ಮೇನಾಕಾ ಗಾಂಧಿ, ಕೇಂದ್ರ ಸಚಿವೆ
►ಮಾನವರೂ ನಿಮ್ಮ ಜೀವಿಗಳ ವ್ಯಾಪ್ತಿಯಲ್ಲಿ ಬರುತ್ತಾರೆಯೇ?
---------------------
ಪ್ರಧಾನಿ ಮೋದಿ ಆನಕೊಂಡ ಇದ್ದಂತೆ - ಯನಮಲ ರಾಮಕೃಷ್ಣಡು, ಆಂಧ್ರ ಸಚಿವ
►ಇಂತಹ ನೂರಾರು ಆನಕೊಂಡಗಳನ್ನು ಸಾಕಿ ಬೆಳೆಸಿದ ಹೆಮ್ಮೆ ನಮ್ಮದು ಎಂದಿತಂತೆ ಆರೆಸ್ಸೆಸ್.
---------------------
ಸಾಹಿತಿಗಳು ಯಾವುದೇ ಒಂದು ಪ್ರದೇಶಕ್ಕೆ ತೆರೆದುಕೊಳ್ಳದೆ ಸಮಗ್ರ ಭಾರತಕ್ಕೆ ತೆರೆದುಕೊಳ್ಳಬೇಕು -ಎಸ್.ಎಲ್.ಭೈರಪ್ಪ, ಹಿರಿಯ ಸಾಹಿತಿ
►ಯಾವ ಪಕ್ಷಕ್ಕೆ ತೆರೆದುಕೊಳ್ಳಬೇಕು ಎನ್ನುವುದನ್ನು ನೀವು ಹೇಳುವ ಅಗತ್ಯವೇ ಇಲ್ಲ ಬಿಡಿ.
---------------------
ಬ್ರಹ್ಮಚರ್ಯವೇ ನನ್ನ ಯಶಸ್ಸಿಗೆ ಕಾರಣ - ಬಾಬಾರಾಮ್‌ದೇವ್, ಯೋಗ ಗುರು
►ಪಕ್ಕದಲ್ಲೇ ಕುಳಿತ್ತಿದ್ದ ತಮ್ಮ ಮಿತ್ರ ಬಾಲಕೃಷ್ಣ ನಾಚಿಕೊಂಡರಂತೆ.
---------------------
ಕುಮಾರಸ್ವಾಮಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವ ಆಸೆ ಇದ್ದರೆ ಟಿಪ್ಪು ಜಯಂತಿ ಕೈಬಿಡಬೇಕು - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
►ಬಿಜೆಪಿ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಕೈ ಬಿಡುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ.
---------------------
ಬೆಂಗಳೂರಿನಲ್ಲೂ ರಾಮಮಂದಿರ ನಿರ್ಮಾಣ ಮಾಡುವ ಚಿಂತನೆ ಇದೆ - ಆರ್.ಅಶೋಕ್, ಮಾಜಿ ಡಿಸಿಎಂ
►ವಿಧಾನಸೌಧವನ್ನು ಕೆಡವಿಯೇ?
---------------------
ಖಾಲಿ ಡಬ್ಬಗಳ ಸದ್ದು ಯಾವಾಗಲೂ ಕರ್ಕಶವಾಗಿರುತ್ತದೆ - ಜಗ್ಗೇಶ್, ನಟ
►ನಿಮ್ಮ ಹೇಳಿಕೆ ತುಕ್ಕು ಹಿಡಿದ ಖಾಲಿ ಡಬ್ಬ ಹೊರಡಿಸಿದ ಕರ್ಕಶ ಶಬ್ದ.
---------------------
ಆಯುರ್ವೇದ ವೈದ್ಯಕೀಯ ಪದ್ಧತಿಯು ಯಾವುದೇ ಮತ ಧರ್ಮಕ್ಕೆ ಸೀಮಿತವಲ್ಲ - ನಳಿನ್‌ಕುಮಾರ್ ಕಟೀಲು, ಸಂಸದ
►ಅದು ಸದ್ಯಕ್ಕೆ ಅಲೋಪತಿಗೆ ಮೀಸಲಾದ ಹಣವನ್ನು ಕಬಳಿಸುವುದಕ್ಕಷ್ಟೇ ಸೀಮಿತ.
---------------------
ಬಿಜೆಪಿ ಸೋಲಿಸಲು ಯಾವುದೇ ತ್ಯಾಗಕ್ಕೂ ಸಿದ್ಧ - ಕುಮಾರಸ್ವಾಮಿ, ಮುಖ್ಯಮಂತ್ರಿ
►ಮುಖ್ಯಮಂತ್ರಿಯಾಗಿರುವುದು ತಮ್ಮ ತ್ಯಾಗಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆಯೇ?
---------------------
ಜನತೆಯ ಋಣ ತೀರಿಸುವ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ - ಅನಿತಾಕುಮಾರಸ್ವಾಮಿ, ಶಾಸಕಿ
►ಡಿಕೆಶಿ ಋಣವನ್ನು ತೀರಿಸುವ ಬಗೆಯ ಬಗ್ಗೆ ಚಿಂತಿಸಿ.
---------------------
ಶಿವಮೊಗ್ಗದಲ್ಲಿ ನಾವು ಸೋತು ಗೆದ್ದಿದ್ದೇವೆ - ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
►ಯಡಿಯೂರಪ್ಪ ಸೋತು, ಅವರ ಮಗ ಗೆದ್ದಿದ್ದಾರೆ.
---------------------
ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
►ಅವರ ಹಣದ ಜೊತೆಗೆ ಮಾತ್ರ ಸಂಬಂಧ ಇರಬೇಕು.
---------------------
ನೋಟು ರದ್ದತಿಯಿಂದಾಗಿ ದೇಶದ ಅರ್ಥ ವ್ಯವಸ್ಥೆ ಕ್ರಮಬದ್ಧಗೊಂಡಿದೆ - ಅರುಣ್‌ಜೇಟ್ಲಿ, ಕೇಂದ್ರ ಸಚಿವ
►ಬಹುಶಃ ಬಿಜೆಪಿ ಮತ್ತು ಆರೆಸ್ಸೆಸ್‌ನ ಅರ್ಥ ವ್ಯವಸ್ಥೆಯ ಬಗ್ಗೆ ಹೇಳಿರಬೇಕು.
---------------------
ಕಾನೂನಿಗಿಂತ ಧರ್ಮ ದೊಡ್ಡದು - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
►ಪಾಕಿಸ್ತಾನಕ್ಕೆ ಹೋಗಿ. ಅಲ್ಲಿ ನಿಮ್ಮಂತೆಯೇ ನಂಬಿದವರು ದೊಡ್ಡ ಸಂಖ್ಯೆಯಲ್ಲಿದ್ದಾರೆ.
---------------------
ಜಾತ್ಯತೀತ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸಮಯ ಬಂದಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
►ಚುನಾವಣೆ ಬಂದಾಗ ಮಾತ್ರ ಶಕ್ತಿ ಪ್ರದರ್ಶನಕ್ಕೆ ಸಮಯವೇ?
---------------------
ನೋಟು ರದ್ದತಿಯು ಭಾರತದ ಅರ್ಥ ವ್ಯವಸ್ಥೆಯ ಮೇಲೆ ಸ್ವಯಂ ಮಾಡಿಕೊಂಡ ಗಾಯವಾಗಿದೆ -ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
►ಕುತ್ತಿಗೆಯ ಮೇಲೆ ಕೂತ ಸೊಳ್ಳೆಯನ್ನು ಖಡ್ಗದಿಂದ ಓಡಿಸಿದಂತೆ.
---------------------
ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ ಅವರನ್ನು ಜೀವಂತ ಸುಡುವ ಕಾಲ ಬಂದಿದೆ - ಟಿ.ಬಿ.ಜಯಚಂದ್ರ, ಮಾಜಿ ಸಚಿವ ಹಳೆಯ ನೋಟುಗಳನ್ನು ►ಅದಕ್ಕಾಗಿ ಬಳಕೆ ಮಾಡಬಹುದು ಎಂದು ಆರ್‌ಬಿಐ ಹೇಳಿದೆಯಂತೆ.
---------------------
ಜೆಡಿಎಸ್ ಅಧಿಕಾರದಲ್ಲಿರಬೇಕು ಎಂಬುದಷ್ಟೇ ನನಗೆ ಮುಖ್ಯ - ಎಚ್.ಡಿ.ರೇವಣ್ಣ, ಸಚಿವ
►ಕರ್ನಾಟಕವನ್ನು ಬಲಿಕೊಟ್ಟಾದರೂ....ಎಂದು ಇನ್ನೂ ಹೇಳಿಲ್ಲ.
---------------------
ಮಾಜಿ ಸಿಎಂ ಸಿದ್ದರಾಮಯ್ಯ ಟಿಪ್ಪುಗಿಂತ ದೊಡ್ಡ ಮತಾಂಧ - ನಳಿನ್‌ಕುಮಾರ್ ಕಟೀಲು, ಸಂಸದ
►ಮೀರ್ ಸಾದಿಕ್‌ನ ವಂಶಸ್ಥರ ಮಾತು