ಓ ಮೆಣಸೇ…
ಈಗಲೂ ಸಿದ್ದರಾಮಯ್ಯರೇ ನಮಗೆ ಮುಖ್ಯಮಂತ್ರಿ
- ಪುಟ್ಟರಂಗಶೆಟ್ಟಿ, ಸಚಿವ
ನಿಮ್ಮ ರಾಜ್ಯದ ಹೆಸರನ್ನೂ ಜೊತೆಗೆ ಹೇಳಿಬಿಡಿ.
---------------------
ಮಲ್ಲಿಕಾರ್ಜುನ ಖರ್ಗೆ ಈ ನಾಡಿನ ಮುಖ್ಯಮಂತ್ರಿಯಾಗಬೇಕಿತ್ತು
- ಕೆ.ಎಚ್.ಮುನಿಯಪ್ಪ, ಸಂಸದ
ಈಗ ಪ್ರಧಾನಿಯಾಗಿ ಮಾಡುವ ಅವಕಾಶ ಇದ್ದೇ ಇದೆ.
---------------------
ಉತ್ತಮ ಪ್ರಧಾನಿಯಾಗುವ ಎಲ್ಲ ಅರ್ಹತೆಯನ್ನು ರಾಹುಲ್‌ಗಾಂಧಿ ಹೊಂದಿದ್ದಾರೆ
- ತೇಜಸ್ವಿಯಾದವ್, ಆರ್‌ಜೆಡಿ ನಾಯಕ
ಅರ್ಹತೆ ಬೇಕೆಂದೇನೂ ಇಲ್ಲ ಎನ್ನುವುದನ್ನು ಮೋದಿ ಸಾಬೀತು ಮಾಡಿದ್ದಾರೆ.
---------------------
ದೊಡ್ಡ ಸಂಖ್ಯೆಯಲ್ಲಿರುವ ಬಿಲ್ಲವ ಸಮುದಾಯಕ್ಕೆ ಪೂರ್ಣ ಪ್ರಮಾಣದ ಗೌರವ ದೊರೆತಿಲ್ಲ
- ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ವಿಪಕ್ಷ ನಾಯಕ
ಬಿಲ್ಲವ ಸಮುದಾಯ ಸಂಘಪರಿವಾರದ ಬಲೆಗೆ ಬಿದ್ದು ಜೈಲು ಸೇರುತ್ತಿದ್ದರೆ ಗೌರವ ದೊರಕುವುದಾದರೂ ಹೇಗೆ?
---------------------
ಸನ್ಯಾಸಿಗಳಿಗೂ ಭಾರತ ರತ್ನ ಸಿಗಬೇಕು
- ಬಾಬಾ ರಾಮ್‌ದೇವ್, ಯೋಗಗುರು
ಮೊದಲು ನೀವು ನಿಮ್ಮಲ್ಲಿರುವ ಸಂಪತ್ತನ್ನೆಲ್ಲ ದಾನ ಮಾಡಿ ಕಾವಿ ಉಟ್ಟು ಸನ್ಯಾಸಿಯಾಗಿ.
---------------------
ದೊಡ್ಡ ಆಶ್ವಾಸನೆಗಳನ್ನು ನೀಡಿ ಅವುಗಳನ್ನು ಈಡೇರಿಸದಿದ್ದರೆ ರಾಜಕಾರಣಿಗಳನ್ನು ಜನರೇ ಥಳಿಸುತ್ತಾರೆ
- ನಿತಿನ್‌ಗಡ್ಕರಿ, ಕೇಂದ್ರಸಚಿವ
ಮೋದಿಯವರನ್ನು ಥಳಿಸುವುದಕ್ಕೆ ಪರೋಕ್ಷ ಕರೆಯೇ?
---------------------
ನಾನು ಕುರ್ಚಿಗೆ ಅಂಟಿಕೊಳ್ಳುವ ಜಾಯಮಾನದವನಲ್ಲ
- ಕುಮಾರಸ್ವಾಮಿ, ಮುಖ್ಯಮಂತ್ರಿ
ಅಂಟುವುದಕ್ಕೆ ಅಲ್ಲೇನು ಪೆವಿಕಲ್ ಇದೆಯೇ?
---------------------
ಹಿಂದೂಗಳು ಕುರಿ,ಕೋಳಿಗಳಂತೆ ದುರ್ಬಲರಾಗಬಾರದು
- ಅನಂತಕುಮಾರ್ ಹೆಗಡೆ, ಸಂಸದ
ಬದನೆ ಕಾಯಿ ಗೊಜ್ಜಿನಂತೆ ಸಬಲರಾಗಬೇಕೇ?
---------------------
ಬಿಜೆಪಿಯವರು ಆಪರೇಶನ್ ಕಮಲ ಯಾಕೆ ಮಾಡುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ
- ಬಸವರಾಜಹೊರಟ್ಟಿ, ವಿ.ಪ.ಸದಸ್ಯ
ಅಧಿಕಾರವಿಲ್ಲದೆ ಹೊಟ್ಟೆ ಉರಿ ಆಗಿದೆಯಂತೆ.
---------------------
ಣ್ಣವರ ಜೊತೆ ಸ್ಪರ್ಧಿಸಿ ಸಾಕಾಗಿದೆ, ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಸೆಣಸಿ ಯಶಸ್ವಿಯಾಗುವೆ
- ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ತಮ್ಮ ಹೆಸರಿನ ಮುಂದಿರುವ ಗೌಡ ಎಂಬ ನಾಮದ ಬಲದ ಧೈರ್ಯ. ಆದರೆ ಮಂಡ್ಯದ ಗೌಡರು ಸುಳ್ಯದ ಗೌಡರನ್ನು ಒಪ್ಪುವುದಿಲ್ಲವಂತೆ.
---------------------
ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಶಾಸಕರು ಬೇಸತ್ತು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ
- ಶ್ರೀರಾಮುಲು, ಶಾಸಕ
ಬಿಜೆಪಿಯೊಳಗೆ ಬೇಸತ್ತಿರುವ ಶಾಸಕರನ್ನೇನು ಮಾಡುತ್ತೀರಿ?
---------------------
ಮಹಾರಾಷ್ಟ್ರದಲ್ಲಿ ಹಿಂದುತ್ವದ ಧೋರಣೆ ಹಿನ್ನೆಲೆಯಲ್ಲಿ ಮಾತ್ರವೇ ನಾವು ಶಿವಸೇನೆ ಜೊತೆ ಮೈತ್ರಿಗೆ ಇಚ್ಛಿಸುತ್ತೇವೆ
- ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ
ಶತ್ರುಗಳ ಜೊತೆ ಶಯನ.
---------------------
ಮದುವೆ ಆಗುವುದಕ್ಕೆ ಮೊದಲು(ಮೈತ್ರಿ ಸರಕಾರದ ಬಗ್ಗೆ) ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಇಷ್ಟ ಆಗಬೇಕು
- ಡಾ.ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ
ಮಗು ಹುಟ್ಟಿದ ಮೇಲೆ ಇಷ್ಟ ಆದರೇನು, ಬಿಟ್ಟರೇನು?
---------------------
ಕುಮಾರಸ್ವಾಮಿ ಎಂಬ ಕೊಂಬೆಯ ಮೇಲೆ ಕಾಂಗ್ರೆಸ್ ಎಂಬ ಕಾಗೆ ಕುಳಿತಿದೆ
- ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
ಯಡಿಯೂರಪ್ಪರ ತಲೆಯ ಮೇಲೆ ಕೂತ ಗೂಬೆಯ ಮಾತು.
---------------------
ಚುನಾವಣೆಯೆಂದರೆ ಕುಸ್ತಿ ಪಂದ್ಯಾಟವೂ ಅಲ್ಲ, ಸೌಂದರ್ಯ ಸ್ಪರ್ಧೆಯೂ ಅಲ್ಲ
- ಸುಶೀಲ್‌ಕುಮಾರ್ ಮೋದಿ, ಬಿಹಾರದ ಉಪಮುಖ್ಯಮಂತ್ರಿ
ಸದ್ಯಕ್ಕೆ ಅದು ಇವಿಎಂ ಜೊತೆಗಿನ ಜೂಜಾಟ.
---------------------
ರಾಹುಲ್‌ಗಾಂಧಿಗೆ ರಫೇಲ್ ಮತ್ತು ಮೂರುಚಕ್ರದ ಸೈಕಲ್ ನಡುವೆ ವ್ಯತ್ಯಾಸ ಗೊತ್ತಿಲ್ಲ
- ಅನಂತಕುಮಾರ್‌ಹೆಗಡೆ, ಕೇಂದ್ರಸಚಿವ
ರಫೇಲ್ ವಿಮಾನವನ್ನು ಮೂರು ಚಕ್ರದ ಸೈಕಲ್ ಮಟ್ಟಕ್ಕೆ ಇಳಿಸಿದವರ ಮಾತು.
---------------------
ಕುಮಾರಸ್ವಾಮಿಯೇ ನಮ್ಮ ಮುಖ್ಯಮಂತ್ರಿ
- ದಿನೇಶ್‌ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಅದನ್ನು ಪದೇ ಪದೇ ಹೇಳುವುದನ್ನು ನೋಡುವಾಗ ಅನುಮಾನ ಬರುತ್ತದೆ.
---------------------
ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡಿದರೆ ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ
- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಸಹಿಸಿದಷ್ಟು ಕಾಲ ಮಗ ಮುಖ್ಯಮಂತ್ರಿಯಾಗಿರುತ್ತಾನೆ.
---------------------
ಎತ್ತಿನ ಹೊಳೆ ನೀರು ಹರಿಸಿ ಪ್ರಾಣಬಿಡಬೇಕು ಎಂಬ ಬಯಕೆ ನನ್ನದು
- ವೀರಪ್ಪಮೊಯ್ಲಿ, ಸಂಸದ
ಒಟ್ಟಿನಲ್ಲಿ ದಕ್ಷಿಣ ಕನ್ನಡಿಗರ ಪ್ರಾಣ ತೆಗೆದೇ ಪ್ರಾಣ ಬಿಡಬೇಕು ಎಂದಿದ್ದೀರಿ.
---------------------
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಗುವನ್ನು ಚಿವುಟಿ ತೊಟ್ಟಿಲನ್ನು ತೂಗುತ್ತಿದ್ದಾರೆ
- ಶೋಭಾಕರಂದ್ಲಾಜೆ, ಸಂಸದೆ
ಕನಿಷ್ಠ ತೊಟ್ಟಿಲು ತೂಗಲು ಅವರ ಬಳಿ ಮಗುವಾದರೂ ಇದೆಯಲ್ಲ.
---------------------
ಮಹಾಮೈತ್ರಿ ಅಧಿಕಾರಕ್ಕೆ ಬಂದರೆ ದಿನಕ್ಕೊಬ್ಬ ಪ್ರಧಾನಿ
- ಅಮಿತ್‌ಶಾ, ಬಿಜೆಪಿ ಅಧ್ಯಕ್ಷ
ಅಂಬಾನಿ ದೇಶದ ಪ್ರಧಾನಿಯಾಗುವುದಕ್ಕಿಂತ ಅದು ವಾಸಿ.
---------------------
ಅನಿಷ್ಟ, ಅಜ್ಞಾನ ನಿವಾರಿಸಿ ತತ್ವಜ್ಞಾನದ ಬೆಣ್ಣೆಯನ್ನು ಸಮಾಜಕ್ಕೆ ಹಂಚಬೇಕು
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಅದನ್ನು ಹಂಚುವಾಗಲೂ ಪಂಕ್ತಿ ಭೇದ ಜಾರಿಯಲ್ಲಿರುತ್ತದೆಯೇ?
---------------------
ಇನ್ನು ಮುಂದೆ ಭಾರತೀಯ ಅಪರಾಧಿಗಳಿಗೆ ದುಬ್ಯೆ, ಅಬುಧಾಬಿ ಆಯಕಟ್ಟಿನ ಜಾಗವಲ್ಲ
-ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಉತ್ತರ ಪ್ರದೇಶ ಇರುವಾಗ ದುಬೈ, ಅಬಧಾಬಿಯ ಅಗತ್ಯವೂ ಇಲ್ಲ.
---------------------
ಗಂಡ - ಹೆಂಡತಿ (ಕಾಂಗ್ರೆಸ್ - ಜೆಡಿಎಸ್) ಇನ್ನೂ ಒಂದಾಗಿಲ್ಲ; ಹಾಗಾಗಿ ಮಕ್ಕಳಾಗಿಲ್ಲ
- ಬಿ.ಜೆ.ಪುಟ್ಟಸ್ವಾಮಿ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ
ಆಪರೇಷನ್ ಕಮಲದ ಮೂಲಕ ಮಕ್ಕಳು ಮಾಡುವ ಉದ್ದೇಶವೇ?