ಓ ಮೆಣಸೇ…

Update: 2019-01-28 07:53 GMT

ಎಲ್ಲ ಕಾಲಕ್ಕೂ ಅನ್ವಯಿಸುವ ಥೀಮ್ ಸಾಹಿತ್ಯಕ್ಕೆ ಮುಖ್ಯ
-ಎಸ್ .ಎಲ್.ಭೈರಪ್ಪ, ಸಾಹಿತಿ
ಮನುಕಾಲಕ್ಕೆ ಮಾತ್ರ ಅನ್ವಯಿಸುವ ನಿಮ್ಮ ಸಾಹಿತ್ಯದ ಥೀಮನ್ನು ಏನು ಮಾಡೋಣ?

---------------------
  ವಿಪಕ್ಷಗಳಿಗೆ ಧನ ಬಲವಿದ್ದರೆ, ನಮಗೆ ಜನ ಬಲವಿದೆ
  -ನರೇಂದ್ರ ಮೋದಿ, ಪ್ರಧಾನಿ

ಬಿಜೆಪಿ ವಿಶ್ವದ ಅತಿ ಶ್ರೀಮಂತ ಪಕ್ಷ ಎನ್ನುವುದನ್ನು ಯಾಕೆ ಮರೆತಿರಿ?

---------------------
  ಭಾರತೀಯರಿಗಾಗಿ ಪ್ರತ್ಯೇಕ ಉಡುಪು, ಅಳತೆ ವಿಧಾನವನ್ನು ಕೇಂದ್ರ ಸರಕಾರ ಶೀಘ್ರ ಪರಿಚಯಿಸಲಿದೆ
- ಸ್ಮತಿ ಇರಾನಿ, ಕೇಂದ್ರ ಸಚಿವೆ

ಅದಕ್ಕಾಗಿ ತಾವು ಟೇಲರಿಂಗ್ ತರಬೇತಿ ಕೋರ್ಸನ್ನಾದರೂ ಕಲಿಯಿರಿ.

---------------------
  ಸ್ತ್ರೀಯರಿಗೆ ಸಮಾನ ಅವಕಾಶ ಒದಗಿಸಿಕೊಡುವುದು ನಮ್ಮ ಜವಾಬ್ದಾರಿ
 
- ನಳಿನ್ ಕುಮಾರ್ ಕಟೀಲು, ಸಂಸದ

ಮೊದಲು ಪಂಪ್‌ವೆಲ್ ಓವರ್ ಬ್ರಿಡ್ಜ್ ಪೂರ್ತಿಗೊಳಿಸಿ.

---------------------
  ಸರಕಾರ ಬೀಳುತ್ತದೆ, ನಾನು ಸಿಎಂ ಆಗುತ್ತೇನೆ ಎನ್ನುವಂತಹ ಹೇಳಿಕೆ ನೀಡದಂತೆ ನಮ್ಮ ಶಾಸಕರಿಗೆ ಸೂಚನೆ ನೀಡಿದ್ದೇನೆ
 
- ಯಡಿಯೂರಪ್ಪ , ಮಾಜಿ ಮುಖ್ಯಮಂತ್ರಿ

ಬೀಳಿಸಿದ ಬಳಿಕ ಹೇಳಿಕೆ ನೀಡಿ ಎಂದಿರಬೇಕು.

---------------------
  ಬಿಎಸ್ಪಿ ನಾಯಕಿ ಮಾಯಾವತಿ ಹೆಣ್ಣೂ ಅಲ್ಲ, ಗಂಡೂ ಅಲ್ಲ
 
- ಸಾಧನಾ ಸಿಂಗ್ ,ಉ.ಪ್ರ.ಶಾಸಕಿ

ಮನುಷ್ಯ ಜಾತಿಗೆ ಸೇರದವರಿಂದ ಹೊರಬಿದ್ದ ಹೇಳಿಕೆ.

---------------------
ಏಡಿಗಳನ್ನು ಒಂದೇ ತಟ್ಟೆಯಲ್ಲಿ ಹಾಕಿದರೆ ಪರಸ್ಪರ ಕಾಲು ಎಳೆಯುವಂತೆ ಕಾಂಗ್ರೆಸಿಗರು ಕಚ್ಚಾಡುತ್ತಿದ್ದಾರೆ

- ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
ತಟ್ಟೆಯಿಂದ ಹೊರಗೆ ಬಂದರೆ ತಮ್ಮ ತಟ್ಟೆಗೆ ಸೇರಿಸುವ ಉದ್ದೇಶವಿರಬೇಕು.

---------------------
ಎಲ್ಲ್ಲ ಭ್ರಷ್ಟ ರಾಜಕೀಯ ಕುಟುಂಬಗಳು ಪ್ರಧಾನಿ ಮೋದಿ ವಿರುದ್ಧ ಒಂದಾಗಿದೆ
- ರಾಮ್ ಮಾಧವ್, ಬಿಜೆಪಿ ಪ್ರ. ಕಾರ್ಯದರ್ಶಿ

ಎಲ್ಲ ಭ್ರಷ್ಟ ಕುಟುಂಬಗಳಿಗೆ ಮೋದಿಯೊಬ್ಬರ ಭ್ರಷ್ಟತನ ಸಮ ಎಂಬ ಕಾರಣಕ್ಕಿರಬೇಕು.

---------------------
ರಾಜಕಾರಣಿಗಳು ಯೋಚಿಸುವುದಕ್ಕಿಂತ ಜನರು ಹೆಚ್ಚು ಬುದ್ಧಿವಂತರಾಗಿದ್ದಾರೆ

-ಅರುಣ್ ಜೇಟ್ಲಿ, ಕೇಂದ್ರ ಸಚಿವ

ಕೊನೆಗೂ ನಿಮಗದು ಮನವರಿಕೆಯಾಗಿರುವುದು ಸಮಾಧಾನ ತಂದಿರುವ ಸಂಗತಿ. ಮೋದಿಗೂ ಹೇಳಿಬಿಡಿ.

---------------------
ಶಾಸಕ ಆನಂದ ಸಿಂಗ್ ನನ್ನ ಅಣ್ಣ - ಜೆ.ಎನ್.ಗಣೇಶ್, ಶಾಸಕ

ಅಣ್ಣನೆಂದ ಮಾತ್ರಕ್ಕೆ ದಾಳಿ ನಡೆಸಬಹುದೆ?
---------------------
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆರೆಸ್ಸೆಸ್‌ಗೆ ಮಾರ್ಗದರ್ಶಕರಾಗಿದ್ದರು
- ಮೋಹನ್ ಭಾಗವತ್ ,ಆರೆಸ್ಸೆಸ್ ಸರ ಸಂಘ ಚಾಲಕ

ಆರೆಸ್ಸೆಸ್ ಕಳಂಕವನ್ನು ಸಿದ್ದಗಂಗಾ ಸ್ವಾಮೀಜಿಗಳ ತಲೆಗೆ ಕಟ್ಟದಿರಿ.

---------------------
  ಮಹಾಘಟ ಬಂಧನ್ ಅಧಿಕಾರ ಲಾಲಸೆ ಮತ್ತು ವೈಯಕ್ತಿಕ ಹಿತ್ತಾಸಕ್ತಿಗಳ ಕೂಟ
 - ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ತಮ್ಮ ಎನ್‌ಡಿಎ ಪಕ್ಷಗಳ ಕೂಟದ ಬಗ್ಗೆಯೂ ಹೇಳಿ.

---------------------
  ಜನರ ಅನುಕಂಪ ಗಿಟ್ಟಿಸುವುದಕ್ಕಾಗಿ ಪ್ರಧಾನಿ ಮೋದಿ ಚಹಾ ಮಾರಿದ್ದೇನೆ ಎಂದು ಗಿಮಿಕ್ ಮಾಡುತ್ತಿದ್ದಾರೆ
- ಪ್ರವೀಣ್ ತೊಗಾಡಿಯ, ವಿ.ಹಿ.ಪ. ಮಾಜಿ ಮುಖಂಡ

ಅವರ ಜೊತೆ ಸೇರಿಕೊಂಡು ನೀವು ಜನ ಸಾಮಾನ್ಯರಿಗೆ ದ್ವೇಷದ ವಿಷ ಮಾರಿದ್ದಂತೂ ನಿಜ.

---------------------
ಕೆಲವರಿಗೆ ಕುಟುಂಬವೇ ಪಕ್ಷ. ಆದರೆ ಬಿಜೆಪಿಗೆ ಪಕ್ಷವೇ ಕುಟುಂಬ

- ನರೇಂದ್ರ ಮೋದಿ, ಪ್ರಧಾನಿ

ಕುಟುಂಬವನ್ನು ನಡುನೀರಿನಲ್ಲಿ ಬಿಟ್ಟ ಇತಿಹಾಸ ತಮ್ಮ ಪಾಲಿಗೆ ಹೆಮ್ಮೆಯ ವಿಷಯವಾಯಿತೇ?
---------------------

ನಿತಿನ್ ಗಡ್ಕರಿಗೆ ಪ್ರಧಾನಿ ಸ್ಥಾನ ನೀಡುವುದಾದರೆ ಶಿವಸೇನೆ ಬಿಜೆಪಿಯನ್ನು ಬೆಂಬಲಿಸಲಿದೆ
- ಸಂಜಯ್ ರಾವುತ್, ಶಿವಸೇನೆ ಮುಖಂಡ

ಅಂದರೆ ಗಡ್ಕರಿ ಪ್ರಧಾನಿಯಾಗುವುದಾದರೆ ಅಯೋಧ್ಯೆಯ ಕುರಿತಂತೆ ವೌನವಾಗುತ್ತೀರಿ ಎಂದಾಯಿತು.

---------------------
  ಪಕ್ಷಕ್ಕಿಂತ ಯಾರೂ ದೊಡ್ಡ ವರಲ್ಲ
- ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ

ದೇವೇಗೌಡರು ಕಿಸಕ್ಕನೆ ನಕ್ಕರಂತೆ.

---------------------
ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಪ್ರವೇಶಿಸಿರುವುದು ಪ್ರಧಾನಿ ಮೋದಿಯ ನಿದ್ದೆಗೆಡಿಸಿದೆ
- ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ

ಪ್ರಿಯಾಂಕಾ ಅವರ ಧೈರ್ಯದಿಂದ ಕಾಂಗ್ರೆಸ್‌ನ ಪುಢಾರಿಗಳೆಲ್ಲ ನಿದ್ದೆಗೆ ಜಾರಿದ್ದಾರಂತೆ.

---------------------
ಮೊಮ್ಮಗನ ನಟನೆ ನೋಡಿ ಚಿತ್ರಮಂದಿರದಲ್ಲೇ ಕಣ್ಣೀರಿಟ್ಟ ದೇವೇಗೌಡ - ಸುದ್ದಿ
ನಟನೆಯಲ್ಲಿ ತನ್ನನ್ನೇ ಮೀರಿಸಿದ್ದಕ್ಕಿರಬಹುದೇ?
---------------------
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮತದಾನದ ಹಕ್ಕು ನೀಡಬಾರದು

- ಬಾಬಾರಾಮ್ ದೇವ್ ,ಯೋಗ ಗುರು

ಅಖಂಡ ಬ್ರಹ್ಮಚಾರಿಗಳೆಂದು ಘೋಷಿಸಿದವರಿಗೂ ಆ ಹಕ್ಕನ್ನು ನಿರಾಕರಿಸಿದರೆ ಹೇಗೆ?
---------------------

ನಾನು ಹಿಂದೆ ವರ್ಷದಲ್ಲಿ 5 ದಿನ ಒಬ್ಬನೇ ಕಾಡಿನಲ್ಲಿರುತ್ತಿದ್ದೆ
 - ನರೇಂದ್ರ ಮೋದಿ ,ಪ್ರಧಾನಿ

ಜಂಗಲ್ ಬುಕ್‌ನಲ್ಲಿ ಬರುವ ಮೊಗ್ಲಿ ನೀವೇ ಎನ್ನುವುದು ಸಂಶೋಧನೆಯಿಂದ ಸಾಬೀತಾಗಿದೆ.

---------------------
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಒಂದಂಕಿಗೆ ಇಳಿಸಲು ಕಾಂಗ್ರೆಸ್ ಪಣತೊಟ್ಟಿದೆ

- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಅದಕ್ಕೆ ತಮ್ಮ ಪಕ್ಷದೊಳಗಿರುವ ನಾಯಕರು ಬಿಡಬೇಕಲ್ಲ?
---------------------

ಸಂಸದ ನಳಿನ್ ಕುಮಾರ್ ಕಟೀಲ್‌ರಿಗೆ ಇಂಗ್ಲಿಷ್, ಹಿಂದಿ ಜ್ಞಾನ ಕಡಿಮೆ ಇರಬಹುದು ಆದರೆ ಜನರ ಹೃದಯದ ಭಾಷೆ ಗೊತ್ತಿದೆ
- ಪ್ರಹ್ಲಾದ್ ಜೋಷಿ, ಸಂಸದ

ಯಾವ ಭಾಷೆಯಲ್ಲಾದರೂ ಸರಿ, ಮಾತನಾಡಿ ಆ ಪಂಪ್‌ವೆಲ್ ಓವರ್ ಬ್ರಿಡ್ಜ್‌ನ್ನು ಪೂರ್ತಿಗೊಳಿಸಲಿ.

---------------------

ಚುನಾವಣೆಗಳು ಶತಮಾನಕ್ಕೆ ಒಂದು ಬಾರಿ ಬರುವಂತೆ ನಾವೆಲ್ಲ ಕಾಣಬೇಕು

- ರಾಮನಾಥ ಕೋವಿಂದ್, ರಾಷ್ಟ್ರಪತಿ

ಚುನಾವಣೆಯನ್ನು ನೂರು ವರ್ಷಕ್ಕೊಮ್ಮೆ ಘೋಷಿಸುವ ಉದ್ದೇಶವೇನಾದರೂ ಇದೆಯೇ?
---------------------
ಯುವ ಲೇಖಕರಿಗೆ ಅಹಂ ಇರಬಾರದು
- ಡಾ. ಸಿದ್ದಲಿಂಗಯ್ಯ, ಹಿರಿಯ ಸಾಹಿತಿ
ಆದರೆ ಹಿರಿಯರ ಸಮಯ ಸಾಧಕತನಗಳನ್ನು ಗುರುತಿಸುವ ಪ್ರಜ್ಞೆ ಇರಬೇಕು.

---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!