ಓ ಮೆಣಸೇ…

Update: 2019-03-24 18:31 GMT

ಈ ಬಡ ರೈತನ ಮಗ ದೇವೇಗೌಡ 13 ಪಕ್ಷಗಳ ಜೊತೆ ಸೇರಿ ಸರಕಾರ ನಡೆಸಿದವನು - ದೇವೇಗೌಡ, ಮಾಜಿ ಪ್ರಧಾನಿ
  ಆ ಬಡ ರೈತನ ಮಗ, ಶ್ರೀಮಂತ ಆದ ಬಗೆಯನ್ನೂ ಒಂದಿಷ್ಟು ವಿವರಿಸಿ.

---------------------

ಲೋಕಸಭಾ ಚುನಾವಣೆಯಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ’ದ ಜೊತೆ ‘ಕಣ್ಣೀರು ಮುಕ್ತ ಕರ್ನಾಟಕ’ ಮಾಡಬೇಕಾಗಿದೆ - ಆಯನೂರು ಮಂಜುನಾಥ್, ವಿ.ಪ.ಸದಸ್ಯ
ಸದ್ಯಕ್ಕೆ ಚೌಕಿದಾರ ಮುಕ್ತ ದೇಶವನ್ನಾಗಿಸಲು ಜನ ತೀರ್ಮಾನಿಸಿದ್ದಾರೆ.

---------------------
ಕಾಂಗ್ರೆಸ್‌ಗೆ ಯಾರೂ ಶಾಶ್ವತ ಅಲ್ಲ - ಬಿ.ಶಿವರಾಂ, ಕೆಪಿಸಿಸಿ ಉಪಾಧ್ಯಕ್ಷ
ಕಾಂಗ್ರೆಸ್ ಕೂಡ ಯಾರಿಗೂ ಶಾಶ್ವತ ಅಲ್ಲ.

---------------------

ಬಿಜೆಪಿ - ಕಾಂಗ್ರೆಸ್ ಚಿಕ್ಕಪ್ಪ, ದೊಡ್ಡಪ್ಪ ಇದ್ದಂತೆ - ಎನ್.ಮಹೇಶ್, ಶಾಸಕ
ಬಹುಶಃ ಬಿಎಸ್ಪಿ ಅವುಗಳ ಬೀಗತ್ತಿ ಇರಬೇಕು.

---------------------

ಇನ್ನು 6ವರ್ಷಗಳಲ್ಲಿ ಪಾಕಿಸ್ತಾನ ಭಾರತದ ವಶವಾಗಿರುತ್ತದೆ - ಇಂದ್ರೇಶ್‌ಕುಮಾರ್, ಆರೆಸ್ಸೆಸ್ ಮುಖಂಡ
ಆರೆಸ್ಸೆಸ್ ಹೀಗೇ ಬೆಳೆದರೆ ಭಾರತವೇ ಇನ್ನೊಂದು ಪಾಕಿಸ್ತಾನವಾಗಿ ಮಾರ್ಪಾಡಾಗುತ್ತದೆ ಬಿಡಿ.

---------------------

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ - ಡಾ.ವಿಜಯ ಸಂಕೇಶ್ವರ, ಮಾಜಿ ಸಂಸದ
ಅಂಬಾನಿ, ಅದಾನಿಯೇ ಅದರ ಕುಟುಂಬ.

---------------------

ಪ್ರಧಾನಿ ಮೋದಿ ಸರಿಯಿಲ್ಲವೆಂದು ನನಗೆ ಮೊದಲು ಹೇಳಿದವರೇ ಜನಾರ್ದನ ಪೂಜಾರಿ - ಯು.ಟಿ.ಖಾದರ್, ಸಚಿವ
ಈಗ ಮೋದಿ ಸರಿಯಿದ್ದಾರೆ ಎಂದು ಹೇಳುತ್ತಿದ್ದಾರೆ, ಒಪ್ಪಿಕೊಳ್ಳುತ್ತೀರಾ?

---------------------

ಮುಖ್ಯಮಂತ್ರಿ ಕುಮಾರ ಸ್ವಾಮಿಗಿಂತ ಅವರ ಪುತ್ರ ನಿಖಿಲ್‌ರ ನೀತಿ, ನಡತೆ ಚೆನ್ನಾಗಿದೆ - ಬಸವರಾಜ ಹೊರಟ್ಟಿ, ವಿ.ಪ.ಸದಸ್ಯ
ಇನ್ನೂ ಅಧಿಕಾರ ಕೈಗೆ ಸಿಕ್ಕಿಲ್ಲವಲ್ಲ, ಅದಕ್ಕಿರಬಹುದು.

---------------------

ಈ ಬಾರಿ ನನ್ನನ್ನು ಸೋಲಿಸಲು ದಿಲ್ಲಿಯಿಂದ ಗಲ್ಲಿವರೆಗೆ ಸಂಚು ನಡೆಸಲಾಗುತ್ತಿದೆ - ಮಲ್ಲಿಕಾರ್ಜುನ ಖರ್ಗೆ, ಸಂಸದ
ಕಾಂಗ್ರೆಸ್‌ನೊಳಗಿನ ಸಂಚಿನ ಬಗ್ಗೆ ಹೇಳುತ್ತಿರಬೇಕು.

---------------------

ರಾಜ್ಯದ 28 ಕ್ಷೇತ್ರಗಳಲ್ಲೂ ಮೋದಿಯೇ ಅಭ್ಯರ್ಥಿ - ಆರ್.ಅಶೋಕ್, ಮಾಜಿ ಉಪ ಮುಖ್ಯಮಂತ್ರಿ
ರಾಜ್ಯದ 28 ಕ್ಷೇತ್ರಗಳ ಮತಗಳನ್ನೂ ಮೋದಿಯೇ ಹಾಕಲಿ ಬಿಡಿ.

---------------------

ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎನ್ನುವ ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ  -ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಮುಖಂಡ

ಅದು ಇವಿಎಂ ಬಗೆಗಿರುವ ವಿಶ್ವಾಸ.

---------------------

ನಮ್ಮ ಪಕ್ಷದಲ್ಲಿ ಮುಸ್ಲಿಮರು, ಕ್ರೈಸ್ತರಿಗೆ ಟಿಕೆಟ್ ನೀಡಿದರೆ ಗೆಲ್ಲುವುದು ಕಷ್ಟ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಸದ್ಯಕ್ಕೆ ನಿಮಗೆ ಟಿಕೆಟ್ ಕೊಟ್ಟರೆ ಗೆಲ್ಲುವುದು ಕಷ್ಟ ಎನ್ನುವುದು ಈಶ್ವರಪ್ಪ ಅಂಬೋಣ.

---------------------

ತಮ್ಮ ಮಕ್ಕಳು ವಾಚ್‌ಮೆನ್ ಆಗಬೇಕು ಎಂದು ಬಯಸುವವರು ಮೋದಿಗೆ ಮತ ನೀಡಿ -ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ಸದ್ಯಕ್ಕೆ ದೇಶದಲ್ಲಿ ವಾಚ್‌ಮೆನ್ ಕೆಲಸವಾದರೂ ಸರಿ, ಸಿಕ್ಕಿದರೆ ಸಾಕು ಎಂದು ಕಾಯುತ್ತಿರುವವರು ಕೋಟ್ಯಂತರ ಜನರಿದ್ದಾರೆ.

---------------------
ನಾನು ಮಣ್ಣಿನ ಮಗಳು -- ಸುಮಲತಾ, ಮಂಡ್ಯ ಪಕ್ಷೇತರ ಅಭ್ಯರ್ಥಿ
ಬಿಜೆಪಿಯ ಬೆಂಬಲದ ಬಳಿಕ ಕೆಸರಿನ ಮಗಳು ಎಂದರೆ ಹೆಚ್ಚು ಅರ್ಥಪೂರ್ಣ.

---------------------

ಅಂಬರೀಷ್ ಇದ್ದಿದ್ದರೆ ನನ್ನ ಪರ ಮತ ಕೇಳುತ್ತಿದ್ದರು - ನಿಖಿಲ್‌ಕುಮಾರಸ್ವಾಮಿ, ಮಂಡ್ಯ ಜೆಡಿಎಸ್ ಅಭ್ಯರ್ಥಿ
ಅಂಬರೀಷ್ ಇದ್ದಿದ್ದರೆ ಅವರೇ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಗಳಿತ್ತು.

---------------------

ನನಗೆ ಅಡುಗೆ ಮಾಡಲು ಬರುವುದಿಲ್ಲ, ಆದರೆ ಯಾವ ಅಡುಗೆ ಚೆನ್ನಾಗಿದೆ - ಚೆನ್ನಾಗಿಲ್ಲ ಎಂದು ಜಡ್ಜ್ ಮಾಡಬಲ್ಲೆ - ಪ್ರಿಯಾಂಕಾಚೋಪ್ರಾ, ನಟಿ
ನಟಿಯರು ಅಡುಗೆ ಬಗ್ಗೆ ಮಾತನಾಡುವ ಬದಲು, ತೊಡುಗೆಯ ಬಗ್ಗೆ ಮಾತನಾಡುವುದು ವಾಸಿ.

---------------------

ಕಾಂಗ್ರೆಸ್ ಮುಖಂಡರು ಕಾಗದದ ಹುಲಿಗಳು - ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ
ಬಿಜೆಪಿಯವರು ಡೈರಿಯ ಹುಲಿಗಳು.

---------------------

ಮೋದಿಗೆ ಪರ್ಯಾಯ ನಾಯಕ ನಾನಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ

ಬೇರೆ ಯಾರನ್ನೋ ಪರ್ಯಾಯವಾಗಿ ಗುರುತಿಸಿರುವಂತಿದೆ.

---------------------

ದೇವೇಗೌಡ ಮತ್ತು ಸಿದ್ದರಾಮಯ್ಯ ಒಬ್ಬರ ಕಾಲನ್ನೊಬ್ಬರು ಎಳೆೆಯಲು ಹವಣಿಸುತ್ತಾರೆಯೇ ಹೊರತು ಯಾವತ್ತೂ ಒಂದಾಗಲ್ಲ - ಶ್ರೀನಿವಾಸಪ್ರಸಾದ್, ಮಾಜಿ ಸಚಿವ
 ಅವರು ಒಂದಾದರೆ ನೀವು ನಿರುದ್ಯೋಗಿಗಳಾಗುತ್ತೀರಿ.
---------------------

ನಾನು ಬ್ರಾಹ್ಮಣ, ಚೌಕಿದಾರನಾಗಲು ಸಾಧ್ಯವಿಲ್ಲ
- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಶೋಕಿದಾರನಾಗಲು ಸಾಧ್ಯವಿದೆ 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!