ಓ ಮೆಣಸೇ....

Update: 2018-12-03 05:57 GMT

ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವುದು ಅತ್ಯಂತ ಕಷ್ಟದ ಕೆಲಸ - ಜಯಮಾಲಾ, ಸಚಿವೆ
ಸಮಯಸಾಧಕರ ಕಾಟ ಹೆಚ್ಚಿರಬೇಕು.

---------------------

ಕಪ್ಪು ಹಣದ ವಿರುದ್ಧ ಸಂಘಟಿತ ಹೋರಾಟ ಅಗತ್ಯ - ನರೇಂದ್ರ ಮೋದಿ, ಪ್ರಧಾನಿ
ನೋಟು ನಿಷೇಧದಿಂದ ಕಪ್ಪು ಹಣ ಇಲ್ಲವಾಗುತ್ತದೆ ಎಂದು ಹಿಂದೆ ಯಾರೋ ಹೇಳಿದ್ದರು.

---------------------

ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ನ್ಯಾಯಾಲಯಗಳ ಮಧ್ಯಪ್ರವೇಶ ಸಲ್ಲದು - ರಜನಿಕಾಂತ್, ನಟ
ನ್ಯಾಯಾಲಯಗಳ ವಿಚಾರದಲ್ಲಿ ನಟರು ಮಧ್ಯ ಪ್ರವೇಶಿಸುವುದು ಸರಿಯೇ?

---------------------

ಬಿಜೆಪಿಗರಿಗೆ ಸೆಗಣಿ ಬಾಚಿ ಅಭ್ಯಾಸವಿದೆಯೇ? - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಗಣಿಯ ಬಗ್ಗೆ ಕೇಳಿ, ಹೇಳುತ್ತಾರೆ.

---------------------

ಭಾರತದೊಂದಿಗೆ ಶಾಂತಿ ಮಾತುಕತೆಗೆ ಆಗ್ರಹಿಸುತ್ತಿರುವ ಪಾಕ್ ಮೊದಲು ಜಾತ್ಯತೀತವಾಗಬೇಕು - ಬಿಪಿನ್ ರಾವತ್, ಭಾರತೀಯ ಸೇನಾ ಮುಖ್ಯಸ್ಥ
ಜಾತ್ಯತೀತ ಭಾರತದ ಸದ್ಯದ ಸ್ಥಿತಿಯ ಬಗ್ಗೆಯೂ ಹೇಳಿ.

---------------------

ರಾಮ ಮಂದಿರ ನಿರ್ಮಾಣವನ್ನು ಬಿಜೆಪಿ ಗುತ್ತಿಗೆಗೆ ಪಡೆದಿಲ್ಲ - ಉಮಾಭಾರತಿ, ಕೇಂದ್ರ ಸಚಿವೆ
ಚುನಾವಣೆಗೆ ಮುನ್ನ ಹರಾಜಿನಲ್ಲಿ ಗುತ್ತಿಗೆಯನ್ನು ನೀಡಲಾಗುತ್ತದೆಯಂತೆ.

---------------------

ಕಾಂಗ್ರೆಸ್ - ಜೆಡಿಎಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಬಂದರೆ ಬೇಡ ಎನ್ನಲು ನಾವೇನು ಸನ್ಯಾಸಿಗಳಾ? - ಕೆ.ಎಸ್.ಈಶ್ವರಪ್ಪ, ಶಾಸಕ

ಬಿಜೆಪಿ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಹೋದರೆ?

---------------------

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಯಕೆ ನಮಗೂ ಇದೆ ಆದರೆ, ಕಾಂಗ್ರೆಸ್ ಅಡ್ಡಿ ಪಡಿಸುತ್ತಿದೆ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಅಧಿಕಾರದಲ್ಲಿರುವುದು ಕಾಂಗ್ರೆಸ್ ಪಕ್ಷವೋ, ಬಿಜೆಪಿಯೋ?

---------------------

ಉಗ್ರರು ಭಾರತ ಪ್ರವೇಶಿಸಲು ಹಾಗೂ ಸೈನಿಕರ ಹತ್ಯೆ ಮಾಡಲು ನಾವು ಬಿಡುವುದಿಲ್ಲ - ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ
ಸರ್ಜಿಕಲ್ ಸ್ಟ್ರೈಕ್ ಬಳಿಕ ಇವೆಲ್ಲ ನಿಂತಿರಬೇಕಲ್ಲ?

---------------------

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಮುಸಲ್ಮಾನರು ಹೇಳುತ್ತಿದ್ದಾರೆ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಹಿಂದೂಗಳಿಗೆ ಬೇಡವಾಗಿದೆ ಎಂದಾಯಿತು.

---------------------

ರಾಜಕಾರಣಿಗಳಿಗೆ ಜಾತಿ ಇರಬಾರದು - ರಘುಪತಿ ಭಟ್, ಶಾಸಕ

ಹಾಗಾದರೆ ಹೆಸರಿನ ಮುಂದೆ ಭಟ್ ಯಾಕಿದೆ?

---------------------

ಮೋದಿ ಬರಬಹುದು, ಹೋಗಬಹುದು ಆದರೆ ಈ ದೇಶ ಚಿರಸ್ಥಾಯಿ - ನರೇಂದ್ರ ಮೋದಿ, ಪ್ರಧಾನಿ
ಆದರೆ ಇನ್ನೊಮ್ಮೆ ಮೋದಿ ಬಂದರೆ ಆ ಕುರಿತಂತೆ ಜನರಿಗೆ ಅನುಮಾನವಿದೆ.

---------------------

ಸಂಶೋಧಕ ಎಂ.ಎಂ.ಕಲಬುರ್ಗಿ ಹಂತಕರ ಪತ್ತೆಗೆ ಸರಕಾರ ಸಂಪೂರ್ಣ ವಿಫಲವಾಗಿದೆ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಬಹುಶಃ ಅದು ನಿಮ್ಮ ಯಶಸ್ಸು ಕೂಡ.

---------------------

ಚಹಾ ಮಾರಿದ್ದ ವ್ಯಕ್ತಿ ಪ್ರಧಾನಿಯಾಗಿರುವುದನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗುತ್ತಿಲ್ಲ -ಅರುಣ್ ಜೇಟ್ಲಿ, ಕೇಂದ್ರ ಸಚಿವ
ಅದಕ್ಕಾಗಿ ದೇಶವನ್ನು ಮಾರಲು ಅವರಿಗೆ ಅವಕಾಶ ನೀಡಬೇಕೇ?

---------------------

ಪ್ರಧಾನಿ ಮೋದಿ ತಮ್ಮ ಸ್ಥಾನಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ - ಫಾರೂಕ್ ಅಬ್ದುಲ್ಲಾ, ನ್ಯಾಶನಲ್ ಕಾನ್ಫೆರೆನ್ಸ್ ಮುಖ್ಯಸ್ಥ
ಮೋದಿ ತಮ್ಮ ಯೋಗ್ಯತೆಗೆ ತಕ್ಕಂತೆ ವರ್ತಿಸುತ್ತಿದ್ದಾರೆ.

---------------------

ಜೆಎನ್‌ಯು ದೇಶದ್ರೋಹಿಗಳನ್ನು ನಿರ್ಮಿಸುವ ಕಾರ್ಖಾನೆಯಂತಾಗಿದೆ - ಬಸವನಗೌಡ ಪಾಟೀಲ ಯತ್ನಾಳ, ಶಾಸಕ
ಸ್ವಾತಂತ್ರ ಹೋರಾಟದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದವರು ಜೆಎನ್‌ಯುನಿಂದ ಹೊರಬಂದವರು ಎಂದು ಹೇಳುವುದಕ್ಕಷ್ಟೇ ಬಾಕಿ.

---------------------

ವೃತ್ತಿಯೇ ಬೇರೆ ರಾಜಕಾರಣವೇ ಬೇರೆ - ಬಿ.ಎಲ್.ಶಂಕರ್, ಕೆಪಿಸಿಸಿ ಉಪಾಧ್ಯಕ್ಷ
ಎರಡೆರಡು ಹುದ್ದೆಗಳನ್ನು ಹೊಂದುವುದು ಸಂವಿಧಾನ ಬಾಹಿರವಲ್ಲವೇ?

---------------------

ಬಿಜೆಪಿಯನ್ನು ಆರೆಸ್ಸೆಸ್ ನಿಯಂತ್ರಿಸುತ್ತಿದೆ ಎಂಬುದು ಸುಳ್ಳು - ರಘನಂದನ್‌ಜಿ, ಆರೆಸ್ಸೆಸ್ ನಾಯಕ
ಆರೆಸ್ಸೆಸ್ ಕೇಂದ್ರ ಸರಕಾರವನ್ನು ನಿಯಂತ್ರಿಸುತ್ತಿದೆ ಎಂದರೆ ಸರಿಯಾಗುತ್ತದೆಯೇ?

---------------------

ಜಾತಿ ಪ್ರಮಾಣ ಪತ್ರ ಸಿಗಬೇಕಾದರೆ ಅಪ್ಪ ಯಾವ ಜಾತಿಯವನು ಎನ್ನುವುದು ಅಗತ್ಯ - ಶೋಭಾ ಕರಂದ್ಲಾಜೆ, ಸಂಸದೆ
ತಮ್ಮ ಮಕ್ಕಳಿಗೆ ಜಾತಿ ಪ್ರಮಾಣ ಪತ್ರಕ್ಕೆ ಯಾವ ಜಾತಿಯವನು ಎಂದು ಹೇಳಿದಿರಿ?

---------------------

ಕಾಂಗ್ರೆಸ್ ಜೊತೆ ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇಲ್ಲ - ಚಂದ್ರಬಾಬು ನಾಯ್ಡು, ಆಂಧ್ರ ಮುಖ್ಯಮಂತ್ರಿ
ಕೆಲವೊಮ್ಮೆ ಇಲ್ಲ ಎನ್ನುವುದು ಇದೆ ಎನ್ನುವುದನ್ನು ಧ್ವನಿಸುತ್ತದೆ.

---------------------

ಸಚಿವ ಡಿ.ಕೆ.ಶಿವಕುಮಾರ್ ಶ್ರೀ ಕೃಷ್ಣ ಪರಮಾತ್ಮ ಇದ್ದಂತೆ - ಜಯಮಾಲಾ, ಸಚಿವೆ
ಮೀಟೂ ಚಳವಳಿಯಲ್ಲಿ ತಾವೂ ಭಾಗವಹಿಸುತ್ತಿರುವಂತಿದೆ.

---------------------

ಮುಂದಿನ ತಿಂಗಳು ಸರಕಾರ ರೈತನ ಮನೆ ಬಾಗಿಲಿಗೆ ಹೋಗಲಿದೆ - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಮನೆ ಜಪ್ತಿ ಮಾಡುವುದಕ್ಕಿರಬಹುದೇ?
 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!