ಓ ಮೆಣಸೇ..

Update: 2018-12-23 18:42 GMT

  ಸೋ ಕಾಲ್ಡ್ ಬುದ್ಧಿ ಜೀವಿಗಳಿಂದ ದೇಶಕ್ಕೆ ಗಂಡಾಂತರವಿದೆ
- ರಾಮ್ ಮಾಧವ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
 ಬುದ್ಧಿಯಿಲ್ಲದವರ ಕೈಗೆ ದೇಶ ಕೊಡಿ ಎನ್ನುತ್ತಿದ್ದಾರೆ.

---------------------
  ಮೊಬೈಲ್ ಎಂಬ ಮಾಯೆ ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮನ್ನು ಆವರಿಸುವಂತೆ ಮಾಡುತ್ತದೆ
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಆ ಮಾಯೆ ಕೆಲವೊಮ್ಮೆ ಕೋರ್ಟಿನ ಕಟಕಟೆಯವರೆಗೂ ಒಯ್ಯಬಹುದು.

---------------------
  ನಮ್ಮದೇ ರಕ್ತ ಜಗತ್ತು ಆಳಿದರೆ ತಪ್ಪೇನು?
-ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ
ನಿಮ್ಮದು ಜಗತ್ತನ್ನು ಅಳಿಸುವುದಕ್ಕಷ್ಟೇ ಲಾಯಕ್ಕು.

---------------------
  ಸಂತ ವಾಲ್ಮೀಕಿ ಬರೆದ ರಾಮಾಯಣದ ಮುಂದೆ ಗೂಗಲ್ ಸೋಲನುಭವಿಸಿದೆ
- ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ
 ಮಾರಾಯ, ನೀವು ಮುಖ್ಯಮಂತ್ರಿಯಾದ ದಿನವೇ ವಾಲ್ಮೀಕಿ ಸೋತ.

---------------------
  ಮೋದಿ ಸರಕಾರ ಬಂದ ನಂತರ ದೇಶದ ಆಂತರಿಕ ಭದ್ರತೆಯಲ್ಲಿ ಅಭಿವೃದ್ಧಿಯಾಗಿದೆ
- ರಾಜನಾಥ್‌ಸಿಂಗ್,ಕೇಂದ್ರ ಸಚಿವ
  ಆರ್ಥಿಕ ಅಭಿವೃದ್ಧಿಯ ಕತೆ ಏನು?
---------------------
  ಶಾಸಕ, ಸಚಿವನಾಗಿದ್ದಾಗ ಟಿಪ್ಪು ಜಯಂತಿಯಲ್ಲಿ ಭಾಗವಹಿಸಲು ದೇವರೇ ಅವಕಾಶ ಕೊಡಲಿಲ್ಲ
- ಪ್ರಮೋದ್ ಮಧ್ವರಾಜ್, ಮಾಜಿ ಸಚಿವ
ಅದಕ್ಕೇ, ನೀವು ಶಾಸಕರಾಗಲು ಜನರು ಅವಕಾಶ ಕೊಡಲಿಲ್ಲ.

---------------------
  ಕಳ್ಳರೆಲ್ಲಾ ಒಟ್ಟಾಗಿ ಚೌಕಿದಾರನನ್ನೇ ಕಳ್ಳನೆಂದು ಕರೆದರೆ ಜನ ಎಂದೂ ಒಪ್ಪಿಕೊಳ್ಳುವುದಿಲ್ಲ
- ವಿಜಯ್ ರೂಪಾನಿ, ಗುಜರಾತ್ ಮುಖ್ಯಮಂತ್ರಿ
ಕಳ್ಳನನ್ನೇ ಚೌಕಿದಾರನನ್ನಾಗಿ ಮಾಡಿರುವುದು ಜನರಿಗೆ ತಡವಾಗಿ ಹೊಳೆದಿದೆ.

---------------------
 
ಇನ್ನೊಮ್ಮೆ ಮುಖ್ಯಮಂತ್ರಿ ಆಗೇ ಆಗುತ್ತೇನೆ - ಸಿದ್ದರಾಮಯ್ಯ, ಮುಖ್ಯಮಂತ್ರಿ
ಇನ್ಶಿಯಲ್‌ನ್ನು ಮುಖ್ಯಮಂತ್ರಿ ಎಂದು ಬದಲಾಯಿಸಿ. ಶಾಶ್ವತವಾಗಿ ಮುಖ್ಯಮಂತ್ರಿಯಾಗಬಹುದು.

---------------------
  ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡುವವರೆಗೆ ಪ್ರಧಾನಿ ಮೋದಿಯನ್ನು ನಿದ್ದೆ ಮಾಡಲು ಬಿಡುವುದಿಲ್ಲ
- ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಮೋದಿಗೇನು? ನಿದ್ದೆ ಕಳೆದುಕೊಂಡಿರುವುದು ಅವರನ್ನು ಪ್ರಧಾನಿಯಾಗಿ ಮಾಡಿದ ಮತದಾರರು.

---------------------
  ಇನ್ನು 10 ವರ್ಷ ಪ್ರಧಾನಿ ಹುದ್ದೆ ಖಾಲಿ ಇಲ್ಲ
- ರಾಮ್‌ಮಾಧವ್, ಬಿಜೆಪಿ ಪ್ರ. ಕಾರ್ಯದರ್ಶಿ.
ಅದು ಹುದ್ದೆಯಲ್ಲ, ಜವಾಬ್ದಾರಿ. ಪ್ರತಿ ಐದು ವರ್ಷದ ಬಳಿಕ ಅದನ್ನು ಜನರೇ ತೀರ್ಮಾನಿಸುತ್ತಾರೆ.

---------------------
  ಸಿಖ್ ವಿರೋಧಿ ಪ್ರಕರಣದಲ್ಲಿ ಸಜ್ಜನ್ ಕುಮಾರ್‌ಗೆ ಶಿಕ್ಷೆಯಾಗುತ್ತದೆ, ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂದು ಯಾರು ಕನಸಿನಲ್ಲೂ ಯೋಚಿಸಿರಲಿಲ್ಲ
- ನರೇಂದ್ರ ಮೋದಿ, ಪ್ರಧಾನಿ.
ಗುಜರಾತ್ ಹತ್ಯಾಕಾಂಡದಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆಯೋ ಎನ್ನುವುದನ್ನೊಮ್ಮೆ ಕನಸಿನಲ್ಲಿ ಯೋಚಿಸಿ.

---------------------
  ನಾನು ಸಾಲ ತೀರಿಸಲು ದೇಶ ಬಿಟ್ಟೆ
- ವಿಜಯ ಮಲ್ಯ, ಉದ್ಯಮಿ.
  ದೇಶ ಮಾರಿ ಸಾಲ ತೀರಿಸುವ ಯೋಜನೆಯಿತ್ತೇನೋ?
---------------------
  ಪ್ರಧಾನಿ ಮೋದಿ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಬ್ಬರೂ ಅದ್ಭುತ ಆಟಗಾರರು
- ಅರುಣ್ ಜೇಟ್ಲಿ, ಕೇಂದ್ರ ಸಚಿವ
ಒಟ್ಟಲ್ಲಿ ದೇಶ ಆಳುವುದನ್ನು ಕ್ರಿಕೆಟ್ ಆಟದ ಮಟ್ಟಕ್ಕೆ ಇಳಿಸಿ ಬಿಟ್ಟಿರಿ.

---------------------
  ವ್ಯಂಗ್ಯ ಚಿತ್ರಕ್ಕೆ ನೋವನ್ನು ಗುಣಪಡಿಸುವ ಶಕ್ತಿ ಇದೆ
-ನರೇಂದ್ರ ಮೋದಿ, ಪ್ರಧಾನಿ.
ಆದರೆ ನಿಮ್ಮ ಭಕ್ತರನ್ನು ಗುಣಪಡಿಸುವುದು ಕಷ್ಟ.

---------------------
  ನಾನು ಆಕಸ್ಮಿಕ ಪ್ರಧಾನಮಂತ್ರಿ ಮಾತ್ರ ಅಲ್ಲ, ಆಕಸ್ಮಿಕ ವಿತ್ತ ಮಂತ್ರಿ ಕೂಡ
- ಮನಮೋಹನ್‌ಸಿಂಗ್, ಮಾಜಿ ಪ್ರಧಾನಿ
ಒಟ್ಟಿನಲ್ಲಿ ಸೋನಿಯಾ ಗಾಂಧಿಯವರ ಮಿಕ.

---------------------
  ಮೋದಿ ವಿರುದ್ಧ ಬಿಜೆಪಿಯ ಅಸಮಾಧಾನ ಕೆಲವೇ ದಿನಗಳಲ್ಲಿ ಭಯಾನಕ ಬೆಂಕಿಯಾಗಿ ಸ್ಫೋಟಿಸಿ ಪಕ್ಷವನ್ನೇ ನಾಶ ಮಾಡಲಿದೆ
- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಸದ್ಯಕ್ಕೆ ರಾಜ್ಯ ಸರಕಾರದೊಳಗಿರುವ ಬೆಂಕಿಯ ಬಗ್ಗೆ ತಲೆಕೆಡಿಸಿಕೊಳ್ಳಿ.

---------------------
  ಕೇಂದ್ರ ಸರಕಾರ ಭರವಸೆ ನೀಡಿದಂತೆ ಪ್ರತಿಯೊಬ್ಬರ ಖಾತೆಗೂ 15ಲಕ್ಷ ರೂ. ನಿಧಾನವಾಗಿ ಬರಲಿದೆ
- ರಾಮದಾಸ್ ಅಠಾವಳೆ, ಕೇಂದ್ರ ಸಚಿವ
 ಬಹುಶಃ ಸ್ವಿಸ್‌ಬ್ಯಾಂಕಿನಿಂದ ಕಾಲ್ನಡಿಗೆಯಲ್ಲಿ ಬರುತ್ತಾ ಇರಬೇಕು.

---------------------
  ಬಲಿಷ್ಠ ಸರಕಾರ ರಚನೆ ಕೇವಲ ಬಿಜೆಪಿಗೆ ಮಾತ್ರವಲ್ಲ, ದೇಶಕ್ಕೂ ಅಗತ್ಯವಿದೆ
- ಅಮಿತ್ ಶಾ, ಬಿಜೆಪಿ ಅಧ್ಯಕ್ಷ
  ಹೌದು. ಅದಕ್ಕಾಗಿಯೇ ತಮ್ಮ ಸರಕಾರವನ್ನು ಬದಲಿಸುವುದಕ್ಕೆ ಜನ ಸಜ್ಜಾಗಿದ್ದಾರೆ.
---------------------
  ರಾಜಕೀಯದಲ್ಲಿ 2+2 ಎಂದಿಗೂ 4 ಆಗಲ್ಲ
- ನಿತಿನ್ ಗಡ್ಕರಿ, ಕೇಂದ್ರ ಸಚಿವ
ರಫೇಲ್ ಹಗರಣದಲ್ಲಿ ತಪ್ಪು ಮಾಹಿತಿ ನೀಡಿರುವುದು ಈ ಲೆಕ್ಕಾಚಾರದ ಮೂಲಕವೇ ಇರಬೇಕು.

---------------------
  ಸೊಹ್ರಾಬುದ್ದೀನ್ ಇದ್ದಿದ್ದರೆ ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡುತ್ತಿದ್ದ
- ಡಿ.ಜಿ. ವಂಝಾರಾ, ಗುಜರಾತ್‌ನ ನಿವೃತ್ತ ಐಜಿಪಿ
ಹರೇನ್ ಪಾಂಡ್ಯ ಹತ್ಯೆಗೆ ಸುಪಾರಿಕೊಟ್ಟವರು ಇದನ್ನು ತಮಗೆ ಹೇಳಿಕೊಟ್ಟಿರಬೇಕು.

---------------------
  ಇಮ್ಮಡಿ ಮಹದೇವ ಸ್ವಾಮಿ ಮೇಲೆ ಆರೋಪ ಆದಾಕ್ಷಣ ಇತರ ಮಠಾಧೀಶರ ಬಗ್ಗೆ ಕೆಟ್ಟ ಭಾವನೆ ಸಲ್ಲದು
- ಡಾ.ಎಸ್.ಎಲ್ ಭೈರಪ್ಪ, ಸಾಹಿತಿ
ಸಾಹಿತ್ಯದ ವಿಷ ಉಣಿಸಿದವರಿಂದ ಸಲಹೆ.

---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!