ಓ ಮೆಣಸೇ....

Update: 2018-12-09 18:50 GMT

ಕಂಬಳದ ಕೋಣಗಳಿಗೆ ಬೆತ್ತ ತೋರಿಸುವುದು ತಪ್ಪಲ್ಲ
- ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಅದೇ ಬೆತ್ತವನ್ನು ರಾಜಕಾರಣಿಗಳಿಗೆ ತೋರಿಸುವ ದಿನ ದೂರವಿಲ್ಲ.

---------------------
  ನಾವು ಕೋಮುವಾದಿಗಳಲ್ಲ, ಪ್ರೇಮವಾದಿಗಳು, ರಾಮವಾದಿಗಳು- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ಯಾವ ರಾಮವಾದಿಗಳು? ಗೋಡ್ಸೆಯ ರಾಮನೋ, ಗಾಂಧಿಯ ರಾಮನೋ? ಎನ್ನುವುದನ್ನು ತಾವು ಸ್ಪಷ್ಟಪಡಿಸಬೇಕಾಗಿದೆ.

---------------------
ಭಯೋತ್ಪಾದನೆ ನಿಗ್ರಹಕ್ಕೆ ಪಾಕ್‌ಗೆ ನೆರವು ನೀಡಲು ಸಿದ್ಧ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಭಾರತದೊಳಗಿನ ಭಯೋತ್ಪಾದನೆ ನಿಗ್ರಹಕ್ಕೆ ಪಾಕ್ ಸಹಕರಿಸಲು ಸಿದ್ಧವಿದೆಯಂತೆ.

---------------------
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲಿ ಎಂದು ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಬಯಸುತ್ತಿದ್ದಾರೆ - ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
ತಮ್ಮನ್ನೇ ಅದರ ಪೂಜಾರಿಯಾಗಿಸಬೇಕು ಎಂದೂ ಅವರು ಬಯಸುತ್ತಿದ್ದಾರೆ. ಸಿದ್ಧರಿದ್ದೀರಾ?

---------------------
ಆರೆಸ್ಸೆಸ್ ಸಾಂಸ್ಕೃತಿಕ ಸಂಘಟನೆ ಅಲ್ಲ - ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಪ್ರತಿಪಕ್ಷ ನಾಯಕ
ಸಾಂಸ್ಕೃತಿಕ ಸಂಘಟನೆ ಎನ್ನುವ ಕಾರಣಕ್ಕೆ ತಾನೆ ಕಾಂಗ್ರೆಸ್ ಅದರ ಮೇಲಿನ ನಿಷೇಧವನ್ನು ಹಿಂದೆಗೆದದ್ದು?

---------------------
ಭಾರತದ ರೈತರು ತಂತ್ರಜ್ಞಾನಗಳ ಲಾಭವನ್ನು ಪಡೆಯುವುದರಲ್ಲಿ, ಅಪಾಯಗಳನ್ನು ನಿರ್ವಹಿಸುವಲ್ಲಿ ನಿಪುಣರು - ರಾಮನಾಥ ಕೋವಿಂದ್, ರಾಷ್ಟ್ರಪತಿ
ತಾವು ಅಂಬಾನಿ, ಮಲ್ಯರನ್ನೇ ಭಾರತದ ರೈತರು ಎಂದು ತಪ್ಪು ತಿಳಿದಂತಿದೆ.

---------------------
ಹಿಂದೂ ರಾಷ್ಟ್ರ ಎನ್ನುವಾಗ ದಲಿತರಲ್ಲಿ ಕಳವಳ ಉಂಟಾಗುತ್ತದೆ - ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ
ಇತ್ತೀಚೆಗೆ ಪಾಸ್ವಾನ್ ಹೆಸರು ಕೇಳುವಾಗಲೂ ಅವರಲ್ಲಿ ಕಳವಳ ಉಂಟಾಗುತ್ತಿದೆ.

---------------------
ಬಿಜೆಪಿ ಗಂಗಾನದಿ ಇದ್ದ ಹಾಗೆ, ಈ ಪಕ್ಷಕ್ಕೆ ಯಾರೇ ಬಂದರೂ ಪವಿತ್ರರಾಗುತ್ತಾರೆ - ಕೆ.ಎಸ್.ಈಶ್ವರಪ್ಪ, ಶಾಸಕ
ಅದಕ್ಕೇ ತಾನೇ ಗಂಗೆಗೆ ಹೆಣಗಳನ್ನು ಎಸೆಯುವುದು.

---------------------
ರಾಹುಲ್ ಗಾಂಧಿ ನಿಜವಾಗಿಯೂ ಹಿಂದೂ ಆಗಿದ್ದರೆ ರಾಮಮಂದಿರ ನಿರ್ಮಾಣವನ್ನು ಬೆಂಬಲಿಸಲಿ - ಜಗದೀಶ್‌ಶೆಟ್ಟರ್, ಶಾಸಕ
ಅವರು ನಿಜವಾದ ಹಿಂದೂ ಆಗಿರುವುದರಿಂದ ರಾಮಮಂದಿರ ನಿರ್ಮಾಣವನ್ನು ಬೆಂಬಲಿಸುತ್ತಿಲ್ಲ.

---------------------
ಬಿಜೆಪಿ ದೇಶ ಭಕ್ತರ ಗುಂಪು - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಯಾವ ದೇಶ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

---------------------
ಮುಖ್ಯಮಂತ್ರಿ ಮಾಡುತ್ತೇನೆ ಎಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೂ ಬರಬಹುದು - ಕೆ.ಎಸ್.ಈಶ್ವರಪ್ಪ, ಶಾಸಕ
ಯಡಿಯೂರಪ್ಪರಿಗೆ ಬೆದರಿಕೆಯೇ?

---------------------
ಹಿಂದೂ ಧರ್ಮದ ಪೂರ್ಣಜ್ಞಾನ ನನಗಿಲ್ಲ - ನರೇಂದ್ರ ಮೋದಿ, ಪ್ರಧಾನಿ
ಬಿಜೆಪಿ, ಆರೆಸ್ಸೆಸ್‌ನಲ್ಲಿರುವವರ ದೊಡ್ಡ ಸಮಸ್ಯೆಯೇ ಅದು.

---------------------

ನನ್ನನ್ನ್ನು ಭಾರತದಿಂದ ಓಡಿಸಲು ಸಾಧ್ಯವಿಲ್ಲ - ಅಸದುದ್ದೀನ್ ಉವೈಸಿ, ಎಐಎಂಐಎಂ ಅಧ್ಯಕ್ಷ
ಇದು ಓಡುವ ವಯಸ್ಸೂ ಅಲ್ಲ.

---------------------
 
ಆಪರೇಶನ್ ಕಮಲಕ್ಕೆ ಒಳಗಾಗುವ ಶಾಸಕರು ಹಗಲು ಕಂಡ ಬಾವಿಗೆ ರಾತ್ರಿ ಬಿದ್ದಂತೆ - ಎಂ.ಸಿ.ಮನಗೊಳಿ, ಸಚಿವ
ರಾತ್ರಿ ಬಿದ್ದರೇನಾಯಿತು? ಬಾವಿಯೊಳಗೆ ಹಣದ ಕಂತೆಯಿದ್ದರೆ ಸಾಕು.

---------------------
 
ನನ್ನ ಉಸಿರು ಇರುವ ವರೆಗೂ ರಾಜಕೀಯದಲ್ಲಿರುತ್ತೇನೆ - ಉಮಾಭಾರತಿ, ಕೇಂದ್ರ ಸಚಿವೆ
ಗಂಗೆ ಶುದ್ಧಿಯಾಗುವವರೆಗೆ ಎಂದರೆ ಚೆನ್ನಾಗಿತ್ತು.

---------------------
ಕಳೆದ ಚುನಾವಣೆಯಲ್ಲಿ ಸೋಲುತ್ತೇನೆಂದು ನಾನು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಆದರೆ ಕಾಂಗ್ರೆಸ್‌ನೊಳಗಿರುವ ಕೆಲವರ ಕನಸಾಗಿತ್ತು ಅದು.

---------------------
 
ನನ್ನ ಹವಾಮಾನ ಕಾರ್ಯನಿಷ್ಠೆಗೆ ವೇದಗಳೇ ಸ್ಫೂರ್ತಿ - ನರೇಂದ್ರ ಮೋದಿ, ಪ್ರಧಾನಿ

ಅವಮಾನ ಇಲಾಖೆ ಎಂದು ಹೆಸರು ಬದಲಾಯಿಸೋಣವೇ?

---------------------
ನಕ್ಸಲರನ್ನು ಬಗ್ಗು ಬಡಿಯುವ ಶಕ್ತಿ ಬಿಜೆಪಿಗೆ ಮಾತ್ರ ಇದೆ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ದೇಶಕ್ಕೀಗ ಸಂಘಪರಿವಾರ ಉಗ್ರರನ್ನು ಬಗ್ಗುಬಡಿಯುವವರು ಬೇಕಾಗಿದ್ದಾರೆ.

---------------------
 
ದುರಂತವೆಂದರೆ ಕನ್ನಡಿಗರಿಗೆ ಕನ್ನಡ ಬಳಸಿ ಎಂದು ಕನ್ನಡದವರೇ ಬಂದು ಕನ್ನಡದಲ್ಲೇ ಹೇಳಬೇಕಿದೆ - ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ
ಕನ್ನಡಿಗರು ಮೊದಲು ಕನ್ನಡಿ ಬಳಸಬೇಕಾಗಿದೆ.

---------------------
  ಗಾಯತ್ರಿ ಮಂತ್ರ ವಿಶ್ವಗೀತೆಯಾಗಲಿ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ಉಡುಪಿ ಎನ್ನುವ ವಿಶ್ವದ ಗೀತೆಯಾಗಲಿ ಎನ್ನುತ್ತಿರಬೇಕು.

---------------------
  ಸಿಎಂ ಕುಮಾರಸ್ವಾಮಿ ಆಡಳಿತ ಮರೆತು ದೇವಾಲಯ ಅಲೆಯುವುದು ಒಳ್ಳೆಯದಲ್ಲ - ಸಿಟಿ ರವಿ,

ಶಾಸಕ ಯಾರಿಗೆ ಒಳ್ಳೆಯದಲ್ಲ ?

---------------------
 ಗೂಳಿಗಳಂತೆ ದಾಳಿ ಮಾಡುವವರ ಕೈಗೆ ಅಧಿಕಾರ ಕೊಡಬೇಡಿ - ರಮೇಶ್‌ಕುಮಾರ್, ವಿ.ಸ. ಸಭಾಪತಿ
  ಮತ್ತೆ ಯಾವ ರೀತಿ ದಾಳಿ ಮಾಡುವವರ ಕೈಗೆ ಅಧಿಕಾರ ಕೊಡಬೇಕು?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!